ಬೆಳಕು-ಬಳ್ಳಿ

ನಿನ್ನ ಧ್ಯಾನದಲಿ

Share Button

.

ನಿನ್ನೊಳಗಿನ ಕವಿತೆಯ ಮಾತು
ಹೃದಯ ಸೇರಿತು ಹಾಡಾಗಿ
ನಲ್ಮೆಯ ಮಾತಾಯಿತು ಪಾಡಾಗಿ
ಹದವರಿತ ನಿನ್ನ ರಾಗ ಲಯದ ಕವಿತೆ
ಮೀಟಿತು ಹೃದಯ ವೀಣೆಯ.॥೧॥
.
ಎಷ್ಟೊಂದು ನೆನಪುಗಳ ಹೆಕ್ಕಿದೆ
ನೀನ್ನೀ ಹೃದಯದ ಗೂಡು
ಅದರೊಳಡಗಿದ ಕವಿತೆಯ ಮಾಡು
ನನ್ನೆದೆಯ ಗೂಡು ತುಂಬಿ ತುಳುಕುತಿದೆ ನೋಡು ॥೨॥
.
ಮನ ಬನದ ತುಂಬಾ ಶಬ್ದದ ಗೂಡು
ಮಾಮರದಿ ಉಳಿವ ಕೋಗಿಲೆಯ ಕಲರವ
ನಿನ್ನ ನನ್ನ ಹೃದಯ ವೀಣೆಯ. ಹಾಡು
ರಾಗ ತಾಣ ಮೇಳಗಳ ಜಾಡು
ಒಲಿವ ರಾಗಕೆ ಶಬ್ದಗಳ ಹಂಗಿಲ್ಲ ನೋಡು.॥೩॥
.
ನೆನೆವೆ ನಿನ್ನನೇ ಆ ರಾಗ ಆಲಾಪನೆಯಲಿ
ಗೋಧಿಯ ಬಣ್ಣದ ಚೆಲುವಿನ ಚೆಲುವಿಯ
ಬೀಸಿ ಬರುವ ಗಾಳಿಯಲಿ ನಿನ್ನ
ಮುಂಗುರುಳಿನ ಹಾರಾಟಕೆ
ಮನವೆಲ್ಲಾ ಸೋತು ಸೋನೆಮಳೆ ಹೊಯ್ಯುತಿದೆ॥೪॥
.
ಮೌನದಲಿ ನಾ ಬರೆವೆ ನಿನ್ನ ಮೇಲೊಂದು ಕವಿತೆ
ನಿನ್ನ ಧ್ಯಾನದಲಿ ಮುಳುಗೇಳುವ
ಹೊಸ ಭಾಷೆ ಬರೆಯುವ ಪ್ರೇಮ ಕವಿತೆ
ನೀನೊಲಿದರೆ ಸಾಕೆನಗೆ ಅದುವೇ ನನ್ನ
ಕವಿತೆಗೆ ಒಲಿದ ರಾಗವೆನ್ನುವೆ.॥೫॥.

.

-ಮರುಳಸಿದ್ದಪ್ಪ ದೊಡ್ಡಮನಿ ,ಹುಲಕೋಟಿ

3 Comments on “ನಿನ್ನ ಧ್ಯಾನದಲಿ

  1. ಸೊಗಸಾಗಿದೆ
    ಹೃದಯ ಸೇರಿತು ಹಾಡಾಗಿ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *