ಪ್ರೀತಿ ನೀನಿಲ್ಲದೇ ನಾನಿರೆ…
ಪ್ರೀತಿಯಿಲ್ಲದೇ ಇರಲು ಸಾಧ್ಯವೇ? ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೇ ಉತ್ತರ, ಒಂದು ನಿಮಿಷ ಉಸಿರಾಡಿಸದೇ ಇರಬಲ್ಲವೇ ಎಂಬಂತೆ. ಪ್ರೀತಿ ಜೀವನದ ಓ.ಆರ್.ಎಸ್.ಇದ್ದಂತೆ ಆರೋಗ್ಯದ ಹಿತ ದೃಷ್ಟಿಯಿಂದಲೂ ಹೃದಯಕ್ಕೆ ಬೇಕು ಪ್ರೀತಿಯೆಂಬ ಸಂತೃಪ್ತಿ ವಿಟಮಿನ್ ಅದರಿಂದ ಮುಖದ ಸ್ನಾಯುಗಳು ನಗುವಿನಲ್ಲಿ ಹಿಗ್ಗುತ್ತವೆ. ವೈಜ್ಞಾನಿಕವಾಗಿ ಹೇಳುವಂತೆ ಹೃದಯಾಘಾತವಾಗುವ ಸಾಧ್ಯತೆ ಕೂಡ ಕಡಿಮೆನೆ, ಅಂತಹುದರಲ್ಲಿ ಪ್ರೀತಿ ಎಷ್ಟೊಂದು ಮುಖ್ಯ ನೋಡಿ.
ಆದರೆ ಇಂದಿನ ಆಧುನಿಕ ಯುಗದಲ್ಲಿಯ ಪ್ರೀತಿಯ ಪರಿ ತುಸು ಭಿನ್ನವೆಂದೇ ಹೇಳಬಹುದು,,ಅದು ವ್ಯಕ್ತಿಯ ವ್ಯಕ್ತಿತ್ವ,ಸಂಸ್ಕೃತಿ ಹಾಗೂ ಪರಿಸರದ ಪ್ರಭಾವದಿಂದ ಕೂಡಿರುತ್ತದೆ.ಹಾಗಾದರೆ ಪ್ರೀತಿಯನ್ನು ಹೀಗೆ ವಿಭಜಿಸಿದರೆ ಹೇಗೆ ? ನಿಸ್ವಾರ್ಥ ಪ್ರೀತಿ ಮತ್ತು ಸ್ವಾರ್ಥ ಪ್ರೀತಿ ವಿಚಿತ್ರವೆನಿಸುತ್ತದೆಯಲ್ಲವೇ? ಹೌದು, ಪ್ರೀತಿಸುವ ವ್ಯಕ್ತಿಯಿಂದ ಏನಾದರೂ ಲಾಭವಾಗುವಂತಿದ್ದು ಅದಕ್ಕಾಗಿ ಪ್ರೀತಿ,ಹೀಗಾದಾಗ ನಾವು ಮೇಲಿನ ವಿಭಜನೆಯನ್ನು ಸಮರ್ಥಿಸಿಕೊಳ್ಳಬಹುದೇನೋ ! ಇವುಗಳೆಲ್ಲದರ ಪರಿಧಿಯಿಂದ ಯಾವಾಗಲೂ ಹೊರಗಿರುವವರು ವಾತ್ಸಲ್ಯ ಮೂರ್ತಿಗಳಾದ ತಂದೆ- ತಾಯಿ ತಮ್ಮ ಮಕ್ಕಳ ಮೇಲಿಟ್ಟಿರುವ ಪ್ರೀತಿ ಬಹು ತಾಳ್ಮೆಯುಳ್ಳದ್ದಾಗಿದ್ದು,ಎಂದಿಗೂ ಬಿದ್ದು ಹೋಗುವಂತದಲ್ಲ, ಈ ಪ್ರೀತಿಯು ಹೊಟ್ಟೆಕಿಚ್ಚುಪಡಲ್ಲ, ಹೊಗಳಿಕೊಳಲ್ಲ ಇದು ಸದಾ ಅಮರ.
ಡಾ. ರೇಣುಕಾತಾಯಿ. ಎಂ.ಸಂತಬಾ
Nice madam ji.
ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಅನ್ನೋ ಹಾಡು ನೆನಪಾಯಿತು ನಿಮ್ಮ ಬರಹ ಓದಿ . ಪ್ರೀತಿ ನಮ್ಮ ಬದುಕಿನಲ್ಲಿ ಬಹಳ ಮುಖ್ಯ. ಪ್ರೀತಿಗೆ ಎಂತಹ ಕೆಟ್ಟ ಪರಿಸ್ಥಿತಿಯನ್ನೂ ಸರಿ ಪಡಿಸುವ ಶಕ್ತಿ ಇದೆ .
“ಪ್ರೀತಿ ನೀನಿಲ್ಲದೆ ನಾನಿರೇ ,
ನೀನೆ ಈ ಹೃದಯಕ್ಕಾಸರೆ,
ಇಡೀ ಜಗವೇ ನಿನ್ನ ಕೈ ಸೆರೆ,
ಮರಳುಗಾಡಂತೆ ಬರಡು ಬಾಳು ನಾ ನಿನ್ನ ಮರೆತರೆ”
ಪ್ರೀತಿ ಇಲ್ಲದ ಮೇಲೆ ಗೂ ಅರಳೀತು ಹೇಗೆ..।?
– ಜಿ ಎಸ್ ಶಿವರುದ್ರಪ್ಪ…
ಪ್ರೀತಿ, ವಾತ್ಸಲ್ಯಗಳ ಚಿಂತನೆಯ ಬರಹ ಚೆನ್ನಾಗಿದೆ.