ಕನಸೊಳಗಿನ ಮನಸುಗಳು…
ಒಡಲಲ್ಲಿ ಬಚ್ಚಿಟ್ಟ
ಪುಟ್ಟ ಪುಟ್ಟ
ನೂರಾರು ಆಸೆಗಳು
ಮಿಸುಕಾಡಿದಾಗಾದ
ಅನುಭವಗಳು,
ತಡೆದಷ್ಟು ಎತ್ತರಕ್ಕೆ
ಚಿಮ್ಮುವ ಮನಸಿನ
ಕನಸುಗಳು,
ಕನಸೊಳಗಿನ
ನೂರಾರು ಮನಸುಗಳು,
ಹೊರಬಂದು ಹಕ್ಕಿಗಳಾಗಿ,
ಹಾರಾಡಿ
ಬಾನಿನಲಿ ಚಿತ್ತಾರವಾಗಿ,
ಜೊತೆಗೂಡಿ ಒಂದಾಗಿ,
ಕಾಮನಬಿಲ್ಲಾಗಿ,
ಬಾನನ್ನಪ್ಪಿ,
ಮಳೆಯೊಡನೆ ಧರೆಗಿಳಿದು,
ಇಳೆಯ ರಂಗಾಗಿಸಿ
ಹರಡಿದೆ
ಎಲ್ಲೆಡೆ…
ನನ್ನ ಕನಸುಗಳು,
ಕನಸೊಳಗಿನ
ನೂರಾರು ಮನಸುಗಳು...
– ಮಿಥಾಲಿ ಪ್ರಸನ್ನ ರೈ
Abba.. really super… ee kaldalli intha olle olle padagalalli ponisi.. adbutha abharanadantha kavathe barithare.. really Beautiful.. my hats off Madam
ಸೂಪರ್