ನಮಾಮಿ ಗಣೇಶ ನಾಯಕಂ
ಮಹಾ ಗಣೇಶ ಮಹೋತ್ಸವಂ
ಗಣಾದಿ ವಂದ್ಯ ಉತ್ಸವಂ
ಸುರಾದಿ ಸುರ ಸ್ವಭೂಷಿತಂ
ನರಾದಿ ವಂದ್ಯ ಸುಭಾಷಿತಂ ||
‘
ಶಿವೈಕ್ಯ ಉದರ ಗಜಾಸುರಂ
ಸತಿ ಅದ್ವೈತ ಶಿವೆ ಚಿಂತಿತಂ
ಹರಿ ಬ್ರಹ್ಮ ಗೌರಿ ಯೋಜಿತಂ
ಶಿವೋದ್ಭವುದರ ಗಜಾ ಧರಂ ||
ಶಿವೆ ಶಕ್ತಿ ಕಪಟ ನಾಟಕಂ
ಮಜ್ಜನಾದಿ ದ್ವಾರ ಪಾಲಕಂ
ಸೃಜಿತಾದಿ ವರ್ಜ್ಯ ಜೈವಿಕಂ
ತ್ವರಿತಾಗಮ ಶಿವ ಕೋಪಿತಂ ||
ಶಿರ ಛೇಧನ ಆಯೋಜಿತಂ
ಗಜಾಸುರ ಶಿರ ನಿಯೋಜಿತಂ
ನಿತ್ಯ ಕೈವಲ್ಯ ದಾನವಾಸುರಂ
ಕೈಂಕರ್ಯ ಶಿವಂ ಗಣೇಶ್ವರಂ ||
ಮೂಷಿಕಾಸುರ ಮದಾವೃತಂ
ಸತಿ ಪಾತಿವ್ರತ್ಯ ರಕ್ಷಿತಂ
ದಂಡಿತ ದಂತ ವಿನೂತನಂ
ಮೂಷಿಕವಾಹನ ಸುಖಾಂತಿಕಂ ||
ಜಗಾದಿ ಜಗ ಸ್ವಪಾಲಕಂ
ದೇವಾದಿ ಪೂಜ್ಯ ಬಾಲಕಂ
ಶಿವಾತ್ಮ ಲಿಂಗ ಭೂಶಿರಂ
ಧರಶಾಯಿ ರಾವಣಾಸುರಂ ||
ಸರ್ಪೋದರ ಬಂಧ ಪ್ರಹಸನಂ
ಶಶಾಂಕ ಹಾಸ್ಯ ಅಸಹನಂ
ಕ್ಷಯ ವೃದ್ಧಿ ಶಾಪ ನಿರೀಕ್ಷಿತಂ
ಮುಖ ಚಂದ್ರ ಗರ್ವ ಮರ್ದನಂ ||
ಶಮಂತಕ ಮಣಿ ದೂಷಿತಂ
ನಿರ್ದೋಷಿ ಹರಿಗು ಪೀಡಿತಂ
ಜಾಂಬವಂತ ಪುತ್ರಿ ಅರ್ಪಿತಂ
ಶಾಪ ವಿಮುಕ್ತಿ ಗಣ ದರ್ಶನಂ ||
ಭೂಲೋಕ ಸ್ವರ್ಗ ದಾಯಕಂ
ನಮಾಮಿ ಗಣಪ ನಾಯಕಂ
ವಿನಾಯಕಂ ವಿಭೂಷಿತಂ
ಪ್ರಣಾಮಿ ಸಕಲ ಪೋಷಿತಂ ||
– ನಾಗೇಶ ಮೈಸೂರು