ಎಲ್ಲರೊಳಗೊಂದಾಗು ಮಂಕುತಿಮ್ಮ

Share Button

ನಾನು ಚಿಕ್ಕವನಿದ್ದಾಗ ಅಣ್ಣ ಹಾಕಿ ಕೊಳ್ಳುವ ಬಟ್ಟೆಗಳ ಮೇಲೆ ಕಣ್ಣು. ಅವನು ಧರಿಸುತ್ತಿದ್ದ ಸಫಾರಿ ಸೂಟ್ ಅಂತೂ ಈಗಲೂ ಕಣ್ಣಲ್ಲಿ ಕಟ್ಟಿದ ಹಾಗೆ ಇದೆ. ಅದರಲ್ಲಿನ ಜೇಬುಗಳು ಆಕರ್ಷಕವಾಗಿ ಕಾಣುತ್ತಿದ್ದವು.ಆದರೆ ನನ್ನ ಚಡ್ಡಿ ಜೇಬುಗಳೊ ತೂತು.

ಅಣ್ಣನಿಗೆ ಸಫಾರಿ ಸೂಟು ಕೊಡು ನಾನು ಒಂದು ಸಲ ಹಾಕಿಕೊಳ್ಳುತ್ತೇನೆ ಅಂತ ಕೇಳಲಾಗದ ವಯಸ್ಸು.ಅವನು ಅದರಲ್ಲಿ ಮಿಂಚುತಿದ್ದ. ವರುಷಗಳು ಕಳೆದಂತೆ ಅವನು ಧರಿಸುವುದನ್ನು ಬಿಟ್ಟ.ಇನ್ನು ಅದು ನನಗೆ ಎಂದು ಮನಸ್ಸಿನಲ್ಲೇ ಬೀಗುತ್ತಿದ್ದೆ.ಅಷ್ಟರಲ್ಲಿ ಮತ್ತೊಬ್ಬ ಅಣ್ಣ ಅದೇ ಸಮಯಕ್ಕಾಗೆ ಕಾಯುತ್ತಿದ್ದ ಅನ್ನುವುದು ಗೊತ್ತಾಗಿದ್ದು ಆ ಸಫಾರಿ ಸೂಟು ಅವನ ದೇಹದ ಮೇಲೆ ಕಂಡಾಗಲೇ.
.
ಕಾಯುವಿಕೆ ಮುಂದುವರಿಯಿತು…
.
ವರ್ಷ ಕಳೆದಂತೆ ಈ ಅಣ್ಣನಿಗೂ ಅನಿಸಿರಬೇಕು ಸಫಾರಿ ಸೂಟು ಮಾಸುತ್ತಿದೆ ಎಂದೂ ಅಥವಾ ಬದಲಾದ ಟೆರೆಂಡ್ ನಿಂದಲೊ ಅವನು ಧರಿಸುವುದನ್ನು ಬಿಟ್ಟಿದ್ದಾ. ಕಾಲ ಕಳೆದಂತೆ ಅದು ಹೇಗೊ ನನ್ನ ಬಳಿಗೆ ಬಂತೊ? ಸಫಾರಿ ಸೂಟು.. ಸ್ವರ್ಗಕ್ಕೆ ಮೂರೇ ಗೇಣು. ಸೂಟಿನ ಪ್ಯಾಂಟ್ ಮಾತ್ರ ಸಿಗಲ್ಲಿಲ್ಲ. ನನ್ನ ಆಕರ್ಷಣೆ ಇದ್ದದ್ದು ಬಹು ಜೇಬಿನ ಆ ಶರ್ಟಿನ ಮೇಲೆ.ಅದರ ತುಂಬಾ ದುಡ್ಡು ಹೊರ ಕಾಣುವಂತೆ  ತುಂಬಿ ಕೊಳ್ಳಬೇಕೆನ್ನುವ ಕನಸ್ಸು.ಅದನ್ನು ಧರಿಸುವ ಸಮಯ ಬಂದೇ ಬಿಟ್ಟಿತು. ಅದನ್ನು ಹತ್ತಿರದಿಂದ ಹಿಡಿದು ಕೊಂಡು ಅದರ ಅಂದ ಚೆಂದವನ್ನು ಕಣ್ಣಲ್ಲಿ ತುಂಬಿ ಕೊಳ್ಳುತ್ತಾ ಬಟ್ಟೆಯಿಂದ ಬರುತ್ತಿದ್ದ ನುಸಿ ಗುಳಿಗೆಯ ವಾಸನೆಯನ್ನು ಆಘ್ರಾಣಿಸುತ್ತಾ, ದೊಡ್ಡ  ದೊಡ್ಡ  ಸಫಾರಿ ಶರ್ಟಿನ ಗುಂಡಿಗಳನ್ನು ತಡವುತ್ತಾ  ಧರಿಸಿದೆ ದೇಹ ಶರ್ಟಿನ ಒಂದು ಕಡೆಗೆ ಸೇರಿ ಕೊಂಡಿತು. ಆಗ ಅಷ್ಟು ವರುಷವೂ ನನ್ನ ಕಣ್ಣುಗಳನ್ನು ತನ್ನತ್ತ ಮೌನವಾಗಿ ಸೆಳೆಯುತ್ತಿದ್ದ ಸಫಾರಿ ಶರ್ಟು ಮಾತು ಆಡಿತು ಶರ್ಟಿನ ಇನ್ನೊಂದು ಕಡೆಗೆ ಮತ್ತೊಬ್ಬರು ಬೇಕು. ಆಗ ಕಣ್ಣೆತ್ತಿ ಕನ್ನಡಿಯಲ್ಲಿ ನೋಡುತ್ತೇನೆ,ನಾನು S ಅದು XL….

