ವಿಜಯ ದಿವಸ್
ವಿಜಯದ ದಿನವಿದು
ದಿಗ್ವಿಜಯ ಸಾಧಿಸಿದ್ದು
ಸಾಹಸ ಮೆರೆದ ನಮ್ಮ ಯೋಧರ
ಅಗಾಧ ದೇಶಪ್ರೇಮ ತೋರಿದ ದಿನ
ಎತ್ತರದ ಗುಡ್ಡಗಾಡಿನಲ್ಲಿ
ಎದುರಾಳಿ ಸದೆಬಡಿದ ಗಡಿಯಲಿ
ದುರ್ಗಮದಲೂ ಪರಾಕ್ರಮ ತೋರಿ
ಗೆದ್ದ ಯೋಧರ ಅಭಿಮಾನದಿಂದ ದಿನ
ಯುದ್ಧದಿಂದ ಶಾಂತಿಯು ನೆಲೆಸದು
ಹಿಂಸೆಯಿಂದ ಧರ್ಮ ಬೆಳೆಯದು
ಎಂದು ಸಾರಿದ ನೆಲವು ನಮ್ಮದು
ಕಾಲು ಕೆರೆದೆರಗಿದರೆ ಬಿಡಲಾಗದು
ಗಡಿಯ ಕಾಯೋ ಯೋಧರು
ನಮ್ಮ ಕಾಯೋ ದೇವರು
ಅವರ ತ್ಯಾಗದ ಫಲವಾಗಿ
ದೇಶಗಳಿಗೆ ನಾವು ಸುರಕ್ಷಿತರು
ವಂದನೆ ಅಭಿನಂದನೆ ನಿಮಗೆ
ದೇಶ ರಕ್ಷಿಸಿದ ದಂಡಿಗೆ
ಭಾರತೀಯರ ಅಸ್ತ್ರವೇ ಶಾಂತಿ
ಒಲಿದು ಬಂದರೆ ನೀಡುವೆವು ಪ್ರೀತಿ
ನಿಮ್ಮ ಬದುಕೊಂದು ಸಂದೇಶ
ಯುವಕರಿಗದೇ ಆಗಿದೆ ದಿಶ
ಈ ವಿಜಯದ ದಿವಸ
ಸ್ಪೂರ್ತಿಯಾಗಲಿ ಗಳಿಸಲು ಯಶ
ದೇಶ ಕಾಯುವ ಯೋಧ ಸಹೋದರಿಗೆ ಈ ಕವಿತೆ ಅರ್ಪಣೆ.
– ಅಮುಭಾವಜೀವಿ