ಕನ್ನಡಿ
ಇವಳೆನ್ನ ಗೆಳತಿ
ಜೀವದಾ ಗೆಳತಿ.
ಇವಳೇ ನಾನು
ನಾನೇ ಇವಳು
ನಾ ಕುಣಿದಾಗ
ಕುಣಿವವಳು
ಮುನಿಸಿದರೆ
ಮುನಿಯುವವಳು
ನಾ ನಕ್ಕಾಗ
ನಗುವವಳು
ನನ್ನ ಅತ್ತಾಗಲೂ
ಅಳುವಳಿವಳು
ಹೇಗೆ ಸಹಿಸಲಿ ನಾ
ಇವಳ ಅಳುವ ನೋಡಿ
ಅದಕೆಂದೇ ಮಾಡಿದೆನು
ಅಚಲ ನಿರ್ಧಾರವನೊಂದ
ನೀನೆಂದೂ ನಗುತಿರಬೇಕು
ಗೆಳತೀ ಅಳಲಾರೆ ನಾನೆಂದೂ.
-ಅನ್ನಪೂರ್ಣ