ವಿಶೇಷ ದಿನ

ಅರಿವೆಂಬ ಹಣತೆ

Share Button

ಹಳೆಯ ತಾಮ್ರದ ಹಂಡೆ, ಕಟ್ಟಿಗೆ ಒಲೆ,
ಮರುಗುತ್ತಾ ಕೂರದಿರು ಸೇರಿತೆಂದು  ಮೂಲೆ,
ಹಬ್ಬವೆಂಬ ಸಡಗರ, ಸಂಭ್ರಮ ಆಗಮಿಸೋ ವೇಳೆ,
ಬದಲಾದ ಕಾಲದೊಡನೆ  ಸಾಗುವುದರಲ್ಲೇ
ಇಹುದು ಅರಿ ನೀ ಬದುಕಿನ ನೆಲೆ.

ಹೋಗುವುದೇ  ನಿಯಮ
ಕಾಲ ಸರಿದು ,
ಸಾಗಬೇಕಿಲ್ಲಿ ಬದಲಾವಣೆಯ ಜಗಕೆ ತನ್ನ ತಾನು ತೆರೆದು,
ಕೂರದಿರು ಸಾಧಿಸುತ್ತಾ  ಛಲ , ತನ್ನ ಹಠವ ಹಿಡಿದು,
ನಿನ್ನದೇ ಇಲ್ಲಿ ಸಂತಸ ಹಾಕಲು ಹೆಜ್ಜೆ
ಬದಲಾದ ಕಾಲಗತಿಯ  ಅರಿತು.

ನಿನ್ನೆಗಳೋ ಸುಂದರ ನೆನಪು,
ಹೊಸದರಲ್ಲೂ ಇಹುದು ನೋಡೋಂದು  ಹೊಳಪು,
ಹಳೆ ಬೇರು ಹೊಸ ಚಿಗುರೆಂಬ ಸಾಲಿನ ಕಂಪು,
ಗುರುತಿಸಿ ಸಂಭ್ರಮಿಸಿ ಹೊಂದು ಮನವೇ ಹುರುಪು.

ಇಂದು -ನಿನ್ನೆಗಳ  ನಡುವಣ,
ಸಿಲುಕಿ ಕಮರದಿರಲಿ ಜೀವನ,
ಹಚ್ಚುತ್ತಾ ಹಣತೆಯ ಜೊತೆ ಜೊತೆಗೆ
ಮನದಲ್ಲಿ ಅರಿವಿನ ಬೆಳಕನ್ನ ,
ಝಗಮಗಿಸಿ ಬೆಳಕಾಗಿಸು  ಬಾಳೆಂಬ ಹೂ ಬನ.

ಅಂಗಳದಿ ಎಳೆದ  ರಂಗೋಲಿ,
ಹಾಡಿಹುದು ಸಂತಸದ ಸುವ್ವಾಲಿ,
ತುಂಬಲಿ ಎಲ್ಲಾ ಹೃನ್ಮನಗಳಲಿ,
ನೆಮ್ಮದಿ, ನಗು, ಸಂತಸವ
ಸಾಲು ದೀಪಗಳ ದೀಪಾವಳಿ.

  –  ನಯನ ಬಜಕೂಡ್ಲು

8 Comments on “ಅರಿವೆಂಬ ಹಣತೆ

  1. ಕವನ ಸೊಗಸಾಗಿದೆ…ಹೌದು, ಹಂಡೆನೀರಿನ ಸ್ನಾನ ಈಗ ನಗರದ ಮನೆಗಳಲ್ಲಿ ನೆನಪು ಮಾತ್ರ..

  2. ಹಳೆಯದನು ಮರೆಯದೆ, ಹೊಸತನಕೆ ತೆರೆದುಕೊಂಡರೆ ಬದುಕು ನಿತ್ಯ ನೂತನ….ನಯನಾರಿಂದ
    ಚಂದದ ಕವನ

Leave a Reply to Vijaya S.P Cancel reply

 Click this button or press Ctrl+G to toggle between Kannada and English

Your email address will not be published. Required fields are marked *