ಸಂಕ್ರಾಂತಿ ಸಂಭ್ರಮ

Share Button
ನಮ್ಮ ಭಾರತ ದೇಶವು ಧಾರ್ಮಿಕ ಸಂಪ್ರದಾಯ ಹಬ್ಬಗಳ ತವರೂರು. ಸಾವಿರಾರು ಭಾಷೆಗಳ, ನೂರಾರು ಜನಾಂಗಗಳ, ಹತ್ತಾರು ಧರ್ಮಗಳ ಹೊಂದಿರುವ ವಿವಿಧತೆಯಲ್ಲಿ ಏಕತೆಯ ಸಾರುವ ದೇಶ. ವರ್ಷಕ್ಕೆ ನೂರೆಂಟು ಜಾತ್ರೆ, ಹಬ್ಬಗಳ ಆಚರಣೆಯ ದೇಶ. ಇಂತಹ ದೇಶದಲ್ಲಿ ಸಂಕ್ರಾಂತಿ ಹಬ್ಬವು ಅತ್ಯಂತ ಸಡಗರ ಸಂಭ್ರಮವನ್ನು ಹೊತ್ತು ತರುವ ಹಬ್ಬ.
.
ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಶ್ರಮಜೀವಿಗಳಾದ ಅನ್ನದಾತರು ವರ್ಷವೆಲ್ಲಾ ಹೊಲದಲ್ಲಿ ದುಡಿದು ಬೆಳೆ ಬೆಳೆಯುವರು. ಉತ್ತಮ ಫಸಲು ಕೈಗೆ ಬಂದಾಗ, ಭೂಮಿ ತಾಯಿಯ ಪೂಜೆಸಲು ಹಾಗೂ ಕೃಷಿ ಚಟುವಟಿಕೆಗಳಲ್ಲಿ ತಮಗೆ ನೆರವಾದ ಎತ್ತುಗಳಿಗೆ ಶ್ರಮಿಕ ಕೂಲಿಕಾರರಿಗೆ ಧನ್ಯವಾದ ಸಲ್ಲಿಸುವ ಹಬ್ಬವಾಗಿದೆ.  ಮಾಗಿಯ ಚುಮು ಚುಮು ಚಳಿಯ ಸಮಯದಲ್ಲಿ ಸುಗ್ಗಿಯ ಸಂಭ್ರಮದ ವಾತಾವರಣವು ಗ್ರಾಮೀಣ ಪ್ರದೇಶದ ಜನರಲ್ಲಿ ಮನೆ ಮಾಡುತ್ತದೆ.  ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂಬ ಸದಾಶಯವನ್ನು ಅರಿತು, ಸಹಬಾಳ್ವೆಯ ಜೀವನ ನಡೆಸಬೇಕೆಂದು ಸಾರುವ ಹಬ್ಬ ಸಂಕ್ರಾಂತಿ.

ಉತ್ತರಾಯನ ಪುಣ್ಯಕಾಲದಿ ಭಾಸ್ಕರನು ರಥಸಪ್ತಮಿ ಪಥದಲ್ಲಿ ಮಕರ ರಾಶಿ ಮನೆಯ ಪ್ರವೇಶವನ್ನು ಮಾಡುವ ಸಮಯವು ಮಣ್ಣಿನ ಮಕ್ಕಳ ಸುಗ್ಗಿಗೆ ಸಂಭ್ರಮವನ್ನು ತರುವ ಹಬ್ಬ ಸಂಕ್ರಾಂತಿ.

(PC :ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)

ಪುರಾಣದ ಪ್ರಕಾರ ಹಿಂದೊಮ್ಮೆ ಸಂಕರಾಸುರ ಎಂಬ ರಾಕ್ಷಸನನ್ನು ಆದಿಶಕ್ತಿಯೂ ಸಂಹಾರಿಸಿದ ಶುಭ ಗಳಿಗೆಯಂದು ಆದಿಶಕ್ತಿಯು ಸಂಕ್ರಾಂತಿ ಎಂಬ ಹೆಸರನ್ನು ಪಡೆದಳೆಂಬುವ ಕಥೆಯಿದೆ. ಸಂಕ್ರಾಂತಿ ದೇವತೆಯು ಕಾಲದ ಮಹಿಮೆಯ ಜಗದಿ ಸಾರುತ, ಕಾಲನ ಮೃತ್ಯುಬಂಧದಿಂದ ಪಾರಾಗುವ ಬಗೆಯನ್ನು ಜ್ಞಾನ ಬೋಧಿಸುವಳು.
ಸಂಕ್ರಾಂತಿ ಹಬ್ಬವು ಭೂಮಿಗೆ ಬಂದ ಮೇಲೆ ದಾನವ ಮಾಡಿದರೆ ಮಾನವರು ಭವದ ಬವಣೆ ಕಲೆ ತೊಳೆದುಕೊಳ್ಳಲು, ಬಾಗಿನವ ಗರತಿಯರಿಗೆ ಅರ್ಪಿಸಿ, ನರಜನ್ಮದ ಕರ್ಮವನ್ನು ಭಗವಂತನ ಚರಣಗಳಲ್ಲಿ ಕಳೆದುಕೊಳ್ಳುವ, ಜಗದ ಜೀವರಾಶಿಗಳಿಗೆ ಅನ್ನ ನೀಡುವ ರೈತರು ಕೃಷಿಯನ್ನು ಭೂಮಾತೆಯ ನಂಬಿ ಬೆಳೆಗಳ ಬೆಳೆಯುತ್ತಾರೆ. ಸಮೃದ್ಧ ಫಸಲು ಕೈಗೆ ಬಂದಾಗ ಸುಗ್ಗಿಯ ಖುಷಿ ಮೂಡುತ್ತದೆ.
.
ಸಹಬಾಳ್ವೆ, ಸಹೋದರತೆ ಬಿತ್ತುತ್ತ ಬರುವ ಸಂಕ್ರಾಂತಿ,  ಸರ್ವಜನಾಂಗದಿ ಭಾವೈಕ್ಯತೆ ಸಮೃದ್ಧಿಯ ಕ್ರಾಂತಿ ತರುತ್ತದೆ. ನಾವು ಎಳ್ಳು ಬೆಲ್ಲ, ಕಬ್ಬನು ಸರ್ವರೊಡನೆ ಹಂಚಿ ಸವಿಯೋಣ, ಎಳೆಯರ ಮನಸ್ಸನು ಹೊಂದಿ ನಾವೆಲ್ಲರೂ ಬಾಳೋಣ, ವಿಶ್ವವೆಲ್ಲವೂ ವಸುದೈವ ಕುಟುಂಬವೆಂಬುದ ತಿಳಿಯೋಣ, ಎಲ್ಲಿಯೇ, ಹೇಗೆ ‌ಇರಲಿ ಸನಾತನ ಸಂಸ್ಕೃತಿಯ ಸಾರೋಣ.
.

-ಶಿವಮೂರ್ತಿ.ಹೆಚ್.  ದಾವಣಗೆರೆ

6 Responses

  1. ಶಿವಮೂರ್ತಿ ಹೆಚ್ says:

    ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸುರಹೊನ್ನೆ ಬಳಗದ ಸಂಪಾದಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು

  2. Anonymous says:

    ತುಂಬಾ ಅಥ೯ಪೂಣ೯ ಬರಹದ ಮುಕಾಂತರ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮದ ತಿರುಳನ್ನು ಎಳೆಎಳೆಯಾಗಿ ಬಿಡಿಸಿರುವಿರಿ ಸರ್
    ಓದಿ ತುಂಬಾ ಖುಷಿಯಾತು.
    ಧನ್ಯವಾದಗಳು,

  3. ನಯನ ಬಜಕೂಡ್ಲು says:

    ಚೆನ್ನಾಗಿದೆ ಸರ್. ಒಂದೇ ಹಬ್ಬಕ್ಕೆ ಅದೆಷ್ಟೊಂದು ಹಿನ್ನಲೆಗಳು…? ಆದರೂ ಎಲ್ಲವೂ ಸುಂದರ

  4. Shankari Sharma says:

    ಸಂಕ್ರಾಂತಿ ಬಗೆಗಿನ ಸುಂದರ ಚಿತ್ರಣ, ಕುತೂಹಲಕಾರಿ ಪೌರಾಣಿಕ ಹಿನ್ನೆಲೆ ಸಹಿತದ ಚಂದದ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: