ಬೆಳಕು-ಬಳ್ಳಿ

ಆದರ್ಶಗಳು

Share Button

ಅಲ್ಲದ್ದು ಇಲ್ಲದ ಸಮಯದಲ್ಲಿ ಕೇಳಿ
ನೆರವೇರಲೆಂದಳು ಕೈಕೆ
ಮಾತ್ಸರ್ಯ ಹೆಡೆಬಿಚ್ಚಿ ವಿಷ ಉಗುಳಿತು
ಹರೆಯ ಅಡವಿಗೆ ಕಾಲಿಟ್ಟಿತು, ಮುಪ್ಪು
ಮಸಣಕ್ಕೆ ಪಯಣಿಸಿತು ಬೇಡಿದವಳಿಗೆ
ಸಿಕ್ಕಿದ್ದು ವೈಧವ್ಯ

ಸರ್ವವೂ ಮಾಯಾರೂಪ, ತಿಳಿದೂ
ಜಿಂಕೆ ಬೆನ್ನಟ್ಟಿದ ರಾಮ,
ಇಲ್ಲದ್ದು ಇದೆಯೆಂದು ಅದೇ ಬಯಸಿದಳು ಸೀತೆ,
ಕೊಟ್ಟ ಕಾರ್ಯ ಬಿಟ್ಟು ಮತ್ತೊಂದು ಅರಸಿ ಹೋದ ಲಕ್ಷ್ಮಣ
ನಾವು?

ಇಷ್ಟಲಿಂಗ ಬೇಡಿ ಪಡೆದು,
ಕಷ್ಟಕ್ಕೆ ಸಿಕ್ಕು ಬಳಲಿ
ತಂಗಿಯ ಪ್ರಚೋದನೆಗೆ ಓಗೊಟ್ಟು,
ದುಷ್ಟ ಜಾಲ ಹೆಣೆದು ಸ್ತ್ರೀ ಅಪಹರಣ,
ರಾವಣನ ದುರ್ಮರಣ

ಆತ್ಮಬಲ ಸೀಮೋಲ್ಲಂಘನ ಮಾಡಿಸಿತು,
ಸಂಜೀವಿನಿ ಯನ್ನೂ ಹುಡುಕಿಸಿತು
ಭಕ್ತಿ, ಶಕ್ತಿಯಾಯಿತು,ಯುಕ್ತಿಯು ಆಯಿತು
ಜಗದ ದೀಪ್ತಿ ಯಾಯಿತು

ಕೇಳುತ್ತಾ, ನೋಡುತ್ತಾ ಬೆಳೆದ
ಆದರ್ಷಗರ್ಶಳೆಲ್ಲ ಅಕ್ಷರದ ಅಚ್ಚಾಗಿವೆ ಅಷ್ಟೇ
ಮಾಡಬಾರದ್ದೆ ರೂಢಿಯಾಗಿವೆ
ಮಾಡಬೇಕಾದದ್ದು ಮೂಲೆವಾಸ

ಕೈಕೆ,ರಾವಣ,ರಾಮಲಕ್ಷ್ಮಣ,ಸೀತೆ
ಮಾಡಿದ ತಪ್ಪುಗಳೇ ರೂಪ ಬದಲಿಸಿವೆ
ಸೆಕ್ಷನ್,ಕಾಯ್ದೆ, ಪರಿಚ್ಛೇದ, ಸಂಪುಟ
ಹೆಸರು ಬದಲಿಸಿದೆ ಗುಣ ಬದಲಿಲ್ಲ

ಹೆಸರು,ಹಣದ,ವೈಭವೀಕರಣ ಸರಿದಾರಿಯ
ಪಯಣಿಗನನ್ನು ದೃತಿಗೆಡಿಸಿದೆ
ದಾರಿಯ ಆಯ್ಕೆ ಸಿಕ್ಕಾಗಿದೆ
ಕೊನೆ ಗುಕ್ಕಿಗೆ ಬಂದು ಆಶ್ರಯಕ್ಕೆ ಕೈಚಾಚಿ

-ಜ್ಯೋತಿ ಎಸ್.ದೇಸಾಯಿ

4 Comments on “ಆದರ್ಶಗಳು

  1. ತುಂಬಾ ಚೆನ್ನಾಗಿದೆ.
    ಇಡೀ ರಾಮಾಯಣದ ತಿರುಳೇ ಮೇಳೈಸಿ, ಇಂದಿನ ಜೀವನಕ್ಕೆ ಕನ್ನಡಿಯಂತಿದೆ ಕಡೆಯ ಸಾಲುಗಳು

  2. ತುಂಬಾ ಚೆನ್ನಾಗಿದೆ . ಕೊನೆಯ ಪ್ಯಾರಾ – “ಹೆಸರು, ಹಣದ ವೈಭವೀಕರಣ ” ಬಹಳ ಇಷ್ಟ ಆಯಿತು .ಯಸ್ ಹಲವರಲ್ಲಿ ಈ ಗೊಂದಲವಿದೆ .

Leave a Reply to ರಮೇಶ್ ದೇವನೂರು Cancel reply

 Click this button or press Ctrl+G to toggle between Kannada and English

Your email address will not be published. Required fields are marked *