ಅನ್ನದಾತ
“ಮೈ ತುಂಬಾ ಸಾಲ,
ಬಾಳ ಹಾದಿಯ ತುಂಬಾ ಸೋಲ,
ಕಂಡ ನಮ್ಮ ಅನ್ನದಾತನ ಗೋಳ,
ಕೇಳುವವರಾರು ಇಲ್ಲ”.
“ಕೃಷಿಕನ ನಿಟ್ಟುಸಿರಿನ ತಲ್ಲಣ,
ಸೋಕುವುದೆಂದು ಆಳುವವರನ್ನ?,
ನಂಬಿ ಪೊಳ್ಳು ಭರವಸೆಗಳನ್ನ,
ಮೂರಾಬಟ್ಟೆ ರೈತನ ಜೀವನ”.
“ಅರಿತಾಗ ಜಗ ಪರಿಶ್ರಮದ ಬೆವರಿನ ಬೆಲೆ,
ಕಾಣಬಲ್ಲನೇನೋ ನಮ್ಮ ಅನ್ನದಾತನು ಒಂದು ನೆಲೆ,
ಬೀಸಿ ಬದಲಾವಣೆಯ ಅಲೆ,
ಚಿಮ್ಮಲಿ ಅವನ ತುಟಿಯಂಚಲೂ ನಗುವಿನ ಸೆಲೆ”.
“ಎಷ್ಟಿದ್ದರೇನು ಆಸ್ತಿ, ಅಂತಸ್ತು , ಹಣ?,
ಹೊಟ್ಟೆ ಬಯಸುವುದು ಹಿಡಿ ಅನ್ನ,
ಮರೆತಲ್ಲಿ ರೈತ ತನ್ನ ನೇಗಿಲನ್ನ,
ಎಣಿಸಲಾರದಷ್ಟು ದುಸ್ತರ ಇಲ್ಲಿ ಎಲ್ಲರ ಜೀವನ”.
“ಕರಗಲಿ ಅವನ ಬಾಳಲ್ಲೂ
ಕಷ್ಟಗಳ ಕಾರ್ಮೋಡದ ಮುಸುಕು,
ಹಸಿರಾಗಲಿ ಇಳೆಯಂತೆ ಸುಂದರ ಬದುಕು,
ಅವನ ಬದುಕಲ್ಲೂ ಬೀಸಲು ಹಿತವಾದ ತಂಗಾಳಿಯ ತಂಪು,
ಮೂಡುವುದು ನಮ್ಮೆಲ್ಲರ ಬಾಳಲ್ಲೂ ಸಂತಸದ ಅರುಣೋದಯದ ಬೆಳಕು”.
-ನಯನ ಬಜಕೂಡ್ಲು.
ಸಕಾಲಿಕ
So nice