ಅಭಿನಂದನೆ ..

Share Button

ತಾಯ್ನಾಡಿಗಾಗಿ ನೀನಿಡುವ ದಿಟ್ಟ ಹೆಜ್ಜೆಗಳ ಹಿಂಬಾಲಿಸಲು
ನನಗೆ ಕಾಲ್ಗಳೇ ಇರದಿರೇನು …
ದೇಶಕಾಗಿ ದುಡಿವ ನಿನ್ನ ಕೈಗಳ ಕುಲುಕಿ ಅಭಿನಂದಿಸಲು
ನನಗೆ ಕೈಗಳೇ ಇರದಿರೇನು ..
ರಾಷ್ಟ್ರಪ್ರೇಮ ತುಳುಕಾಡುವ ನಿನ್ನ ಕಣ್ಗಳ ನೋಡಲು 
ನನಗೆ ಕಣ್ಗಳೆ ಇರದಿರೇನು …
ಜನ್ಮಭೂಮಿಗೆ ಮಿಡಿವ ನಿನ್ನ ಗುಂಡಿಗೆಯ ದನಿ ಕೇಳಲು
ನನಗೆ ಕಿವಿಗಳೇ ಇರದಿರೇನು ..
ಹಿಂದುಸ್ತಾನವು ಮರೆಯದ ನಿನ್ನ ಶೌರ್ಯನರಿಯುವ
ಸೂಕ್ಷ್ಮ ಸಂವೇದನೆ ನನಗಿಲ್ಲವೇನು …
ಹುಟ್ಟಿದ ಮಣ್ಣಿಗಾಗಿ ಪ್ರಾಣ ಪಣವಿಡುವ ಪರಮ ವೀರ ನೀನು
ಭಾರತ ಮಾತೆಯ ಯೋಧರ ವಿಜಯ ಮಾಲೆಯ ಹೆಮ್ಮೆಯ ಹೂ ನಾನು …

.

– ಭಾರತಿ, ಬೆಂಗಳೂರು 

4 Responses

  1. Hema says:

    ಕವನದ ಶೈಲಿ ಹಾಗೂ ಭಾವ ಆಪ್ತವಾಗಿದೆ.. ಸೂಪರ್

  2. Nayana Bajakudlu says:

    ವಾ…….ಹ್, ಗ್ರೇಟ್… ಬಹಳ ಚೆನ್ನಾಗಿ express ಆಗಿದೆ ಹೃತ್ಪೂರ್ವಕ ಅಭಿನಂದನೆಗಳು . ಬಹಳ ಸುಂದರ.

  3. Kantharaj Raj says:

    Beautiful expressions, nice..

  4. Shankari Sharma says:

    ವೀರ ಅಭಿಮನ್ಯು ಅಭಿನಂದನ್ . ಭಾವಪೂರ್ಣ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: