ಅಗಲಿಕೆ
ನೀನೇ ಹೆತ್ತುಕೊಟ್ಟ ಕೂಸು
ಬಿಟ್ಟು ಹೋದದ್ದು ಸರಿಯೇ?
ನಿನ್ನ ಅಗಲಿಕೆಯಿಂದ
ಕನಸು ಅನಾಥವಾಗಿದೆ
ಹರಿತ
ಕ್ಷತ್ರಿಯನ ಕತ್ತಿ
ನಿನ್ನ ನೆನಪುಗಳ ಬುತ್ತಿ
ಎರಡಕ್ಕೂ ಹರಿತವಿದೆ
ಒಂದಿಷ್ಟೂ ಅರಿವಿಲ್ಲ
ಮತ್ತು ಕರುಣೆಯಿಲ್ಲ
ಇದೇನಾ?
ಕೆಂಪು ರೆಕ್ಕೆಗಳ
ಪಾರಿವಾಳ ಹಾರಿಬಂತು
ಬಂದೂಕಿನ ನಳಿಗೆಯೊಳಗೆ
ಗುಂಡುಗಳು
ಯುದ್ಧವೆಂದರೆ ಇದೇನಾ?
– ನವೀನ್ ಮಧುಗಿರಿ
ಮನಕ್ಕೆ ತಟ್ಟುತ್ತಾ ಖುಷಿ ಕೊಟ್ಟವು ನಿಮ್ಮ ಹನಿಗವಿತೆಗಳು
ಧನ್ಯವಾದಗಳು