ಒಲವಿನ ಜೀವ
ನಿನ್ನ ಕಂಡಾಕ್ಷಣ ಮಿನುಗೋ
ಕಣ್ಣ ಮಿಂಚಲಿ ಕೇಳು
ನೀನೆಂದರೆ ಎಷ್ಟು ಇಷ್ಟವೆಂದು
ಅಲ್ಲಿಹುದು ಉತ್ತರ ,
ಸಂಶಯ ಪಡದಿರು ಒಲವೇ
ನಿನಗಿಹುದು ಜಾಗ ಈ ಹೃದಯದೊಳಗೆ
ಆ ಮೇರು ಪರ್ವತದಷ್ಟು ಎತ್ತರ .
ಹಾಂ……! ತೋರುವೆ ಮುನಿಸು
ನಿನ್ನಲ್ಲಿ ಹೆಜ್ಜೆ ಹೆಜ್ಜೆಗೂ
ಯಾಕೆಂದರೆ ,
ನೀನೆಂದರೆ ತೀರದ ಪ್ರೀತಿ,
ಕಾಡಿ ಬೇಡಿ ಸುತ್ತುವೆ
ನಿನ್ನ ಹಿಂದೆ ಹಿಂದೆ
ಎದೆಯೊಳಗೆಲ್ಲೋ ನಿನ್ನಿಂದ
ದೂರವಾಗೋ ಸಣ್ಣ ಭೀತಿ.
ದೂರ ಹೋಗಗೊಡದೆ
ಹತ್ತಿರವಾಗಲೂ ಬಿಡದೆ
ಏಕೆ ಒಲವೇ ನೀ ಹೀಗೆ ನನ್ನ
ಕಾಡುವೆ?,
ಸುಮ್ಮನಿದ್ದಲ್ಲಿ ಕೆಣಕಿ
ಸಿಡಿದಾಗ ಕಣ್ಣಲ್ಲಿ ಇಣುಕಿ
ಸೆರೆ ಹಿಡಿದು ಕಣ್ಣ ಮುಚ್ಚಾಲೆ ಆಡುವೆ.
ಬೆಸೆವ ಬಾಂಧವ್ಯಗಳು ನೂರಾರು
ಆದರೂ ಸೆಳೆದಿಲ್ಲ ನಿನ್ನಂತೆ ಯಾರೂ
ನಿನಗೇಕೆ ನನ್ನ ಬಂಧಿಸೋ ಬಯಕೆ ?,
ತುಟಿಯಂಚಿನ ಹೂ ನಗು
ಅದುವೇ ನಿನ್ನೀ ಮೊಗದ ಸೊಬಗು,
ಬರೆದಾಯಿತು ನಿನ್ನ ಹೆಸರಿಗೇ
ನನ್ನಿಡೀ ಬದುಕೇ.
– ನಯನ ಬಜಕೂಡ್ಲು
ವಾವ್ ತುಂಬಾ ಚೆನ್ನಾಗಿದೆ
Thank you
ನಿಮ್ಮ ಕವನ ಚೆನ್ನಾಗಿದೆ ನಯನಾ.
Thank you madam
ಒಲವಿಗೊಂದು ನಲ್ಮೆಯ ಸುಂದರ ಕವನ.
Thank you madam ji
ಸೊಗಸಾದ ಕವನ ಮೇಡಮ್..
Thank you ji….