“ನಾನು”

Share Button

 

ಯಾವ ಗುರುವರ್ಯ, ಯಾವ ಕುರುಶ್ರೇಷ್ಠ,
ನನಗೆ ನಾನೇ ಸಮ, ಹಾಗೆಲ್ಲ ತಲೆಬಾಗಿಸಿದವನಲ್ಲ ನಾನು.
ದ್ರೌಪದಿಯ ಸೆರಗೆಳೆಸಿ ತೊಡೆತಟ್ಟಿ ಅಬ್ಬರಿಸಿದವನು ನಾನೆ.
ಆದರೂ….ಗದೆಗಳು ಘಟ್ಟಣಿಸುತ್ತಿರುವಾಗ
ಭೀಮನೆದೆಗೆ ತೊಡೆಯೊಂದೆ ಅಭೇಧ್ಯವಾಗಿರಲಿಲ್ಲ.
ತೊಡೆಯಿದೆಯೆಂದು ಹಾಗೆಲ್ಲ ತಟ್ಟಿಕೊಳ್ಳಬಾರದು!!         //1//

ಎಷ್ಟು ಬಾರಿ ಕತ್ತರಿಸಿದರೂ..
ಉತ್ತರವೆಂಬಂತೆ ಮತ್ತೆ ಮತ್ತೆ
ಬಂದು ಕೂರುವುದು ದಶಕಂಠನ ತಲೆ!!
ನಾಭಿಗೆ ಗುರಿಯಿಟ್ಟು ಹೊಡೆಯಬೇಕು.
ಅವನ್ಯಾರೋ ನರಹರಿಯ ಅವತಾರದವನು ಹೊಡೆದಂತೆ.
ನಾನು ನನ್ನನ್ನಾಳುತ್ತಿರುವವರೆಗೂ
ನಾನು ನಾನಲ್ಲ.                                               //2//

ಬೆಂಕಿಗೆ ಸುಡುವುದೆಂದರೇ ಸಡಗರ,
ಚಿತಾಗಾರದಲ್ಲಿ ಎಲ್ಲಾ ಶವಕ್ಕೂ ಒಂದೇ ದರ.
ನಾನು ನನ್ನೊಳಗಿರುವವರೆಗೂ
ನಾನು ನಾನಲ್ಲ.
ನಾನು ನಾನಾಗಿ ಬದುಕಲು
ನನ್ನೊಳಗಿನ ನಾನು ಸಾಯಲೇಬೇಕು.      //3//

                                  

.

 –ಶರತ್ ಪಿ.ಕೆ. ಹಾಸನ.

3 Responses

  1. Excellent…When Ego gets in.God goes out
    When Ego goes out.God gets in.

  2. Shylajahassan says:

    Very nice

  3. Lakshmana says:

    Good mesage.socity

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: