ಪ್ರಕೃತಿ-ಪ್ರಭೇದ - ವಿಜ್ಞಾನ

ಈ ಹಣ್ಣು, ಭವಿಷ್ಯದ ಕಣ್ಣು

Share Button
ಉದಯ ಶಂಕರ ಪುರಾಣಿಕ

ಕಿತ್ತಳೆ ಹಣ್ಣಿನ ಸೇವನೆಯಿಂದ ನಮಗೆ ದೊರೆಯುವ ಪ್ರಯೋಜನ ಕುರಿತು ತಿಳಿದಿರುತ್ತೇವೆ. ಕೆಲವರು ಇದರ ಸಿಪ್ಪೆಯನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಾರೆ. ಆದರೆ ಸಾಮಾನ್ಯವಾಗಿ ಸಿಪ್ಪೆ ತ್ಯಾಜ್ಯವಾಗುತ್ತದೆ.

ವಿಜ್ಞಾನಿಗಳು ಈ ಹಣ್ಣಿನ ಸಿಪ್ಪೆ ಕುರಿತು ಹೊಸ ಮಾಹಿತಿಯನ್ನು ನೀಡಿದ್ದಾರೆ.

 

  1. ಹಣ್ಣಿನ ಸಿಪ್ಪೆಯನ್ನು ಒತ್ತಿದಾಗ, ರಸ ಚಿಮ್ಮುವುದನ್ನು ನಾವು ನೋಡಿರುತ್ತೇವೆ. ಇಷ್ಟು ಸೂಕ್ಷ್ಮಹನಿಗಳಾಗಿ ರಸ ಚಿಮ್ಮುವುದು ಹೇಗೆ ಎಂದು ತಿಳಿಯಲು ವಿಜ್ಞಾನಿಗಳು ಕಿತ್ತಳೆ ಹಣ್ಣಿನ ಸಿಪ್ಪೆಯ ಅಧ್ಯಯನ ನೆಡೆಸಿದರು.
  2. ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೈಕ್ರೋ ಜೆಟ್‍ಗಳಿರುವಂತೆ, ಸಿಪ್ಪೆಯನ್ನು ನಿಸರ್ಗ ಸೃಷ್ಟಿಸಿದೆ. ನಾವು ಸಿಪ್ಪೆ ಒತ್ತಿದಾಗ, ಈ ಮೈಕ್ರೋ ಜೆಟ್‍ಗಳಿಂದ ರಸವು, ಗಂಟೆಗೆ 40 ಕಿಲೋ ಮೀಟರ್‍ ವೇಗದಲ್ಲಿ ಚಿಮ್ಮುತ್ತದೆ.
  3. ಸೆಕೆಂಡ್‍ಗೆ 4000 ಜಿ ಒತ್ತಡದಲ್ಲಿ, ಇಷ್ಟು ವೇಗವಾಗಿ ಚಿಮ್ಮುವ ರಸ, ಅತ್ಯಂತ ಸೂಕ್ಷ್ಮ ಕಣಗಳಾಗುತ್ತದೆ.

ಆಸ್ತಮಾ ಮೊದಲಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಈಗ ಬಳಸುವ aerosol ಸ್ಪ್ರೇ ಆಧಾರಿತ ಚೌಷಧಗಳ ಬದಲಾಗಿ ಈ ಪರಿಸರಸ್ನೇಹಿ ಮತ್ತು ಹೆಚ್ಚು ಪರಿಣಾಮಕಾರಿಯಾದ ವಿಧಾನವನ್ನು ಬಳಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಮುಂಬರುವ ದಿನಗಳಲ್ಲಿ ಇಂತಹ ಔಷಧಗಳು, ಕಿತ್ತಲೆ ಹಣ್ಣಿನ ಸಿಪ್ಪೆಯ ವಿನ್ಯಾಸವನ್ನು ಬಳಸಿದರೆ ಆಶ್ಚರ್ಯವಿಲ್ಲ.

– ಉದಯ ಶಂಕರ ಪುರಾಣಿಕ
.

One comment on “ಈ ಹಣ್ಣು, ಭವಿಷ್ಯದ ಕಣ್ಣು

  1. ಗಂಟೆಗೆ ೪೦ ಕಿ ಮೀ ವೇಗದಲ್ಲಿ ಕಿತ್ತಳೆ ಸಿಪ್ಪೆಯಲ್ಲಿನ ರಸ ಚಿಮ್ಮುತ್ತದೆ ಎನ್ನುವುದೇ ಒಂದು ಸೂಜಿಗ. ತುಂಬಾ ಉಪಯುಕ್ತ ಮಾಹಿತಿ ಪುರಾಣಿಕ ಸರ್. ಪರಿಸರ ಸ್ನೇಹಿ ಔಷಧಿಗಳು ರೋಗಿಗೆ ಹೊಸ ಜೀವನ ನೀಡಲಿ ಎಂದು ಆಶಿಸುತ್ತೇನೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *