ಬಿಸಿಲ ತಾಪ
ಬಿಸಿಲ ತಾಪಕ್ಕೆ
ಬುವಿಯು ಬಳಲಿ
ಬೆಂಡಾಗಿದೆ ಬರಡಾಗಿದೆ
ದಯಮಾಡೋ ಮೇಘ ಬಂದುವೆ.
ಇಳಿಸಂಜೆ ಹೊತ್ತಲ್ಲು
ಬಿಡದೆ ನಿಂತಿಹೆನು ಇಲ್ಲಿ
ಪುಟ್ಟ ಮೋಡವನು ಕಂಡು
ನಂಬಿಕೆಯ ಮನದೊಳಿಟ್ಟು.
ಪುಟ್ಟ ಕಂದಮ್ಮಗಳಿವರ
ಬದುಕ ಕತ್ತಲೆಯಾಗಿಸಬೇಡ
ಕಂಡ ಬಣ್ಣದ ಕನಸುಗಳ
ಕಮರಿ ದೂರ ತಳ್ಳಬೇಡ
ಹನಿಸಿದರೆ ಸಾಕು ಹನಿ ಮಳೆಯ
ಬಿತ್ತಿ ಬೆಳೆಯುವೆನು ಅನ್ನವನು
ಬುವಿ ಮಡಿಲಿಗೆ ಹಸಿರ ತೊಡಿಸುವೆನು
ಕಳೆಯದಿರು ಎನ್ನ ವಿಶ್ವಾಸವನು.
– ಅನ್ನಪೂರ್ಣ, ಕುಂಬಳೆ