ಭಾವಾಗ್ನಿ
ತಮ್ಮನ್ನು ಸೆರೆಹಿಡಿದ
ಮುಳ್ಳಿನ ಬೇಲಿಗೆ
ಮೃದುತ್ವವನ್ನು
ಅದ್ದಬಲ್ಲವು ಹೂಗಳು
ಪಂಜರಗಳಿಗೆ
ಮಾತುಗಳನ್ನುಕಲಿಸಿ
ಚೈತನ್ಯವುಂಟುಮಾಡಬಲ್ಲವು
ಗಿಳಿಗಳು
ಅಪ್ಪಿಕೊಂಡ
ಹಾವುಗಳನ್ನು
ಸುವಾಸಿತಗೊಳಿಸಬಲ್ಲವು
ಕೇದಗಿಯ ಪೊದೆಗಳು
ನಾಟಿದ ಬೀಜಕ್ಕೆ
ಕಾಯವನೀಡಿ
ಹೂವಾಗುವುದು ಕಾಯಾಗುವುದು
ಕಲಿಸಬಲ್ಲದು ನೆಲ
ಭಾವಾಗ್ನಿಗೆ ಬಂಧನಗಳು
ಕರಗುತ್ತವೆ
ಕಟೆಕಟೆಯಲ್ಲೂ
ಚಲನವುಂಟಾಗುತ್ತದೆ
ಬೀಗಗಳು ಒಡೆಯುತ್ತವೆ
ಸೆರೆಮನೆಗಳು ತಿರುಗಿಬೀಳುತ್ತವೆ.
ತೆಲುಗು ಮೂಲ : ಗಾರ ಶ್ರೀರಾಮಮೂರ್ತಿ
ಅನುವಾದ : ರೋಹಿಣಿಸತ್ಯ
ಭಾವ ತೀವ್ರತೆ ಎಷ್ಟು ಬಲವಾಗಿರುತ್ತದೆ ಅನ್ನುವುದನ್ನು ಸಾರುವ ಸಾಲುಗಳು.
ಸುಂದರ ಭಾವಾನುವಾದದ ಚಂದದ ಕವನ