ಅಂಧಕಾರದ ವಿರುದ್ಧ
ಕರಗಿ ಹೋಗಲಿ ಬಿಡು
ಹಿಮಾಚ್ಛಾಧಿತ ಕನಸುಗಳು
ಇರಲಿ ಬಿಡು ನಾ ಕಾಣುವೆ
ಕಂಗಳಲಿ ಬೆಳಕಿನ ಪ್ರತಿಬಿಂಬವ
ಆಕಾಶದ ಸರಹದ್ದಿನಲಿ
ಸ್ಪರ್ಶಿಸಲು ಯತ್ನಿಸುವೆ
ಹಾರಾಡುವ ಗಾಳಿಪಟಗಳ
ಪ್ರಾಮಾಣಿಕತೆಯ ಪ್ರತಿರೂಪದಿ
ನಿರ್ಮಿಸುತ ಸಾಗುವೆ ಎತ್ತರದಿ
ಹೊಸ ಮಾನದಂಡಗಳ ಅನುಷ್ಠಾನದಲಿ
ಮುನ್ನುಗ್ಗುವೆ ಎಂದಿನ ಹುಮ್ಮಸ್ಸಿನಲಿ
ಮುಂದಿವೆ ಆರ್ಭಟಿಸುವ ದಿನಗಳು
ಕುಗ್ಗುವುದು ಜಾಯಮಾನವಲ್ಲ
ಬೆಳಗುವೆನು ನವರಂಗಗಳ ಬೆಳಕಿನಲಿ
ಮೊಳಗಿ ಸಾಗಿದೆ ಹೋರಾಟದ ಕಹಳೆ
ಜೀವವಿರೋಧಿ ಅಂಧಕಾರದೆದುರು
-ರಾಘವೇಂದ್ರ ದೇಶಪಾಂಡೆ, ಹೊಸಪೇಟೆ
ಆತ್ಮವಿಶ್ವಾಸ ಬಿಂಬಿಸುವ ಸಾಲುಗಳು
ಕನಸು ಕಳೆದರೂ ಕುಗ್ಗುವುದು ಬೇಡ
ಏಕೆಂದರೆ ಇದು ಧನಾತ್ಮಕ ಚಿಂತನೆ ನೋಡಿ
ಕನಸು ಕುಗ್ಗಿದರೂ ಅಂಧಕಾರದ ವಿರುದ್ದ ಹೋರಾಡುವ ಮನಕ್ಕೆ ನಮನ
Fantastic
ನಿರಂತರ ಮುನ್ನುಗ್ಗಿ ಸಾಧಿಸುವ ಛಲ, ಜೀವನಕ್ಕೆ ಬಲ. ಕವನ ಚೆನ್ನಾಗಿದೆ.
ಧನ್ಯವಾದಗಳು