ಸ್ತ್ರೀ ಸ್ವಾತಂತ್ರ್ಯ
ಪ್ರಕೃತಿ ಪುರುಷ ಬ್ರಹ್ಮಾಂಡದ ಸೃಷ್ಟಿ.
ಪುರುಷನದೇ ಮೇಲುಗೈ, ಪ್ರಕೃತಿ ಅವಳ ಬಲಗೈ.
ಬಸವಳಿದ ಹೆಣ್ಣಿಗೆ ಬೇಕಿದೆ ಮನ್ನಣೆ
ಸ್ವಾತಂತ್ರ್ಯಕ್ಕೆ ಹಾಕಬೇಕು ಮಣೆ
ಮಾನಿನಿಗೆ ಬೇಕಿದೆ ಸಾಂತ್ವನ ಹಾಗೂ ಸ್ವಾತಂತ್ರ್ಯ
ಅನುಕಂಪ ಬೇಡ ಅವಕಾಶ ನೀಡಿ
ಸ್ವಾತಂತ್ರ್ಯ ಬೇಡುವುದಿಲ್ಲ
ಅದನ್ನು ಪಡೆಯುವುದು ನಮ್ಮ ಹಕ್ಕು
ಮಹಿಳೆ ಎಂಬುದು ಮಾತೆಯಾಗಿ ಮಮತೆಯ ಮೂರ್ತಿ
ದೈವದ ಸಾಕಾರ ಮೂರ್ತಿ
ಶಂತನುವಿನಿಂದ ದುಷ್ಯಂತನ ವರೆಗೂ ನಡೆದಿದೆ
ಮಹಿಳಾ ಶೋಷಣೆ
ಮಹಿಳೆಯನ್ನೂ ವೃದ್ಧರನ್ನೂ ಗೌರವಿಸಿ ಎಂಬ ಸರ್ಕಾರದ ಶೋಷಣೆ
ಅಬಲೆ ಎಂದು ತಿಳಿದು ಬೀಸುವರು ಮೋಸದ ಬಲೆ
ಸಬಲೆ ಎಂದು ಸಾರುತಿಹಳು ವೃತ್ತಿಯಲ್ಲಿ ಏರಿ ಉತ್ತುಂಗದ ಹುದ್ದೆ
ದಬ್ಬಾಳಿಕೆ ಸಹಿಸಿ ಮಾನವತೆಯ ತೆರೆದಿಟ್ಟು
ನೋವನುಂಗಿ ಸಂಕೋಚದ ಮುದ್ದೆ
ಬಸವಳಿದ ಹೆಣ್ಣಿಗೆ ಬೇಕಿದೆ ಮನ್ನಣೆ
ಅನಾಥ ಹೆಣ್ಣಿಗೆ ಬೇಕಿದೆ ರಕ್ಷಣೆ
ಹೆಣ್ಣು ಭ್ರೂಣಹತ್ಯೆ ನಿಲ್ಲಲಿ
ಹೆಣ್ಣಿನ ಸಂತತಿ ಸಾವಿರವಾಗಲಿ
ಇದೇ ನಮ್ಮ ದೈನಂದಿನ ಹಾಡು
ಓಬವ್ವ ಚೆನ್ನಮ್ಮನ ನಾಡು
ಮಳೆಗಾಗಿ ಮಾಡಬೇಕು ಪರ್ಜನ್ಯ ಹೋಮ
ಮಹಿಳೆಗಾಗಿ ನಡೆಸಬೇಕು ದೌರ್ಜನ್ಯ ಹೋಮ
– ಪರಿಮಳ, ಮೈಸೂರು.
ಒಳ್ಳೆಯ ಕವನ ಪರಿಮಳ ಅವರಿಗೆ ಅಭಿನಂದನೆಗಳು
Super, ಮಹಿಳೆ ಅಬಲೆಯಲ್ಲ ಸಬಲೆ ಅನ್ನುವುದನ್ನೂ ಮನದಟ್ಟಾಗಿಸುವ ಪ್ರಯತ್ನವಿದೆ ಕವನದಲ್ಲಿ. “ಮಹಿಳಾ ದಿನಾಚರಣೆಯ ಶುಭಾಶಯಗಳು “.
ಸ್ರೀ ಶೋಷಣೆಯ ವಿರುದ್ಧ ತೆಗೆದ ಧ್ವನಿ ..ಅನಂತ ಪ್ರತಿಧ್ವನಿಯಾಗಲಿ… ಸಕಾಲಿಕ ಕವನ ಚೆನ್ನಾಗಿದೆ.