ಕರೋ ನಾ ಕರೋನಾ
ಕರೋ ನಾ ಕರೋನಾ
ಮಾಡಬೇಡ ಮಾಡಬೇಡ
ಮಾಡಬೇಡಾ ಅಂದುದನ್ನು
ಮಾಡಿದುದರಿಂದಲೇ ಬಂದಿದೆ ಕೊರೋನ||
ಹಸೀಮಾಂಸ ಖಾವೋನ ಅಂದರೂ
ಡೋಂಟ್ ಕೇರ್ ಮೈ ಖಾವೂಂಗಾ
ಅಂತಾ ವೂಹಾನರು ಚಂಡಿ
ಹಿಡಿದುದರಿಂದಲೇ ಬಂದಿದೆ ಕೊರೋನ||
ವಕ್ಕರಿಸಿದ ಮಹಾಮಾರಿ ಕೊರೋನ
ಕಲಿಸಿತು ಪ್ರಪಂಚಕ್ಕೇ ಭಾರತದ ಸಂಸ್ಕೃತಿಯ
ಕೈ ಕುಲುಕುವ ಬದಲಿಗೆ ನಮಸ್ಕಾರ ಪದ್ದತಿಯ
ಸರ್ವಕಾಲಕ್ಕೂ ಕ್ಷೇಮಕರ ಸಂಸ್ಕೃತಿಯ||
–ಆರ್.ಎ.ಕುಮಾರ್
ಸಕಾಲಿಕ ಕವನ, ಮೆಚ್ಚುವಂತಿದೆ.