ಬಂಧ
ಚಿತ್ತ ಭಿತ್ತಿಯೊಳೊಂದು
ನೆನಪು ಮನೆ ಮಾಡಿತ್ತು,
ಮಾತಾಗಿ ಹೊಮ್ಮದೇ
ಕವನವಾಯ್ತು!
ವರುಷಗಳ ಹಿಂದಕ್ಕೆ
ಮನವು ಓಡುತಲಿಂದು
ಮಡಿಲೊಳಗೆ ನಲಿದಿದ್ದು
ಮನಕೆ ಮುದ ತಂತು !!
ಅಮ್ಮನಾಗಿದ್ದಾನು
ಭಾವಫೂರ್ವದ ಘಳಿಗೆ ;
ನೋವಲ್ಲು ನಗೆ ಮೂಡಿ
ಅನುಭೂತಿಯಿತ್ತು !
ಬದುಕೊಂದು ಅನುಭೋಗ,
ಒಲವಿನಿಯನೊಳಿರಲು,
ಭೂತಿ ಅದು ಜೀವನೋತ್ಸಾಹ
ಹೆಚ್ಚಿಸಿತು!!
ಮನದ ತೂಗುಯ್ಯಾಲೆ ,
ತೂಗಾಡುತ್ತ ಅಲುಗುತ್ತ ;
ನಿನ್ನ ಹೆಜ್ಜೆಯ ತಾನ
ದನಿಯಾಗುತಿತ್ತೂ!
ಕ್ಪಣಕೊಮ್ಮೆ ಎಚ್ಚೆತ್ತ
ಎನ್ನೆದೆಯ ಗೂಡಿನಲಿ,
ಚಿತ್ತಾರವು ಮೂಡಿ
ತೂಗುತಿತ್ತು !!
ಕನಸಲೂ ನೀ ಬಂದು,
ಅಮ್ಮಾ ಎಂದುಲಿದಾಗ
ಬಿಗಿದಪ್ಪಿ ನನ್ನೊಲುಮೆ
ಮುತ್ತಿಕ್ಕುತಿತ್ತು !
ಉಷೆ ನಿಶೆಯು ಮೂಡುಪಡು
ಚಾoಬೋಲ ನೋಡುತ್ತ
ಕರುಳ ಬಂಧವ ನೆನೆದು
ಪ್ರಾರ್ಥಿಸುತಲಿತ್ತೂ..!!
–ಪ್ರಮೀಳಾ ಚುಳ್ಳಿಕ್ಕಾನ .
Beautiful. ಚಂದದ ಅನುಭೂತಿ
ಭಾವಪೂರ್ಣ ಕವನ .ಚೆನ್ನಾಗಿದೆ.
ಚಂದದ ಕವನ.