ಕಾಡುವ ಪ್ರಶ್ನೆ(?)
ತಂದೆ ತಾಯ ಮೊಗವ ಕಾಣದ
ಸಂಬಂದಗಳ ಎಂದೂ ಅರಿಯದ
ಮುಗ್ಧ ಜೀವದ
ಬವಣೆಯ ತಿಳಿದವರಾರು?
ಮಳೆಯೂ ಇಲ್ಲದ, ಬೆಳೆಯೂ ಇಲ್ಲದ
ಸುರಿದ ಬೆವರಿಗೆ ಬೆಲೆಯೂ ಇಲ್ಲದ
ಬೆಂದ ಜೀವದ
ಬವಣೆಯ ಅರಿತವರಾರು?
ಕಾಲಿಲ್ಲ ಕೈಯಿಲ್ಲ, ಅಂಗಾಗ ಸರಿಯಿಲ್ಲ
ಭಿಕ್ಷೆಯೆತ್ತದೆ ಬೇರೆ ವಿಧಿಯಿಲ್ಲ
ಪಾಪದ ಜೀವದ
ಬವಣೆಯ ತಿಳಿದವರಾರು?
ಯಾರು ಹೇಗಿದ್ದರೂ, ಚಿಂತೆಯಿಲ್ಲದ
ಧನ ಕನಕ ಎಂದೂ ಬತ್ತದ
ಸಿರಿವಂತ ಜೀವದ
ಚರಿತೆಯ ಬಲ್ಲವರಾರು?
ಅನಾಥ, ರೈತ, ರೋಗಿ, ಭೋಗಿ… ಎಲ್ಲರೂ
ಪರಮಾತ್ಮನ ಆಟದ ಭಾಗಿ
ಈ ಜೀವನ್ಮರಣದ
ಮರ್ಮವ ಬರೆವವರಾರು? ಬಲ್ಲವರಾರು?
– ಅಶೋಕ್ ಕೆ. ಜಿ. ಮಿಜಾರ್.
ಆಶಯ ಚೆನ್ನಾಗಿದೆ ಅಶೋಕ್.