ಶಿಕ್ಷಕರ ದಿನ…
ಮಾಜಿ ಪ್ರಥಮ ಪ್ರಜೆ ರಾಧಾಕೃಷ್ಣರು..
ಜನುಮ ದಿನವನು ಆಚರಿಸೆ ಶಿಕ್ಷಕರು
ಉತ್ತಮ ಗುರು ಪಡೆದ ನಾವೇ ಧನ್ಯರು
ಜೀವನವ ರೂಪಿಸಿದ ಅವರೇ ಮಾನ್ಯರು
ಅಕ್ಕರೆಯಲಿ ಅಕ್ಷರವ ತಾವು ಕಲಿಸಿ
ತಪ್ಪು ಒಪ್ಪುಗಳ ಆಗಾಗ ತಿಳಿಸಿ
ತಿದ್ದಿ ತೀಡಿದ ಗುರುವು ದೇವ ಸಮಾನ
ನಿಮಗಿದೋ ನಮ್ಮೆಲ್ಲರ ಸಾಷ್ಟಾಂಗ ನಮನ
ವಿದ್ಯೆಯದು ಜೀವನದ ಭವ್ಯ ಜ್ಯೋತಿ
ಸನ್ಮಾರ್ಗದಲಿ ನಡೆಸೊ ದಿವ್ಯ ಪ್ರಣತಿ
ಬಿದ್ದಾಗ ಕೈಹಿಡಿದು ಮೇಲೆತ್ತಿ ನಡೆವ
ಗುರು ತಾನೆ ಶಿಷ್ಯನನು ಪ್ರೀತಿಯಲಿ ಕಡೆವ
ಉತ್ತಮ ಜೀವನಕೆ ವಿದ್ಯೆ ಸೋಪಾನ
ಸದ್ಬುದ್ಧಿಗೆ ಪಥವ ತೋರಿದರು ಗುರುಜನ
ತೀರದದು ಗುರು ಋಣವು, ಮಾಡುತಿರೆ ಮನನ
ಪೊದಮಡುತ ಮಾಡುವೆವು ಅನವರತ ನಮನ.
– ಶಂಕರಿ ಶರ್ಮ, ಪುತ್ತೂರು.
ಸಂದರ್ಭೋಚಿತ ಸುಂದರ ಕವನ
ಥ್ಯಾಂಕ್ಸ್ ಸಾವಿತ್ರಿ ಅಕ್ಕ
ಶಿಕ್ಷಕರ ದಿನಕ್ಕೆ ತಕ್ಕ ಕವನ.
ಧನ್ಯವಾದಗಳು