ಹೆಣ್ಣು ಜಗದ ಕಣ್ಣು
ಸಂಸಾರ ಸಾಗರದಲ್ಲಿ ಮಿಂದು
ಸಂತಸದ ಜ್ಯೋತಿ ಬೆಳಗುವಳು ನಾರಿ
ಅಲೆಗಳಂತೆ ಬರುವ ನೋವಲಿ ಬೆಂದು
ಮನೆಯವರಿಗಾಗುವಳು ಉಪಕಾರಿ
ಮಮತೆಯ ಮಡಿಲ ತುಂಬಿದ ಕುಲವಧು
ಸಕಾರಾತ್ಮ ಸದ್ಗುಣವ ಹೊಂದಿದ ಮಹಿಳೆ
ನಂಬಿಕೆಯ ಕಳಸವ ತುಂಬಿದಂತ ಮಧು
ಹಿರಿಕಿರಿಯರಿಗಾಸರೆಯಾದವಳು ಇವಳು
ಪತಿ ಇಚ್ಛೆಯರಿತು ಸಾಗಿಸೋ ಜೀವನ
ಬಾಳನೌಕೆಗೆ ಹೆಗಲು ಕೊಟ್ಟು ಬಾಳುವಳು
ಆರ್ಥಿಕತೆಯ ಅರಿತ ಮನೆಗವಳೆ ಪಾವನ
ಹೆಣ್ಣಾದವಳು ಮನೆಗೆ ಕಣ್ಣಾಗಿರುವಳು
ಸಮಾಮುಖಿಯಾಗಿ ಜನ ಸೇವೆಗೈದು
ಸಂಘಟನೆಯ ಕಾರ್ಯವ ಕೈಗೊಳ್ಳುವಳು
ಎಲ್ಲರಂಗದಲ್ಲಿಯೂ ತಾ ಸಾಧನೆಗೈದು
ಸರ್ವಶ್ರೇಷ್ಟ ಮಹಿಳೆ ಎಂದೆನಿಸುವಳು
ಇವಳ ಶಕ್ತಿ ಹೆಚ್ಚಿದೆ ಮುಗಿಲೆತ್ತರ ಹವಣಿಕೆ
ಪುರುಷನಂತೆ ಸರಿಸಮವ ನಿಂತಿಹಳು
ಕಷ್ಟದಲೂ ತೀರಿಸುವಳು ಮಕ್ಕಳ ಬಯಕೆ
ದಿಟ್ಟ ಹೆಜ್ಜೆ ಇಟ್ಟ ಜಗದ ಕಣ್ಣಿವಳು
-ಮಧುಮತಿ ರಮೇಶ ಪಾಟೀಲ,ಬಳ್ಳಾರಿ
ಹೆಣ್ಣಿನ ಉತ್ತಮ ಸ್ಥಾನವ ಬಿಂಬಿಸುವ ಕವನ ಚೆನ್ನಾಗಿದೆ. ಮಧುಮತಿಯವರಿಗೆ ಮಧುರವಾಗಿ ಸೂಚಿಸುವ ಅಭಿನಂದನೆಗಳು
ಧನ್ಯವಾದಗಳು ಸರ್
ಹೆಣ್ಣಿನ ಬದುಕಿನ ಪೂರ್ತಿ ಚಿತ್ರಣ
ಮಹಿಳಾ ದಿನದ ಶುಭಾಶಯಗಳು
ಮಹಿಳಾಮಣಿಯ ಮಹತ್ತತೆಯನ್ನು ಸಾರುವ ಸೊಗಸಾದ ಕವನ.