ಬೆಳಕು-ಬಳ್ಳಿ

ಮಡದಿಯ ಮಡಿಲೊಳ್     

Share Button

ಎನ್ನ ಹೃದಯದ ಹೃದಿರದೊಳ್
ಕಣ ಕಣದಿಂ ನಿನ್ನದೇ ತಂತುನಾದಂ
ಭವದೋಳ್ ಭೋರ್ಗರೆದು
ಹರಿವ  ಭಾಗೀರಥಿಯಂತೆ

ಎನ್ನುಸಿರಿಲ್ ಬೆರೆತಿರ್ಪ ಕಮಲವದನೆ
ಆ ಮಡಿಲೋಳ್ ಪವಡಿಸಲ್ಕೆ
ಸುರಲೋಕದಿಂ ಗಂಧರ್ವರಿಳಿದು
ಬಂದು ಸುಗಂಧ ದ್ರವ್ಯಂ ಪ್ರೋಕ್ಷಿಸಿ
ನೃತ್ಯಂ ಗೈಯಲ್ಕೆ ಏಕತಾನತೆಯಿಂ

ಈ ಭವದ ಜಂಜಡವಂ ಮರೆತು
ಮತ್ತೆ ಮಗುವಾಗ ಬಯಸುವೆನು
ಮಡದಿ ಎನ್ನೊಡತಿ ಮಗುವಾಗುವೆನು
ನಿನ್ನ ಆಲಾಪದೊಳ್…

-ದಯಾನಂದ ಎಲ್ ನಡುಮನಿ
.

3 Comments on “ಮಡದಿಯ ಮಡಿಲೊಳ್     

  1. ನೀವು ಹೇಳಲು ಹೊರಟಿದ್ದು ಓದುಗನಿಗೆ ತಲುಪುತ್ತದೆ. ಮತ್ತು ಕವನ ಕೂಡಾ ತುಂಬಾ ಚನ್ನಾಗಿ ಮೂಡಿ ಬಂದಿದೆ. ಬಳಸಿದ ಭಾಷೆಯ (ಪದಗಳ) ಬಗ್ಗೆ ಒಂದಿಷ್ಟು ಮಾಹಿತಿ/ವಿವರಣೆ ನೀಡಿದ್ದರೆ ಓದುಗನಿಗೆ
    ಇನ್ನೂ ಹೆಚ್ಚಿನ ಮಜಾ ಪಡೆಯಬಹುದು. ಸಾಧ್ಯವಾದರೆ ಇಲ್ಲೆ ಟಿಪ್ಪಣಿ ಮಾಡಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *