ಮೈತ್ರಿ….

Share Button

ಹೃದಯದಲ್ಲರಳುವ ಮಧುರ
ಭಾವನೆಗಳಿಗೆ
ಹಾಕದಿರಿ ಜಾತಿಯೆಂಬ
ಕಬ್ಬಿಣದ ಸಂಕೋಲೆ,,

ನೋಡವರ ಮೈತ್ರಿಯದು
ಭೂಮಿ-ಭಾನಿನ
ಕಣ್-ದೃಷ್ಟಿ ಬೀಳುವಂತ
ಸಂಗತಿ ಕಾಣಾ,,

ಪ್ರಕೃತಿಗಿದೆಯೇ ಮತಗಳ
ಹಂಗು,,ಗುಡ್ಡ-ಬೆಟ್ಟ
ನದಿ-ತೊರೆಗಳೆಲ್ಲ
ಜಾತಿಯಿಲ್ಲದ ಜೀವರಾಶಿಗಳು,,

ಜೊತೆ-ಜೊತೆಯಲಿ ನಡೆಯೆ
ನಾ-ಮುಸ್ಲೀಮ,,ನಾ-ಹಿಂದೂ,,
ಹಿಂದು-ಮುಂದೆಂಬ..
ಭಾವನೆಗಳಿಗೆ ಜಾಗವಿಲ್ಲ..

ಅನ್ನದ ಅಗುಳಿಗಿದೆಯೇ
ಜಾತಿ-ಮತದ ಹೊಟ್ಟು?
ಬೆಳೆ ಬೆಳೆವ ರೈತನಿಗಿಲ್ಲ
ಇಳೆಗಿಳಿಯುವ ಮಳೆಯ ಜಾತಿ,,

ಜಾತಿಯೆಂಬ ಮಳೆಗೆ
ಭಾವೈಕ್ಯದ ಬಾಳೆ ಎಲೆ
ಹಿಡಿಯೆ ಸಮರಸದ
ಬಾಳ್ವೆ ಕಾಣುವುದು ನೋಡಾ..

-ಸುಮಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: