ಜೀವ ಜಲ

Share Button

ಉಕ್ಕೇರಿ ಹರಿಯುತಿದ್ದ ನದಿ , ಹಳ್ಳ , ತೊರೆ,
ಎಲ್ಲಿಯಾಯಿತು ಮರೆ ?,
ಬಾಳಲಾದೀತೇ ನೀರಿಲ್ಲದಿರೆ ?,
ನೀರೇ ಸಕಲ ಚರಾಚರಗಳಿಗೂ  ಆಸರೆ .

ಅತ್ಯಮೂಲ್ಯ ನೀರು,
ಬೇರೇನಿಲ್ಲದಿದ್ದರೂ ಇದರಿಂದ ಉಳಿಯಬಹುದು  ಉಸಿರು,
ಮರ ಗಿಡ ಬಳ್ಳಿಗಳಲ್ಲೂ  ಕೊನರಲು ಚಿಗುರು,
ಹುಡುಕುವುದು ನೀರನ್ನೇ  ಬೇರು.

ಹಿಂದೆ ತುಂಬಿ ತುಳುಕಾಡುತಿದ್ದ  ಕೊಳ,
ಇಂದು ಬರಡು ನೆಲ,
ಕಡಿಯುವುದೂ ಕಾಡುಗಳ ,
ಒಂದು ಕಾರಣ ಮಾಯವಾಗಲು  ಜಲ.

ಮಾಡಿರಣ್ಣ  ನೀರಿನ ಮಿತವ್ಯಯ,
ಇಲ್ಲದಿದ್ದಲ್ಲಿ ಆಗುವುದರಲ್ಲಿ  ನಾಶ ಇಲ್ಲ ಯಾವುದೇ ಸಂಶಯ,
ಈಗಲೇ ಹುಡುಕಿ ಇದಕ್ಕೊಂದು ಉಪಾಯ,
ಮುಂದಿನ ಪೀಳಿಗೆಗೆ  ನೀಡೋಣ ಸಮೃದ್ಧ  ನಾಳೆಯ.

ಕಂಡರೆ ಸಾಗುವ ಹಾದಿಯಲ್ಲಿ ,
ನಿಲ್ಲಿಸಿ ಪೋಲಾಗೋ  ನೀರನ್ನು ತಿರುಗಿಸಿ ನಲ್ಲಿ,
ಇರಲಿ ತುಸು ಭವಿಷ್ಯದ ಎಚ್ಚರ ಎಲ್ಲರಲ್ಲಿ ,
ಒಮ್ಮೆ ಕಳೆದುಕೊಂಡದ್ದು  ಸಿಗದು ಮತ್ತೆ ಮರಳಿ.

ಕೊರೆಯದಿರಿ  ಭೂಮಿ ತಾಯಿಯ ಸುಖಾ ಸುಮ್ಮನೆ,
ಅವಳಿಗೂ ಆಗುವುದು ವೇದನೆ,
ಇದಲ್ಲ ಬರೀ ಕಲ್ಪನೆ,
ಹೇಗೆ ಮಾಡೋಣ ಅವಳ ನೋವ ಬಣ್ಣನೆ?.

ನಾವೇ ಕಾರಣ ಈ ಭೂಮಿ ಬರಡಾಗಲು,
ಹತ್ತಿ ಅಂತರ್ಜಲ  ಕೊರೆವ  ಮರುಳು,
ಇಡೀ ಭೂಮಿಯೇ  ಬಂಜರಾಗಲು  ಮಳೆ ಹೇಗೆ ಸುರಿಸುವುದು ಮುಗಿಲು?,
ಆವರಿಸುವುದು ಖಂಡಿತಾ ಬರಗಾಲ
ಗೆಳೆಯರೇ ನಾವು ಎಚ್ಛೆತ್ತುಕೊಳ್ಳದಿರಲು.

ನೆಟ್ಟು ಅಲ್ಲಲ್ಲಿ ಗಿಡ ಮರ,
ಹೊರೋಣ ನೀರನ್ನು ಉಳಿಸೋ  ಭಾರ,
ಆ ಮರಗಳು ಹಬ್ಬಿ ತಮ್ಮ ಬೇರ,
ಮಾಡಬಲ್ಲುದು ನೀರಿನ ಕೊರತೆಯನ್ನು  ದೂರ.

ನೀರಿನ ಸಂರಕ್ಷಣೆಯ  ಇನ್ನೊಂದು ವಿಧಾನ,
ಜಲ ಮರುಪೂರಣ  ,
ವ್ಯರ್ಥವಾಗೋ ನೀರಿನ ಹರಿವನ್ನ,
ಹಾಯಿಸಿ ಅಂತರ್ಜಲ, ಬಾವಿ , ಕೆರೆಗೆ ಮತ್ತೆ ಬಳಸೋಣ .

ನಾಶವಾಗುವ ಮುನ್ನವೇ ಜೀವ ಜಲ,
ಬರಲಿ ಇನ್ನಾದರೂ ಜಾಗೃರತರಾಗೋ ಕಾಲ,
ಮತ್ತೆ ತುಂಬುವಂತಾಗಲಿ ಹಳ್ಳ ಕೊಳ,
ಆಗಷ್ಟೇ ಉಳಿಯುವುದು ಜೀವ, ತುಂಬುವುದು ಎಲ್ಲರ ತುತ್ತಿನ ಚೀಲ .

-ನಯನ ಬಜಕೂಡ್ಲು

1 Response

  1. Shankari Sharma says:

    ಜೀವಜಲ ಸೆಲೆ ಬತ್ತುತಿರೆ ..ನಮಗೆಲ್ಲಿದೆ ಈ ಭೂಮಿಯಲಿ ನೆಲೆ?? ಅರ್ಥವತ್ತಾದ ಕವನ ಮೇಡಂ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: