ಬೆಳಕು-ಬಳ್ಳಿ

ಶರಣು ಶರಣೆಂಬೆ

Share Button


ಶಿವಕುಮಾರ ಗುರುಗಳಿಗೆ

ಶಿಸ್ತಿನ ಸಿಪಾಯಿಗೆ
ಸಾಮಾಜಿಕ ಕ್ರಾಂತಿಯ ಹರಿಕಾರನಿಗೆ
ಶತಾಯುಷಿಗೆ
ನಡೆದಾಡುವ ದೇವರಿಗೆ , .
ಮನೆ ಮನೆಗೆ ತೆರಳಿ ಜೋಳಿಗೆ ಹಿಡಿದು ಭಿಕ್ಷೆ 
ಬೇಡಿದಿರೀ,
ನಿಸ್ವಾರ್ಥ ಸೇವೆಯಿಂದ ಸಿದ್ದಗಂಗಾ ಮಠದ ಏಳ್ಗೆಗೆ
ಶ್ರಮಿ ಸಿದಿರಿ,
ಮಠವನ್ನು ಮಾದರಿ ಮಠವನ್ನಾಗಿಸಿದಿರಿ,
ಮತ್ತೊಬ್ಬರಿಗೆ ಮಾದರಿಯಾದಿರಿ,
 .
ಬಡವರ,ಅನಾಥರ,ಹಳ್ಳಿಗರ ಕಣ್ಣಾದಿರಿ,
ಜಾತಿ ಮತ ಪಂಥಗಳ  ಆಚೆ ನಿಂತು ಯೋಚಿಸಿದಿರಿ,
ಲಕ್ಸಷಾಂತರ ಮಕ್ಕಳ ಬದುಕಿಗೆ  ದಾರಿದೀಪವಾದಿರಿ,
ಸಕಲರ ಮನಗೆದ್ದು 
ದೀನಬಂಧು ಹಾಗೂ ಮಹಾಮಾನವತಾವಾದಿ ಎನಿಸಿದಿರಿ,
.
ಅನ್ನ,ಆಶ್ರಯ,ಜ್ಞಾನ ಎಂಬ ಮೂರು ದಾಸೋಹಗಳ ಮೂಲಕ
ಹೊಸ ಕ್ರಾಂತಿಯನ್ನೇ ಉಂಟು ಮಾಡಿದಿರಿ,
ಶಿಸ್ತುಬದ್ದ ಜೀವನ ಹಾಗು ಕಾಯಕದ ಮೂಲಕ
ಕರ್ಮಯೋಗಿಯೆನಿಸಿ ವಿಶ್ವಖ್ಯಾತರಾದಿರಿ,
 .
ಹೆಮ್ಮೆಯಿದೆ ನಮಗೆ ನಿಮ್ಮನಿಸ್ವಾರ್ಥ ಸೇವೆಯ ,ಬಗ್ಗೆ  
ಹೆಮ್ಮೆಯಿದೆ ನಮಗೆ ನಿಮ್ಮ ಶಿಸ್ತುಬದ್ದ ಜೀವನದ , ಬಗ್ಗೆ 
ಹೆಮ್ಮೆಯಿದೆ ನಮಗೆ ನಿಮ್ಮ ಕಾಯಕದ ,ಬಗ್ಗೆ 
 .
ಹೇ ನಡೆದಾಡುವ ದೇವನೇ,
ನಿಮಗೆ ನಮ್ಮೆಲ್ಲರ ಹೃತ್ಪೂರ್ವಕ ವಂದನೆ,

ಅಭಿವಂದನೆ……………

– ಮಾಲತೇಶ ಹುಬ್ಬಳ್ಳಿ

 

2 Comments on “ಶರಣು ಶರಣೆಂಬೆ

  1. Congratulations Malatesh for your excellent poem published in the recent edition of Surahonne.

    Please keep up the tempo.We wish more and more such beautiful poems to flow from u and find place in everyone’s heart.

    Wish u good luck.

    Prakash Deshpande

  2. ಪ್ರೀಯ ಮಾಲತೇಶ್ ,. ಅದ್ಭುತ ರಚನೆ . ನಡೆದಾಡುವ ದೇವರನ್ನು ಪ್ರತ್ಯಕ್ಷ ನೋಡಿದಾ ಅನುಭವವಾಯಿತು ,
    ನಿಮ್ಮ ಮಾತೋಶ್ರೀ ಶ್ರೀಮತಿ ಕೃಷ್ಣಾಬಾಯಿಯವರು ಸ್ವತಃ ಹಾಡುಗಳನ್ನು ರಚಿಸುತ್ತಿದ್ದರು , ಹಾಗು ಅವುಗಳನ್ನು ಭಾವ ತುಂಬಿ
    ಪ್ರಸ್ತುತಪಡಿಸುತ್ತಿದ್ದ್ದರು. ನೀವು ತಾಯಿಗೆ ತಕ್ಕ ಮಗನಾಗಿದ್ದು . ನಿಮ್ಮ ಕವನ ಹಾಗು ಸಾಹಿತ್ತ್ಯ ಕೃಷಿ ಮುಂದುವರೆಯಲಿ.ನಿಮ್ಮ ಕವನ
    ಪ್ರಕಟ ಪಡಿಸಿದ ‘ಸುರಹೊನ್ನೆ’ ಪತ್ರಿಕಾ ಸಂಪಾದಕರಿಗೂ ಧನ್ಯವಾದಗಳು.
    ರಂಗಣ್ಣ ನಾಡಗೀರ್, ಕುಂದಗೋಳ್

Leave a Reply to Ranganath Nadgir Cancel reply

 Click this button or press Ctrl+G to toggle between Kannada and English

Your email address will not be published. Required fields are marked *