ಬೆಳಕು-ಬಳ್ಳಿ

ಹಾದಿ

Share Button

ಹಾದಿ ತೆರೆಯುತ್ತಲೇ ಇದೆ
ಮೆಟ್ಟಿಲು ಮೆಟ್ಟಿಲುಗಳಾಗಿ
ಇಕ್ಕೆಲಗಳಲ್ಲಿ ಹಸಿರು ಹೂ ಚಿಟ್ಟೆ
ನಿಲ್ಲುವಂತಿಲ್ಲ  ಮನ ಸೋತು
ಮೈಸೋತು
ಏರುದಾರಿಯಲಿ ಏರಲೇ ಬೇಕು
ಹಾಡು ಮುಗಿವವರೆಗೂ ಹಾದಿ
ತೆರೆದಿರುವ ನಂಬಿಕೆಯಲ್ಲಿ ಏರು
ಪಯಣ-‘ನಂಬಿ ಕೆಟ್ಟವರಿಲ್ಲ ‘

ಕೈಹಿಡಿದ ಪುಟ್ಟಿ ಮುಂದೆ
ಸಾಗಿದಂತೆಲ್ಲ ಬೆಳೆ ಬೆಳೆದು
ಮುಂದೊಂದು ಮೆಟ್ಟಿಲಲ್ಲಿ
ಪಾತ್ರ ಅದಲು ಬದಲು
ಅಮ್ಮನಿಗೆ ಪುಟ್ಟಿಯ ಹೆಗಲ ಆಸರೆ
ಅಲ್ಲಿಯವರೆಗೆ ಮುಂದೆ ಮೇಲೆ
ಎಲ್ಲೋ ಬೀಳುತ್ತಿರುವ ಇಷ್ಟು
ಬೆಳಕನ್ನೇ ನಂಬಿ ನೆಚ್ಚಿ
ಬಿಸಿಲೋ ಮಳೆಯೋ – ಹತ್ತುತ್ತಲೇ..
‘ನಾನ್ಯಃ ಪಂಥಾಃ..’

– ಡಾ. ಗೋವಿಂದ ಹೆಗಡೆ

4 Comments on “ಹಾದಿ

  1. ಹಾದಿ ಸವೆಸಲೇಬೇಕಾದ ಅನಿವಾರ್ಯತೆಯಲ್ಲೂ ಭರವಸೆಯ ಬೆಳಕು ಚೆಲ್ಲುವ ಕವಿತೆ ಸೊಗಸಾಗಿಸೆ

Leave a Reply to ಶುಭಾ ಎ.ಆರ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *