ಲಹರಿ

ಮೋಡರ್ನ್ ಮಾರ್ನಿಂಗ್ ಮಂತ್ರ!

Share Button

Surendra Pai

ಹಿಂದಿನ ಕಾಲದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಜನರು ತಮ್ಮ ಎರಡು ಕೈಗಳನ್ನು ಉಜ್ಜಿ ಮುಖಕ್ಕೆ ಸ್ಪರ್ಶಿಸಿ, ಒಂದು ಕ್ಷಣ ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೆ ಸರಸ್ವತಿ, ಕರ ಮೂಲೆ ತು ಗೋವಿಂದಃ, ಪ್ರಭಾತೇ ಕರದರ್ಶನಂ ಮಂತ್ರವನ್ನು ನೆನೆದು ಕೈ ನೋಡಿಕೊಳ್ಳುತ್ತಿದ್ದರು. ಇದರಿಂದ ಆವತ್ತಿನ ದಿನ ನಾವು ಮಾಡುವ, ಕೈಗೊಳ್ಳುವ ಎಲ್ಲಾ ಕಾರ್ಯಗಳು ಶುಭವನ್ನು ತರಲಿ, ಹರ್ಷವನ್ನುಂಟು ಮಾಡಲಿ ಎಂದರ್ಥ.

ಆದರೆ ಇಂದು ನಾವೆಲ್ಲ ಕೂಡ ಅದನ್ನು ಸ್ವಲ್ಪ ಬದಲಾವಣೆ ಮಾಡಿ ಹೇಳುತ್ತೇವೆ. ಎಷ್ಟೇ ಅಂದರೂ ನಾವು ಆಧುನಿಕತೆಗೆ ಒಳಪಟ್ಟವರು ಅಲ್ಲವೇ! ಇಂದು ಬಹುತೇಕ ಜನರು ಎಳುವ ಮೊದಲೇ ಹಾಸಿಗೆಯ ಮೇಲೆ, ಅಲ್ಪ ನಿದ್ರಾವಸ್ಥೆಯಲ್ಲಿರುವಾಗಲೇ ‘ಮೋಡರ್ನ್’ ಆಗಿ ಮಂತ್ರವನ್ನು ಹೇಳುತ್ತೇವೆ. ಅದು ಹೀಗಿದೆ-ಮೊಬೈಲ್ ವಸತೇ ವಾಟ್ಸಪ್, ಮೊಬೈಲ್ ಮಧ್ಯೆ ಫೇಸ್‌ಬುಕ್, ಮೊಬೈಲ್ ಮೂಲೆ ತು ಇನ್‌ಸ್ಟಾಗ್ರಾಂ, ಪ್ರಭಾತೇ ಮೊಬೈಲ್ ದರ್ಶನಂ. ಈ ಕೈ ನೋಡುವ ಗೋಜು ನಮಗೆ ಯಾಕೆ ಸ್ವಾಮಿ!!! ನಮ್ಮ ತಲೆ ಬಿಸಿ ನಮಗೆ ಇರುವಾಗ ಈ ಕೈ ನೋಡಿ ಎನಾಗಬೇಕು ಹೇಳಿ ಹ್ಹಾ. . . .

ಮೊಬೈಲ್ ಬಂದ ಮೇಲೆ ನಾವು ನೈಜ್ಯತೆಯನ್ನು ಮರೆಯುತ್ತಿದ್ದೇವೆ. ಒಳ್ಳೆಯ ಹವ್ಯಾಸಗಳು ನಮ್ಮಿಂದ ದೂರ ಸರಿಯುತ್ತಿದೆ. ಮುಂಜಾನೆಯ ವ್ಯಾಯಾಮ, ಯೋಗಾಸನ, ವಾಯುವಿಹಾರ, ಆ ಚಹಾದ ಸವಿ, ಮುಂಜಾನೆಯ ಆ ತಂಪಾದ ಗಾಳಿ, ಆ ಹಕ್ಕಿಗಳ ಚಿಲಿಪಿಲಿ ಸದ್ದು, ಒಂದೇ ಎರಡೇ . .! ಎಲ್ಲವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಮೊಬೈಲ್ ಮಾರಿಯು ಮನುಷ್ಯನನ್ನು ಸಂಪೂರ್ಣ ಆವರಿಸಿ ಬಿಟ್ಟಿದೆ. ನಾವು ನಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದೇವೆ.

ಜೀವನದ ಆ ಸುಂದರ ಕ್ಷಣಗಳನ್ನು ಮೊಬೈಲ್ ನೀಡಲು ಸಾಧ್ಯನಾ?? ಹೀಗೆ ಒಮ್ಮೆ ಯೋಚಿಸಿದರೆ ಮೊಬೈಲ್ ನಮ್ಮ ಅಮೂಲ್ಯ ಸಮಯವನ್ನು ನಮ್ಮಿಂದ ಕಸಿದುಕೊಳ್ಳುತ್ತಿದೆ ಎಂದು ಅನಿಸುತ್ತದೆ. ಈ ವೈರಸ್ ಒಮ್ಮೆ ಒಳ ಹೊಕ್ಕರೆ ಸಾಕು ಅದು ಕ್ರಮೇಣ ಪೂರ್ತಿ ಮೆದುಳನ್ನು ಅದರ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ.

mobile addiction

ನಾವು ಮಾಡುತ್ತಿರುವುದು ತಪ್ಪು, ಮುಂತಾದ ವಿಷಯಗಳು ನಮಗೆ ತಿಳಿದು ಕೂಡ ಮತ್ತೆ ಮತ್ತೆ ಅದನ್ನೇ ನಾವು ಮಾಡುತ್ತೇವೆ… ಉದಾಹರಣೆಗೆ ಹೇಳುವುದಾದರೆ ‘ ಸಿಗರೇಟ್ ಮತ್ತು ಆಲ್ಕೋಹಾಲ್ ಸೇವನೆ ದೇಹಕ್ಕೆ ಒಳಿತಲ್ಲ ಎಂದು ಎಲ್ಲರಿಗೂ ಗೋತ್ತು ಆದರೂ ಸಹ ಹಲವರು ಅದರ ದಾಸರು!!’
ನಮ್ಮ ಆಲೋಚನಾ ಶಕ್ತಿಯನ್ನು ನಿಷ್ಕ್ರಿಯಗೊಳಿಸಬಲ್ಲ, ನಮ್ಮ ಸುಂದರ ನೈಜ್ಯ ನೆನಪುಗಳನ್ನು ನಮ್ಮಿಂದ ಕಸಿದು ಕೊಳ್ಳುತ್ತಿರುವ ಈ ಮೊಬೈಲ್ ಬೇಕೇ?????

ಈ ಲೇಖನವನ್ನು ಓದುವ ಸಂದರ್ಭದಲ್ಲಿ ನಿಮಗೆ ಸಹಜವಾಗಿ ಅನಿಸಬಹುದು ಇವೆಲ್ಲವೂ ನಮಗೆ ತಿಳಿದಿರುವ ವಿಚಾರ ಇದರಲ್ಲೇನು ವಿಶೇಷವಿದೆ?? ಎಂದು… ಹೌದು ಗೆಳೆಯರೇ ನಿಮಗೆ ಗೊತ್ತಿರಬಹುದು ಆದರೆ ಗೊತ್ತಿದ್ದು ನಾವು ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೇವೆ ಅಲ್ಲವೇ? ನೋಡಿ ಗೆಳೆಯರೇ, ಪ್ರಸುತ್ತ ಮೊಬೈಲ್‌ನ ಅವಶ್ಯಕತೆ ಇದೆ ನಿಜ, ಆದರೆ ಅದೊಂದೆ ನಮ್ಮ ಬದುಕಾಗಬಾರದು. ಅಮೃತ ಹೆಚ್ಚಾದರೆ ವಿಷವಾಗುತ್ತದೆ ಎಂಬ ಮಾತನ್ನು ನೆನಪಿಸಿಕೊಳ್ಳಬೇಕು. ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಅರಿವಿರಬೇಕು. ಖರ್ಚಿಲ್ಲದೇ ರೋಗವನ್ನು ಆಹ್ವಾನ ಮಾಡಿಕೊಳ್ಳುವುದು ಮೂರ್ಖತನವಲ್ಲವೇ?

ನಾವಿಂದು ದೊಡ್ಡ ಸಂತೋಷದ ಬೆನ್ನ ಹತ್ತಿದ್ದೇವೆ, ಅದಕ್ಕಾಗಿ ನಾವು ಹಲವಾರು ಚಿಕ್ಕ-ಚಿಕ್ಕ ಕ್ಷಣಗಳು ನೀಡುವ ಸಂತೋಷವನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ಸೃಷ್ಟಿಸಿದ ಈ ಟೆಕ್ನಾಲಜಿ ನಮಗೆ ಶಾಪವಾಗದಂತೆ ಎಚ್ಚರವಹಿಸೋಣ.

 

–   ಸುರೇಂದ್ರ ಪೈ, ಸಿದ್ಧಾಪುರ

 

2 Comments on “ಮೋಡರ್ನ್ ಮಾರ್ನಿಂಗ್ ಮಂತ್ರ!

  1. ಚೆನ್ನಾಗಿದೆ…..ಮೊಬೈಲನ್ನು ಬಯಲಿನಲ್ಲಿ ಒಗೆದು ಕೈಬೀಸಿ ಮನೆಗೆ ಮರಳಿದರೆ ಎಷ್ಟೋ ಸುಖ….

    ವಯಸ್ಸಾದ ನನ್ನ ಸಂಬಂಧಿಯೊಬ್ಬರು ನನ್ನ ಜರೆದರು,,,,,

    ನೀನು what’s app ನಲ್ಲಿ ಯಾಕೆ ಉತ್ತರಿಸುವುದಿಲ್ಲ? ನಿನಗೆ ಉಪಯೋಗಿಸಲು ಬರುವುದಿಲ್ಲ…
    ಉತ್ತರಿಸುವ ವಿನಯವಿಲ್ಲ…..
    ನಮ್ಮ ಮೇಲೆ ಪ್ರೀತಿಯಿಲ್ಲ……
    ಸಂಬಂಧಗಳಿಗೆ ಬೆಲೆಯಿಲ್ಲ……….

    ನನ್ನ ಉತ್ತರ…..

    ಮೌನ……

    1. ಹೌದು… ನೀವು ಹೇಳುತ್ತಿರುವದು ನಿಜ… ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ನಯನಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *