ವಿರಾಮ
ತನ್ನ ವೈಚಾರಿಕ ಆಲೋಚನೆ
ತನಗೇ ಭಾರವಾಯಿತೆ ?
ಏಕೋ ಅನಿಸಿತು ಅವನಿಗೆ
ಆಗ ನೆನಪಾಯಿತು
ಆ ಹಿರಿಯರ ಮಾತು
ಕಾಲು ಸರ ಸರ ತುಳಿಯಿತು
ದೇವಸ್ಥಾನದ ಮೆಟ್ಟಿಲು
ಒಳಹೋದ
ಚಿಂತನೆ ಲಗೇಜು
ಬಾಗಿಲಲೇ ಇಳಿಸಿಬಿಟ್ಟು.
ಕಿವಿಯ ತಣಿಸಿತು ಘಂಟಾನಾದ
ಶಿಲ್ಪಕಲೆ,ಕುಸುರಿ ,ಅಲಂಕಾರ
ಕಣ್ಣಿಗೆ ಸೊಬಗು ಮನೋಹರ
ಪಚ್ಚಕರ್ಪೂರ,ಪರಿಮಳ,ಅಗರು
ಆಘ್ರಾಣಿಸಿ ಸಂಭ್ರಮಿಸಿತು ಮೂಗು
ಪ್ರಸಾದ ಸಿಕ್ಕಿತು ಸಿಹಿ ಪೊಂಗಲು
ನಾಲಗೆಗೆ ಆಹಾ ರುಚಿಯ ಹೊನಲು!
ಮೂರ್ತಿಯ ಪಾದಸ್ಪರ್ಶವೂ ಲಭ್ಯ
ಅದು ಈ ದಿನದ ವಿಶೇಷ ಸೌಲಭ್ಯ
ಉತ್ಸಾಹ,ಉಲ್ಲಾಸದಿ ಹೊರಬಂದ
ವಿಚಾರಗಳ ಮತ್ತೆ ಹೆಗಲಿಗೇರಿಸಿದ
ಈಗವನು ಬಹಳ ನಿರುಮ್ಮಳ
ಚಿಂತನೆಗಳೀಗ ಮತ್ತಷ್ಟು ಆಳ
– ಮಹಾಬಲ
ಸುಂದರ ವಿಡಂಬನೆ.
ವಿಚಾರವಾದಿಗಳ ದ್ವಂದ್ವ ಮನಸ್ಥಿತಿಯ ಚಿತ್ರಣ ತುಂಬಾ ಚೆನ್ನಾಗಿ ಮೂಡಿಬಂದಿದೆ
ಸೊಗಸಾದ ವಿಡಂಬನೆ
ಎಡೆಬಿಡಂಗಿ ಮನಸ್ಥಿತಿಯು ಅನಾವರಣಗೊಂಡಿದೆ. ಚೆಂದದ ಕವನ.
ಸುಂದರ ವಿಡಂಬನೆ!
ಮನಸೇ ರಿಲ್ಯಾಕ್ಸ್ ಪ್ಲೀಸ್… ಅಲ್ವಾ ಸರ್
ಭಾರವಾದ ಯೋಚನೆಗಳನ್ನು ದೇವರ ಮೇಲೆ ಹೇರಿ ನಿರಾಳವಾದ ಮನ.. ಸುಂದರ ಕವನ.