ಯೋಗ-ಆರೋಗ್ಯ

ಶುದ್ಧ ಕುಂಕುಮ ಮಾಡುವ  ಕ್ರಮ

Share Button

Vijaya Subrahmanya

ತುಂಬಾ ಜನ ಅಕ್ಕ-ತಂಗಿಯರು ಕುಂಕುಮ ಮಾಡುವ ರೀತಿ ಹೇಗೆಂದು ಕೇಳುತ್ತಿದ್ದರು. ಹಾಗಾಗಿ ನನಗೆ ತಿಳಿದ ಕ್ರಮವನ್ನು ಅಪೇಕ್ಷಿತರಿಗಾಗಿ ಬರೆಯುತ್ತಾ ಇದ್ದೇನೆ..

ಬೇಕಾಗುವ ಸಾಮಗ್ರಿಗಳು:

  1. ಒಳ್ಳೆ ಜಾತಿಯ ಅರಿಶಿನ ಕೋಡು ಒಂದು ಕಿಲೊ {ನಮ್ಮ ತೋಟಲ್ಲಿ ಬೆಳೆಸಿದ್ದಾದರೆ  ಆ ಕುಂಕುಮ ಎಲರ್ಜಿಯಾಗದು. ಇಲ್ಲದಿದ್ದಲ್ಲಿ ಕೆಲವು ಜನಕ್ಕೆ ಕುಂಕುಮ ಎಲರ್ಜಾಗುವುದಿದೆ}
  2. ಬಿಳಿಗಾರ * 150ಗ್ರಾಂ
  3. ಸ್ಪಟಿಕ* ಹತ್ತುಗ್ರಾಂ
  4. ನಿಂಬೆಹುಳಿಯ ರಸ  750 ಮಿಲಿಲೀಟರು {ಮುಕ್ಕಾಲು ಲೀ, ಬೀಜ ತೆಗದು ಸೋಸಿದ್ದು}
  5. ಊರ ದನದ ತುಪ್ಪ100ಗ್ರಾಂ

ಒಂದು ಪ್ಲಾಸ್ಟಿಕ್ ಶೀಟ್ { ಚಾಪೆಯೂ ಆಗಬಹುದು}

ಇಷ್ಟು ಸಾಮಾನುಗಳನ್ನು ತುಂಬಬಹುದಾದ ಹಾಗಿದ್ದ ಒಂದು ಪಾತ್ರೆ.{ಪಿಂಗಾಣಿಯದ್ದೋ, ಮಣ್ಣಿನದ್ದೋ ಆದರೆ ಒಳ್ಳೆದು.ಅದು ಸಿಕ್ಕದೆ ಇದ್ದರೆ ಸ್ಟೀಲ್ ಪಾತ್ರೆ. ಅಗಲ ಬಾಯಿದಾದರೆ  ಪಾಕವನ್ನು ಗೋಟಾಯಿಸಲು ಸುಲಭ.}

ಕುಂಕುಮ ತಯಾರಿಕೆಯ ವಿಧಾನ :
ಶುದ್ಧವಾದ ಅರಿಶಿನ ಕೋಡನ್ನು ತೊಳೆದು ಸಣ್ಣ-ಸಣ್ಣ ತುಂಡುಮಾಡಿಗೊಳ್ಳಬೇಕು.
ಮತ್ತೆ ಸ್ಪಟಿಕವನ್ನೂ ಬಿಳಿಗಾರವನ್ನೂ ನುಣ್ಣಗೆ ಪುಡಿ ಮಾಡಿಕೊಂಡು, ನಿಂಬೆಹುಳಿಯ ರಸದಲ್ಲಿ ಸರಿಯಾಗಿ ಕಲಸಿ ಅದಕ್ಕೆ ಅರಿಶಿನ ಹೋಳುಗಳನ್ನ ಹಾಕಿ ಸರಿಯಾಗಿ ಮಿಶ್ರಮಾಡಬೇಕು.

ಈ ಮಿಶ್ರಣವನ್ನು, ಪಾತ್ರೆಯಲ್ಲಿ ಎರಡು ದಿನ {ಅರಿಶಿನ ತುಂಡು ನಿಂಬೆಹುಳಿ ರಸ ಹೀರುವುದಕ್ಕೆ ಇಡಬೇಕು.ದಿನಕ್ಕೆ ಏಳೆಂಟು ಸರ್ತಿ ಅದನ್ನು ಸೌಟುಹಾಕಿ ಗೋಟಾಯಿಸಬೇಕು.)

ಎರಡು ದಿನ ಬಿಟ್ಟು ಪ್ಲಾಸ್ಟಿಕ್  ಶೀಟಿಲ್ಲಿ ಹರವಿ ಮನೆ ಒಳಗೆ ಒಣಗಿಸಬೇಕು.ಇದು ಸಾದಾರಣ ಹದಿನೈದು ದಿನ ಒಣಗಿದ ಮೇಲೆ ನುಣ್ಣಗೆ ಪುಡಿ ಮಾಡಿ, ಜರಡಿಯಾಡಿಸಬೇಕು .ಕೊನೆಗೆ ತುಪ್ಪ ಹಾಕಿ ಚೆನ್ನಾಗಿ ಕೈಯಲ್ಲಿ  ತಿಕ್ಕಿ,ತಿಕ್ಕಿ ಹದ ಮಾಡಬೇಕು. ಇದೀಗ ಶುದ್ಧ ಕುಂಕುಮ ರೆಡಿ.

