ಕಂದ-ಕರು
ಮುದ್ದಾದ ಕಂದನೇ
ನಿನ್ನಂತೆ ಚೆಲುವಿ ಈ
ಮುದ್ದಾದ ಕರುವು.
ಅಚ್ಚ ಬಿಳುಪಿನ
ಮಲ್ಲಿಗೆಯಂತೆ
ಕಂಪ ಬೀರುವ ಕರುವಿದು
ನಿನ್ನ ನಿತ್ಯದೊಡನಾಡಿಯೇ?
ಅವಳ ಪಾಲಿನ
ಹಾಲಿನ ಕುಡಿದು ನೀ
ಬೆಳೆಯುತಿರಲು
ಕೊಡುವೆಯೇನು ಅವಳಿಗೂ
ಅಮ್ಮ ನಿನಗಿತ್ತ
ತಿನಿಸಿನಲೊಂದು ಪಾಲನ್ನು?
ಅಮ್ಮನೆದೆಹಾಲು ಕುಡಿದ
ಹರುಷದಿ ಕರುವು ಅಂಗಳದಿ
ಅತ್ತಿತ್ತ ಓಡಿ ನಲಿಯುತಿರೆ
ನೀನೂ ಕೈ ತಟ್ಟಿ ಕೇಕೆ ಹಾಕುತ
ಅವಳ ಜೊತೆಯಾಡಿ
ಬಳಲಿ ಮಲಗಲವಳು
ಮಲಗಿದೆಯೇನು ನೀನೂ
ಅವಳ ಬಳಿಯಲ್ಲೇ?.
ಒಡಹುಟ್ಟುಗಳಂತಿರುವ
ನಿಮ್ಮ ಸ್ನೇಹಪರತೆಯನು
ಕಂಡು ಮನವು ಸಂತಸದ
ಗೂಡಾಗಿಹುದುಇಂದು.
ಬೆಳೆಯುತಿರಲಿ ಹೀಗೇ
ಈ ಸ್ನೇಹ ಸಂಬಂಧ
ಅಂಕುರಿಸಲಿ ಎಲ್ಲರೊಳು
ಗೋಪ್ರೇಮ ಇದರಿಂದ…
.
– ಅನ್ನಪೂರ್ಣ, ಕಾಸರಗೋಡು
ಮಗು ಮತ್ತು ಕರುವಿನ ನಿಷ್ಕಲ್ಮಶ ಪ್ರೀತಿ, ಮುಗ್ಧತೆಯನ್ನು ಬಿಂಬಿಸುವ ಚಿತ್ರವೂ, ಕವನವೂ ಆಪ್ತವೆನಿಸಿತು.