ಭಾರತಮಾತೆಯ ಪ್ರೇಮಸುತೆ
ಕನ್ನಡಿಗ ನಾನು *ಕನ್ನಡದ ಋಣವ*
ಕಡೆತನಕ ತೀರಿಸದಾದೆನು
ಕಡುಮೋಹದ ವ್ಯಾಮೋಹದ
ನುಡಿಗಡಲ ಈಜದಾದೆನು
ಧರೆಯ ದೇವತೆ ಪ್ರೀತಿಧಾತೆ
ಭಾರತಮಾತೆಯ ಪ್ರೇಮಸುತೆ
ನುಡಿಯು ನಿನ್ನದು ಸಿರಿಹೊನ್ನನುಡಿಯು
ಧಮನಿ ಧಮನಿಯಲಿ ನೀ ಬೆರೆತೆ
ಸುರಭಿ ನಿನ್ನಯ ಪ್ರೇಮಸೊದೆಯನು
ನೀಡಿ ನೀನು ನಮ್ಮನು ಬೆಳೆಸಿದೆ
ಮೊರೆಯಲೊಮ್ಮೆ ಒಲವಿನೊರತೆಯ
ಧಾರೆ ಚಿಮ್ಮುತ ಹರಸಿದೆ
ಜನುಮ ಜನುಮದ ಪುಣ್ಯವು
ನಿನ್ನ ಹೊನ್ನಬಸಿರಲುದಿಸಿ
ಧನ್ಯನಾದೆ ಮಾತೆಯೇ
ಯುಗಕು ಜಗಕು ಮನ್ವಂತರಕೂ
ಮಾನ್ಯಳಾದ ಗಾಥೆಯೇ
ಸರ್ವಹೃದಯ ಸಂಪ್ರೀತಿಯೇ.
-ಮಹಾಂತೇಶ ಹುನಗುಂದ, ಕೊಪ್ಪಳ
nice .ಭಾಷಾಭಿಮಾನ, ದೇಶಾಭಿಮಾನ ಎರಡನ್ನೂ ಸಾರುವ ಕವನ .
Thank you Madum
ಕನ್ನಡ ಪ್ರೇಮವನ್ನು ಸಾರುವ ಇಂತಹ ಬರಹಗಳು ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಲು ಪ್ರೇರಣೆಯಾಗಲಿ ಎಂದು ಆಶಿಸೋಣ ಅಲ್ಲವೆ ಮಹಾಂತೇಶಣ್ಣ ?
SUPER
ಕನ್ನಡ ತಾಯಿಗೆ ಕವಿ ನಮನ..ಚೆನ್ನಾಗಿದೆ.