ಕನಸಿಗೊಂದು ಭಾವಗೀತೆ
ನಿನ್ನ ಕಣ್ಣ ಕುಂಚದಲ್ಲಿ
ನೂರು ಬಣ್ಣ,ನೂರಾರು ಭಾವ!
ನನ್ನ ಮನದ ಭಿತ್ತಿಯಲ್ಲಿ
ಮೂಡಿ ನಿಂತ ಏನೋ ಮೋಹ!
ಏಕೆ ಕಾಡುವೆ ಕನಸೇ
ಹೀಗೇ ಸುಮ್ಮನೆ
ಜಾರಿ ಹೋಗಿದೆ ಹರೆಯ
ಎಂದೋ ಮೆಲ್ಲನೆ
ನೆನಪಿನಾಳದಲ್ಲಿ ಎಲ್ಲೋ
ಕವಲು ಒಡೆದ ದಾರಿಯೊಂದು
ಮಾಸಿ ಹೋದ ಹೆಜ್ಜೆಗುರುತ
ನುಂಗಿ ನಿಂತ ತೀರವೊಂದು
ಮರಳ ಮನೆಯದು
ಎಂದೋ ಚದುರಿ ಹೋಗಿದೆ
ಮಕ್ಕಳಾಟವೂ ಅಂದೇ
ಮುಗಿದು ಹೋಗಿದೆ
ನೆನಪು ನಿನಗೆ,ನೋವು ನನಗೆ
ಹರಿದುಹೋಗಿದೆ ಬಯಕೆಯು
ಎದೆಯ ಕಪ್ಪೆಚಿಪ್ಪಿನಲ್ಲಿ
ಚುಚ್ಚಿ ಬೆಚ್ಚನೆ ಪ್ರೀತಿಯು!
-ಸ್ನೇಹಲತಾ ದಿವಾಕರ್ ಕುಂಬ್ಳೆ
ಓಹ್ ಸ್ನೇಹಲತಾ ಸುರಹೊನ್ನಗೆ ಬಂದಿದ್ದು ಕುಶಿಯಾಯ್ತು. ಭಾವಗೀತೆ ಭಾವಪೂರ್ಣ.
ಧನ್ಯವಾದಗಳು ಅಕ್ಕ
Thank you
ಕನಸಿನ ನೆನಪುಗಳು ಮಾಸಿ ಹೊದರು ಬದುಕಿದ ಪ್ರೀತಿ ನೆನಪು ಉಳಿಯುವಂಥದು.ಇದು ನನ್ನ ಮನಸ್ಸು ಸೆರೆ ಹಿಡಿದ ಕವನ ಸುಪರ್ ಆಗಿತ್ತು.ಧನ್ಯವಾದಗಳು
Thank you sir
ಚೆನ್ನಾಗಿದೆ ಸ್ನೇಹಾ
Thank you
ಕವನ ಸುಂದರವಾಗಿದೆ.ಪಿ. ಬಿ.ಶ್ರೀನಿವಾಸ್ ಅವರು ಹಾಡಿರುವ “ನಿನ್ನ ಕಣ್ಣ ಕನ್ನಡಿಯಲ್ಲಿ”ಹಾಡು ನೆನಪಾಯಿತು.
Thank you
ಸುಂದರವಾದ ಕನಸಿನ ಭಾವಗೀತೆ ಭಾವಪೂರ್ಣವಾಗಿದೆ.
ಸುಂದರವಾದ ಭಾವಗೀತೆ ಭಾವಪೂರ್ಣವಾಗಿದೆ.