 

ಇದು ಸರಿಯಾದ ಕುಂಕುಮ .ಒಳ್ಳೆ ಬಣ್ಣ ಹೊಂದಿದ್ದು,.ತುಂಬಾಸಮಯಕ್ಕೆ ಬಾಳಿಕೆ ಬರುತ್ತದೆ . ಮಾತ್ರ ಅಲ್ಲ,ಮನುಷ್ಯನ ಭ್ರೂಮಧ್ಯಕ್ಕೆ ಹಾಕಿದರೆ ಆರೋಗ್ಯದಾಯಕ. ಶೀತ ಆದ ಪುಟ್ಟು ಮಕ್ಕಳಿಗೂ ನೆತ್ತಿಗೆ ಹಾಕಿ ತಿಕ್ಕಿದರೆ ಒಂದೇ ದಿನದಲ್ಲಿ ಮೂಗಿನಲ್ಲಿ  ಹರಿವ ಸಿಂಬಳವೂ ನಿಲ್ಲುತ್ತದೆ.

* ಸ್ಪಟಿಕ ಹಾಗೂ (ಬಿಳಿಗಾರ ಬಿಳಿಯಾಗಿ ಇಂಗಿನ ಗಟ್ಟಿಯಂತಿದೆ).ಇವುಗಳು ಆಯುರ್ವೇದ ಔಷಧಿ ಮಾರುವ ಅಂಗಡಿಯಲ್ಲಿ ಸಿಗುತ್ತದೆ. ಬಿಳಿಗಾರ (ಬೋರಾಕ್ಸ್) – ಪಟಿಕ (ಆಲಮ್) ಎಂದರೆ ದ್ವಿಲವಣಗಳ ಒಂದು ನಿರ್ದಿಷ್ಟ ಗುಂಪು. ( ಮಾಹಿತಿ :ವಿಕಿಪಿಡಿಯ)

 

 – ವಿಜಯಾ ಸುಬ್ರಹ್ಮಣ್ಯ , ಕುಂಬಳೆ

9 Comments on “ಶುದ್ಧ ಕುಂಕುಮ ಮಾಡುವ  ಕ್ರಮ

  1. ಉತ್ತಮ ಮಾಹಿತಿ. ಅರಶಿನ ಮತ್ತು ಸುಣ್ಣ ಸೇರಿಸಿ ಕುಂಕುಮ ಮಾಡುತ್ತಾರೆ ಎಂದು ತಿಳಿದಿದ್ದೆ. ಆದರೆ ಅಷ್ಟು ಸುಲಭವಲ್ಲ ಎಂದು ಅರ್ಥವಾಯಿತು.

    1. ಹೇಮಾ, ನಮಸ್ತೇ; ಸುಣ್ಣ ಸೇರಿಸಿದರೆ, ಮುಖಕ್ಕಾಗಲೀ ಔಷಧಿಗಾಗಲೀ ಸಲ್ಲದು. ಈ ಕುಂಕುಮ ಭ್ರೂ ಮಧ್ಯಕ್ಕೆ ಆರೋಗ್ಯಕ್ಕೆ ಉತ್ತಮ.
      ಯಾರಿಗೂ ಎಲರ್ಜಿಯಾಗದು.ಶೀತ, ಸಿಂಬಳ ಆದವರಿಗೆ, ಒಂದಿಷ್ಟು ಸೌಟಿನಲ್ಲಿ ಬಿಸಿಮಾಡಿ ನೆತ್ತಿಗೆ ಹಾಕಿದರೆ; ಶೀಘ್ರ ಪರಿಣಾಮಕಾರಿ.

  2. ವಾವ್… ಈ ಸ್ಪಟಿಕ ಮತ್ತು ಬಿಳಿಗಾರ ಎಲ್ಲಿ ಸಿಗುತ್ತದೆ?

    1. ಕುಂಕುಮ ಮಾಡುವ ರೀತಿಯನ್ನು ನೋಡಿ, ಓದಿ ಮೆಚ್ಚಿದ ಎಲ್ಲಾ ಸೋದರಿಯರಿಗೂ ಧನ್ಯವಾದಗಳು.
      ಸ್ಪಟಿಕ ಹಾಗೂ (ಬಿಳಿಗಾರ ಬಿಳಿಯಾಗಿ ಇಂಗಿನ ಗಟ್ಟಿಯಂತಿದೆ).ಇವುಗಳು ಆಯುರ್ವೇದ ಔಷಧಿ ಮಾರುವ ಅಂಗಡಿಯಲ್ಲಿ ಸಿಗುತ್ತದೆ

      ಒಂದು ವಿಜ್ಞಾಪನೆ; ಬೇರೆಯವರಿಗೆ ಹೇಳುವುದಾಗಲೀ ಫೋರ್ವರ್ಡ್ ಮಾಡುವಾಗಾಗಲೀ; ನನ್ನ ಹೆಸರನ್ನು ಉಲ್ಲೇಖಿಸಿ. ಇತೀ ವಿಜಯಾಸುಬ್ರಹ್ಮಣ್ಯ..

  3. ಹೌದು ..ಶುದ್ಧ ಕುಂಕುಮವನ್ನು ಅಂಗೈ ಮೇಲೆ ಹಾಕಿ ಉಜ್ಜಿದಾಗ ಅಂಗೈ ಕೆಂಪಾದರೆ ಅದು ಕೆಮಿಕಲ್ ಕುಂಕುಮವೆಂದೂ, ಹಳದಿಯಾದರೆ ಅದು ಶುದ್ಧಕುಂಕುಮವೆಂದೂ ಪರಿಗಣಿಸುತ್ತಾರೆ.

Leave a Reply to ವಿಜಯಾಸುಬ್ರಹ್ಮಣ್ಯ,ಕುಂಬಳೆ. Cancel reply

 Click this button or press Ctrl+G to toggle between Kannada and English

Your email address will not be published. Required fields are marked *