ಮೂರು ಸಾಲುಗಳ ಉಕ್ಕೆ!
ಕಟ್ಟಿದರೇನು ಹೂತೋಟದ ಸುತ್ತ
ಎತ್ತರದ ಪಾಗಾರ ಬಂದ ಗಾಳಿ
ಹೊತ್ತೊಯ್ಯುವುದು ಹೂಗಂಧವ!
ಯಾವುದು ಕ್ರೂರತೆ ಕೋವಿಯನ್ನೇನು ಕೇಳುತ್ತಿ
ಗುಂಡು ಹೊಡೆಸಿಕೊಳ್ಳುವ ಗುಂಡಿಗೆ ಇದ್ದರೆ
ಹಿಡಿದ ಕೈಯ ಕೇಳು!.
ಯುದ್ದ ಭೂಮಿಯಲ್ಲಿ ಬಿಳಿಯ ಬಾವುಟ ನಿಷಿದ್ದ
ಖಡ್ಘವೊ ಕೋವಿಯೋ ಕೊನೆಗೆ ಫಿರಂಗಿಯೊ
ಕೆಂಪು ಬಣ್ಣ ಮಾತ್ರ ನಿಶ್ಚಿತ
.
ಕಷ್ಟವೆನ್ನುವುದು ದೇಹಕ್ಕಂಟಿದ ಚಿಪ್ಪು
ಒಡೆಯುವುದದು ಒಂದೇ ಬಾರಿಗೆ
ಬಂದೆರಗಲು ಮುಪ್ಪು!
.
-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