ತೊಟ್ಟಿಲೊಳಗಿನ ಕಂದ
ಪುಟ್ಟಹೆಜ್ಜೆ
ನಿಟ್ಟು ಬಂದೆ
ಅಟ್ಟ ವೇರಿ ಒಬ್ಬನೆ
ಜುಟ್ಟ ವಿಲ್ಲ
ಪಟ್ಟ ವಿಲ್ಲ
ಭಟ್ಟ ನಾಮದೋಳುನೀ!!
ಬಚ್ಚ ಬಾಯಿ
ಮೆಚ್ಚಿ ನಾನು
ಹುಚ್ಚಿ ಯಾಗಿ ಹೇಳುವೆ
ಕಿಚ್ಚ ನಂತೆ
ಲಚ್ಚ ನಂತೆ
ಅಚ್ಚು ಮೆಚ್ಚು ಮಾಡುವೆ!!
ಜಳಕ ಮಾಡಿ
ಪುಳಕ ಗೊಂಡು
ಕೊಳಕ ದೂರ ಮಾಡುವೆ
ಅಳುಕು ಇಲ್ಲ
ತಳುಕು ಇಲ್ಲ
ಒಳಕ ಕರೆದು ಒಯ್ವರು!!
ಹಾಲು ಕುಡಿಸಿ
ಲಾಲಿ ಹಾಡಿ
ಜೋಲಿ ನೀನು ಹೊಡೆಯುತ
ಬೇಲಿ ದಾಟಿ
ಸಾಲಿ ನೋಡಿ
ಲಾಲ ಲಾಲ ಎನ್ನುತ!!
ತುತ್ತು ಕೊಟ್ಟೆ
ಮುತ್ತು ಕೊಟ್ಟು
ಗೊತ್ತು ಮಾಡದೋಡಿದೆ
ಹೊತ್ತಿ ಗೊಮ್ಮೆ
ಮತ್ತೆ ಬಂದು
ಎತ್ತಿ ನಂತೆ ನಿಲ್ಲುವೆ!!
ಅಮ್ಮ ಎಂದು
ಮಮ್ಮು ಸಾರು
ಸುಮ್ಮ ನಾನು ಉಣ್ಣದೆ
ಗುಮ್ಮ ಬಂದು
ಮಮ್ಮು ಸಾರು
ಡುಮ್ಮ ನಾಗಿ ಉಣ್ಣ್ವನು!!
ನಕ್ಕೆ ನಾನು
ಅಕ್ಕಿ ಗಂಜಿ
ನೆಕ್ಕಿ ಕುಡಿದು ಒಬ್ಬನೆ
ಚಿಕ್ಕಿ ಎಣಿಸಿ
ಹಕ್ಕಿ ನೋಡಿ
ರೆಕ್ಕಿ ಇಲ್ಲ ಎನ್ನುವೆ!!
ರನ್ನ ನಂತೆ
ಚಿನ್ನ ನಾನು
ಚೆನ್ನ ನೆಂದು ಹೆಸರು
ನನ್ನ ಹೆಸರು
ಚನ್ನ ನಲ್ಲ
ಜನ್ನ ಪೊನ್ನ ಎಂದಿತು!!
-ಶಂಕರಾನಂದ ಹೆಬ್ಬಾಳ, ಇಲಕಲ್ಲ
ಸೊಗಸಾದ ವರ್ಣನೆ
ಪುಟ್ಟ ಮಗು, ಅದರ ಲಾಲನೆ ಪಾಲನೆ ಯನ್ನು ಮಾಡುವ ಹೆತ್ತಬ್ಬೆಯ ಶ್ರಮ, ಮುಗ್ದತೆ, ತುಂಟಾಟ ಇವೆಲ್ಲದರ ಜೊತೆಗೆ ಬೆಳೆಯುವ ಹಾಲ್ಗೆನ್ನೆಯ ಕಂದನ ಬಾಲ್ಯದ ಸುಂದರ ವರ್ಣನೆ.
ಮಗುವಿನೊಂದಿಗೆ ಮಗುವಾದ ಭಾವನೆ..ಕವನ ಚೆನ್ನಾಗಿದೆ.