ಕಾಮನಬಿಲ್ಲು

Share Button
ಕಾಮನ ಬಿಲ್ಲದು ಸಪ್ತ ವರ್ಣಗಳೆಂಬ ಬಣ್ಣ
ರಜಸ ತಮಸ್ ಸಾತ್ವಿಕ ಗುಣಗಳೆಂಬ ಬಣ್ಣ
.
ಭಕ್ತ ಮಹೇಶ್ವರ ಪ್ರಸಾದ ಪ್ರಾಣಲಿಂಗ
ಶರಣ ಐಕ್ಯವೆನ್ನುವ ಷಟ್ಸಲಗಳೆಂಬ ಬಣ್ಣ
ಕಾಮ ಕ್ರೋಧ ಲೋಭ ಮೋಹ ಮದ
ಮತ್ಸರವೆಂಬ ಅರಿಷಡ್ವರ್ಗಗಳೆಂಬ ಬಣ್ಣ//
.
ಒಡಲೆಂಬ ಕಡಲಿನಲ್ಲಿ ನಾವಿಕನಲಿ
ಸ್ತಬ್ದ ಅಲೆಗಳಲಿ ಮೌನವೆಂಬ ಬಣ್ಣ
ಬಡಬಾನಲದಲ್ಲಿ ಸುಡುವ ಪಂಜನು
ಹೊತ್ತಿಸಿದ ಕೆಂಪಿನ ಬೆಳಕೆಂಬ ಬಣ್ಣ//
.
ಶಾಂತಿದೂತನಾಗಿ ಗಗನದಿ ಹಾರಾಡುವ
ಪಾರಿವಾಳಗಳ ಶ್ವೇತವೆಂಬ ಬಣ್ಣ
ಕ್ರಾಂತಿಗಾಗಿ ದೇಹ ತ್ಯಾಗ ಮಾಡಿದ
ವೀರಯೋಧರ ನೆತ್ತರೆಂಬ ಬಣ್ಣ//
.
ಸೌಭಾಗ್ಯ ಗೃಹಿಣಿಯ ಫಾಲದಲಿ ಮಿನುಗುವ
ಕೆಂಪು ಕುಂಕುಮವೆಂಬ ಬಣ್ಣ
ವದನಕೆ ಮೆರುಗು ಕೊಟ್ಟು ಸೌಂದರ್ಯ
ವೃದ್ದಿಸುವ ಹಳದಿಯೆಂಬ ಬಣ್ಣ//
.
ಜೀವ ಜಲವದು ಸರ್ವಜೀವಿಗಳ ಸಲಹುವ
ಇದಕ್ಕಿಲ್ಲ ಆಕಾರವೆಂಬ ಬಣ್ಣ
ತರುಲತೆಗಳಿಗೆ ಪ್ರಕೃತಿಯದು  ಚೈತನ್ಯ
ನೀಡಿ ಹರಸಿದೆ ಹಸಿರೆಂಬ ಬಣ್ಣ//
.
ಪರೀಕ್ಷೆಯ ಯುದ್ದದಿ  ಮಗುವಿಗೆ ಬರೆಯಲು
ಲೇಖನಿಯಲಿ ನೀಲಿ ಕಪ್ಪೆಂಬ ಬಣ್ಣ
ಆಗಸದಿ ರವಿ ಜಾರುವ ಮುಸ್ಸಂಜೆ ಗೋಧೂಳಿಯ
ಸಮಯದಿ ಸಂಜೆಗೆಂಪೆಂಬ ಬಣ್ಣ//
.
ಅಭಿನವನು ಹೇಳುವ ಮನುಜ ಒಳಗೊಂದು
ಹೊರಗೊಂದು ವಿಚಿತ್ರವೆಂಬ ಬಣ್ಣ
ಜಗದ್ದೊದ್ದಾರಕ ಹರಿಯದು ನೀಲವರ್ಣ
ಹರನ ಮೈಯಲಿ ಬೂದಿಯೆಂಬ ಬಣ್ಣ//

.

-ಶಂಕರಾನಂದ ಹೆಬ್ಬಾಳ, ಇಲಕಲ್ಲ.

2 Responses

  1. ನಯನ ಬಜಕೂಡ್ಲು says:

    Beautiful. ಮನುಷ್ಯ ಸ್ವಾರ್ಥಿಯಾಗಿ ಒಮ್ಮೊಮ್ಮೆ ಬದಲಾಯಿಸತೊಡಗುತ್ತಾನೆ ಗೋಸುಂಬೆಯಂತೆ ಬಣ್ಣ.
    ಬಣ್ಣ ಬಣ್ಣವಾಗಿದೆ ಕವನ.

  2. Shankari Sharma says:

    ಸುಂದರ ಬಣ್ಣಗಳ ಚಂದದ ಕವನ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: