ವಿಶ್ವ ಮಹಿಳಾ ದಿನ..
ಮಾರ್ಚ್ 8, ವಿಶ್ವ ಮಹಿಳಾ ದಿನದಂದು ಮಹಿಳೆಯರಿಗೆಲ್ಲರಿಗೂ ಶುಭಾಶಯಗಳು.
ಇದಕ್ಕೆ ಪೂರ್ವಭಾವಿಯಾಗಿ, ನಿನ್ನೆ. ಮೈಸೂರಿನ Confederation of Indian Industry (CII) ಯು ಒಂದು ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮೈಸೂರಿನಲ್ಲಿ, ವಿಭಿನ್ನ ಹುದ್ದೆಗಳಲ್ಲಿ ಹಾಗೂ ಉದ್ಯಮಗಳಲ್ಲಿ ಸಾಧನೆಗೈದ ಕೆಲವು ಮಹಿಳೆಯೆರನ್ನು ಬರಮಾಡಿ ಅವರ ಭಾಷಣವನ್ನು ಏರ್ಪಡಿಸಿದ್ದರು . ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇದರಲ್ಲಿ ಭಾಗವಹಿಸಲು ಅಹ್ವಾನವಿತ್ತು. ಒಟ್ಟು 6 ಮಂದಿ ಅತಿಥಿಗಳ ಭಾಷಣವಿತ್ತು. ತಮ್ಮ ಆಯ್ದ ಕ್ಷೇತ್ರದ ಬಗ್ಗೆ ಹಾಗೂ ಮಹಿಳಾ ದಿನದ ಔಚಿತ್ಯದ ಬಗ್ಗೆ ಬಹಳ ಸೊಗಸಾಗಿ ವಿಷಯಗಳನ್ನು ಪ್ರಸ್ತುತ ಪಡಿಸಿದ್ದರು.
ಉದ್ಘಾಟನಾ ಭಾಷಣ ಮಾಡಿದವರು ಡಾ.ಅಮಿತಾ ಪ್ರಸಾದ್. IAS ಅಧಿಕಾರಿಯಾದ ಅವರು,ಸರಕಾರದ ಹಲವಾರು ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದವರು. ಪ್ರಸ್ತುತ ಮೈಸೂರಿನ Administrative Training Institute ನಲ್ಲಿ Director General ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಸ್ಪೂರ್ತಿದಾಯಕ ಮಾತುಗಳಲ್ಲಿ ನನಗೆ ನೆನಪಿರುವಷ್ಟನ್ನು ಇಲ್ಲಿ ಬರೆದಿದ್ದೇನೆ:
- ಮಹಿಳಾ ದಿನ ಮಾರ್ಚ್ 8ರಂದು ಮಾತ್ರವಲ್ಲ, ವರ್ಷರದ ಪ್ರತಿ ದಿನವೂ ಮಹಿಳಾ ದಿನವೇ.
- ಸಮಾಜದ ಮನಸ್ಥಿತಿ ಬದಲಾಗಬೇಕು. ತಂದೆ ತಾಯಿಯರು ತಮ್ಮ ಹೆಣ್ಣು-ಗಂಡು ಮಕ್ಕಳಲ್ಲಿ ಬೇಧಭಾವ ಮಾಡಬಾರದು.
- ಪುರುಷ ತನ್ನ ಪತ್ನಿಯನ್ನು Better-half ಆನ್ನುತ್ತಾನೆ, Worse-half ಅಂತ ಕರೆಯುವುದನ್ನು ನಾನೆಲ್ಲೂ ಕೇಳಿಲ್ಲ . ಆದರೆ ನಿಜಾರ್ಥದಲ್ಲಿ ಅದು Bitter-half ಆಗದಂತೆ ನೋಡಿಕೊಳ್ಳುವುದು ಇಬ್ಬರಿಗೂ ಸೇರಿದ ಜವಾಬ್ದಾರಿ .
- ಭಾರತದಲ್ಲಿ, ಈಗಿನ ಕಾಲಘಟ್ಟದಲ್ಲಿ ಜನಿಸಿದ ನಾವು ಧನ್ಯರು. ಸ್ತ್ರೀ ಸ್ವಾತಂತ್ಯ್ರದ ಮಹತ್ವವನ್ನು ಮಹಾತ್ಮಾ ಗಾಂಧಿಯವರು ಮನಗಂಡರು. ಕಸ್ತೂರಿ ಬಾ ರವರನ್ನು ಸ್ವಾತಂತ್ರ್ಯ ಚಳವಳದಲ್ಲಿ ತೊಡಗಿಸುವ ಮೂಲಕ ಹಲವಾರು ಸ್ತ್ರೀಯರು ಸಂಗ್ರಾಮದಲ್ಲಿ ಪಾಲ್ಗೊಳ್ಳಲು ಪ್ರೇರಣೆಯಾದರು.
- ಹೆಣ್ಣು, ತನಗೆ ತಾನು ಕೇಳಿಕೊಳ್ಳಬೇಕಾದ ಪ್ರಶ್ನೆ, ” Do I have a choice? Do I have a voice?
- ಮಹಿಳೆ ಅಮ್ಮ, ಅಕ್ಕ, ಪತ್ನಿ, ಅತ್ತೆ ಸೊಸೆ..ಎಲ್ಲ ನಿಜ, ಆದರೆ ಎಲ್ಲದಕ್ಕಿಂತ ಮೊದಲು ಆಕೆ ಒಬ್ಬ ‘ವ್ಯಕ್ತಿ’.
- ತೊಂದರೆಯಲ್ಲಿರುವ ಮಹಿಳೆ ಎಂದೂ ನಿಸ್ಸಹಾಯಕಳಾಗಿ ಕೂರಬಾರದು, ಅನ್ಯಾಯವನ್ನು ಸಹಿಸಬಾರದು. ಪ್ರತಿಭಟಿಸಬೇಕು, ತನ್ನ ಘನತೆ ಹೆಚ್ಚಿಸಿಕೊಳ್ಳಬೇಕು, ತನಗೆ ಸಹಾಯ ಕೊಡಬಲ್ಲವರ ಒಡನಾಟದಲ್ಲಿರಬೇಕು.
- ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಮಾತ್ರ ಗೌರವ ಪ್ರಾಪ್ತಿ. ತನ್ನ ದೃಢ ನಿಲುವಿನಿಂದ. ಪರಿಶ್ರಮದಿಂದ ಗೌರವ ಪಡೆದುಕೊಳ್ಳಬೇಕು.
- ಮಹಿಳೆಗೆ ಸೌಂದರ್ಯದ ಬಗ್ಗೆ ಕಾಳಜಿ ಬೇಕು, ಅದರೆ ಅದೇ ಮುಖ್ಯವಲ್ಲ. ನಮ್ಮ ಮನಸ್ಸಿಗೆ ಹಿತವಾಗುವಂತೆ, ಅತ್ಮವಿಶ್ವಾಸ ಮೂಡಿಸಲು ನಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಹೊರತು ಇತರರನ್ನು ಆಕರ್ಷಿಸಲು ಅಲ್ಲ.
ಮಹಿಳೆಯರೇ, ಏನಾದರೂ ಸಾಧಿಸಿ, ನಿಮಗೆ ಇಷ್ಟವಾದುದನ್ನು ಕಲಿಯಿರಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಾಮರ್ಥ್ಯ, ಅನುಕೂಲ ನಿಮಗಿದ್ದರೆ, ಅವರಿಗೆ ನೆರವಾಗಿ. ಎಲ್ಲರಿಗೂ ಒಳ್ಳೆಯದಾಗಲಿ.
ಇದು ಅವರ ಇಂಗ್ಲಿಷ್ ಭಾಷಣದ ಕನ್ನಡ ಸಾರಾಂಶ.
ಸಹೋದ್ಯೋಗಿ ಶ್ರೀಮತಿ ಶಶಿಯೊಂದಿಗೆ, ನಾನು, ಡಾ. ಅಮಿತಾ ಪ್ರಸಾದ್.
– ಹೇಮಮಾಲಾ.ಬಿ.
08/03/2014
ಸ್ಪೂರ್ತಿದಾಯಕ ಮಾತುಗಳು ಡಾ. ಅಮಿತಾ ಪ್ರಸಾದ್ ಅವರದ್ದು. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯ. ಈ ಒಂದು ವೆಬ್ಸೈಟ್ ಕೂಡ ಮಹಿಳಾ ಆಸಕ್ತಿಯಿಂದ ಬೆಳೆಯುತಿರುವುದು ಸಂತಸದ ವಿಷಯ. ಚೆನ್ನಾಗಿ ಸಾಗಲಿ ಎಂದು ಆಶಿಸುತ್ತೇನೆ.
ಚೆನ್ನಾಗಿದೆ. ಸುರಹೊನ್ನೆಯ ಮಹಿಳಾ ಲೇಖಕಿಯರು ಮತ್ತು ಓದುಗರಿಗೆಲ್ಲ ಅಂತರ ರಾಷ್ಟೀಯ ಮಹಿಳಾ ದಿನದ ಶುಭಾಷಯಗಳು
ಎಲ್ಲಾ ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಿಸುವ ಉತ್ತಮವಾದ ಲೇಖನ.
ಬಹಳ ಅದ್ಭುತವಾದ ಲೇಖನ , ಇಂಗ್ಲೀಷ್ ನಲ್ಲಿ ಕೇಳಿದ ಸಾರಾಂಶವನ್ನು ಕನ್ನಡಕ್ಕೆ ಅನುವಾದಿಸಿ ಎಲ್ಲಾ ಓದುಗರನ್ನು ತಲುಪಿಸುವ ನಿಮ್ಮ ಈ ಪ್ರಯತ್ನ ಬಹಳ ಹೆಮ್ಮೆತರುವ ವಿಚಾರ . ನಿಮ್ಮ ಈ ಪ್ರತಿಭೆ ಮುಗಿಲೆತ್ತರಕ್ಕೆ ಬೆಳೆದು ಎಲ್ಲಾ ಓದುಗರನ್ನು ಆಕರ್ಷಿಸಲಿ .
ಪ್ರತಿ ದಿನವು ಕೂಡ ಮಹಿಳೆಯರದೇ ಅಲ್ವಾ.ಉತ್ತಮ ವಿಚಾರಗಳನ್ನು ಹೇಳಿದ್ದಾರೆ.ಒಂದೇ ಒಂದು ಮಹಿಳೆ ಕೂಡಾ ಇಲ್ಲದ ನೆಲ .ಕಲ್ಪಿಸಿಕೊಳ್ಳಿ.ಆಗುವುದಿಲ್ಲ ಅಲ್ವಾ .ಡಾ.ಅಮಿತಾಪ್ರಸಾದ್ ಮತ್ತು ವಿಚಾರ ಹಂಚಿಕೊಂಡ ಸಂಪಾದಕರಿಗೂ ಅಭಿನಂದನೆಗಳು .