 

(ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)

ಕಾಲ ಕಳೆದಂತೆ ನಾನು L ಆದೆ, ಸಂಬಂಧಗಳು XXL ಗಳಾದವು! ಅವರು ನನ್ನೊಳಗೆ ….

ಈಗ ಕಾಲ ಬದಲಾಗಿದೆ ಎಲ್ಲರೂ ಒಂದೇ. ನಿನಗೆ ಬೇಡದ್ದನ್ನು ,ಬಳಸಿದ್ದನ್ನು ಯಾರಿಗೂ ಕೊಡುವ ಹಾಗಿಲ್ಲ. ಬೇಕು ಎಂದು ಕೇಳುವವರ ಸಂಖ್ಯೆ ವಿರಳ. ಸ್ನೇಹಿತರೆ ಈಗ  ನನಗೆ ಬೇಕಿರುವುದೇ ಮತ್ತೊಬ್ಬರಿಗೂ ಬೇಕು ಆದರೆ ಅವರು ಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹಳೆಯದನ್ನು ಬಳಸಿದ್ದನ್ನು ನೀಡಬೇಡಿ, ಹೊಸದನ್ನು ಕೊಡಿ. ಮಳೆಯಲ್ಲಿ ಕೊಚ್ಚಿ ಹೋದ ಬದುಕು ಮತ್ತೆ ಬೆಚ್ಚನೆಯ ಹೊಸ ಬದುಕಾಗಲಿ.

ಕೊಡಗು ಮತ್ತೆ ಸಂಭ್ರಮಿಸಲಿ.

– ಶೈಲಜೇಶ
                       

6 Responses

  1. Shyamala Kashyap says:

    Superb sylejesh

  2. Nisarga says:

    Super shyl…but neevu Inna M, L aagilla

  3. Shalini J Goud says:

    Tumba channagide ede.. adu konege kodagu santrastarige jodisiddu.. tumba unexpected.. super

  4. sunil navale says:

    ಡಿಯರ್ ರಾಜಾಗ(shylu ),
    ಇಟ್ಸ್ ರಿಯಲಿ ಗುಡ್ ಒನ್. ಈ ಲೈಕ್ ಇಟ್.
    ಕೀಪ್ ಇಟ್ ಅಪ್. all the very best

  5. Shankari Sharma says:

    ಸುಂದರ ಬರಹ

  6. Rajesh says:

    Tumba chennagide Shyla. I didn’t know you write article so we’ll. Keep writing

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: