ಭಾರತಾಂಬೆಯೊಡಲೊಳಗಂದು ಜನಿಸಿತ್ತು ಆ ಅಮೂಲ್ಯ ರತ್ನ.ದೇಶ ಸೇವೆಯೆ ಈಶ ಸೇವೆ ಎಂದೆನುತ ಬಾಳಿದ ಮಹಾತ್ಮಚಾಣಾಕ್ಷ ನಡೆ,ಸೇನೆಗಿತ್ತವರು ಸಕಲ ಸ್ಪೂರ್ತಿ ನೈತಿಕ ಬೆಂಬಲ ರಕ್ಷಿಸೆ ದೇಶದ ತೀರ,ಶತ್ರುಗಳ ಹಿಮ್ಮೆಟ್ಟಿಸಿ ಯೋಧರೊಡಗೂಡಿಭಾರತಾಂಬೆಗೆ ವಿಜಯಮಾಲೆಯುಡಿಸಿದ ಧೀರ.ಯುವಶಕ್ತಿಗಿತ್ತಿದೆ ಅವರ ಸಚ್ಚಾರಿತ್ರ್ಯ ಆದರ್ಶಗಳ ಪ್ರೇರಣೆ.ಸಜ್ಜನಿಕೆಯೊಳಗಾತನದು ವಿರೋಧಿಗಳೇ ನಾಚುವಂತ ಸೈರಣೆಇತ್ತು ಆ ಸರಸ್ವತೀ ಪುತ್ರನಿಗೆ ಸಭಿಕರೆಲ್ಲರೂ ಮೂಕವಾಗಂತಹ ವಾಕ್ಚಾತುರ್ಯ.
,ಕವಿ ಹೃದಯ ತೆರೆದಿಡುವ ಸತ್ವಭರಿತ ಪದವುಳ್ಳ ಶಾಯರಿಯ ಮಾಧುರ್ಯ.ಲೋಕ ಬೆಳಗಿದ ಮುತ್ಸಧ್ದಿ ,ದೇಶದೊಳಿತಿಗೆ ಜೀವ ಸವೆಸಿದ ಧೀಮಂತನವ ಮಹಾನ್ ಸಾಧಕ.ಶಾಂತಿ ಸಂಯಮದೊಳಗದು ತನ್ನ ಯತ್ನ ನಿತ್ಯದೆ ಮುಚ್ಚಲು ದೇಶದಿ ಒಡಕ ಕಂದಕ.ಕರ್ಮ ಕಾಂಡದ ಅಂಟು ಜಾಡ್ಯಕೆ ಎಲ್ಲೂಸಿಲುಕದ ಮೇರು ವ್ಯಕ್ತಿಯ ತೃಪ್ತ ಜೀವನ.ಕಾಲ ಕರೆಯಲು ಮೌನವಾಗಿಯೆ ಮೋಕ್ಷಪಡೆಯುತ ,ಹೆತ್ತ ಮಾತೆಯೂ ಪಾವನ.
,ರಾಷ್ಟ್ರವೊಪ್ಪಿದ ವಿಶ್ವವಪ್ಪಿದ ಮೇರು ವ್ಯಕ್ತಿಗೆ ಭಾವಪೂರ್ಣ ನಮನವು.ದೀನ ದಲಿತಗೆ ಮಿಡಿದ ಹೃದಯವು,ದೇಶ ಸೇವೆಗೆ ತುಡಿವ ಸೂರ್ಯನು ಮತ್ತೆ ಹುಟ್ಟಲಿ ಇಲ್ಲಿಯೇ ಎನುವ ವಿದಾಯದ ಕ್ಷಣವಿದು.
.
-ಲತಾ(ವಿಶಾಲಿ) ವಿಶ್ವನಾಥ್