ನಿಷ್ಠಾವಂತರಿಗೆ ಕಾಲವಿಲ್ಲ
ಲಂಚಕೋರರ ಸಾಮ್ರಾಜ್ಯದೊಳು
ಸತ್ಯವಂತರಿಗೆ ಜಾಗವಿಲ್ಲ
ಹುಸಿನುಡಿಗರ ಜಾಗದೊಳು
ಬಾನಿಂದ ಮಳೆ ಸುರಿಸಲು
ಭೂಮಿ ನೀಡಿತೆ ಲಂಚ
ತನ್ನ ಕಿರಣಗಳ ತಾ ವಿಸ್ತರಿಸಲು
ರವಿ ಬೇಡಿದ್ದೇನು ಕೊಂಚ
ಸೃಷ್ಟಿ ತನ್ನ ಕಾರ್ಯಗಳ
ನಿಷ್ಠೆಯಿಂದ ಮಾಡುತ್ತಿರಲು
ಇಲ್ಲೆ ಹುಟ್ಟಿದ ಹುಲು ಮಾನವನಿಗೆ
ಈ ದರಿದ್ರ ತೆವಲು
ಗಳಿಸಿದ್ದನ್ನೆಲ್ಲಾ ಜೊತೆಗ್ಗೊಯ್ಯುವಂತಿದ್ದರೆ
ಮಸಣದ ಗೋರಿಗಳೆಲ್ಲ
ತಾಜಮಹಲುಗಳಾಗುತ್ತಿದ್ದವು
ನಾವು ನೀವೆಲ್ಲ ದೇವರಾಗುತ್ತಿದ್ದೆವು
ಅನಾದಿಕಾಲದಿಂದಲೂ ಬೋಧಿಸಿ
ಜೀವನದ ಅರ್ಥ ಭೇದಿಸಿ
ಹೊರಲಾರದಷ್ಟಿದೆ ಗ್ರಂಥ ಕಾವ್ಯ ಅರಗಿಸಿಕೊಳ್ಳಲಾರ ನವ್ಯ
ಸಮುದ್ರದ ಒಂದೆರಡು ಹನಿ ವಿಷವಾದರೆ ಚಿಂತೆಯಿಲ್ಲ
ವಿಷದ ಕಡಲೆ ಆದರೆ ಸುತ್ತೆಲ್ಲ ಮನುಕುಲಕ್ಕೆ ಉಳಿವಿಲ್ಲ
-ಜ್ಯೋತಿ ಬಸವರಾಜ ದೇವಣಗಾವ್.
ಬಹಳ ಸುಂದರವಾಗಿದೆ ಕವನ. ಪ್ರಸ್ತುತ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ . ವೆರಿ ನೈಸ್