ಏಳು ಎದ್ದೇಳು
ಮುರಿದ ಮಾಡಿನ ಎದೆಯ ಗೂಡಿನ
ಮೂಲೆಯಲೊಂದು ಅಳುವ ಮಗು
ಕೈ ಬಿಡದ ನೆನಪುಗಳ ಶೋಕಗೀತೆಯ
ಹತ್ತು ಹಲವು ನೊಂದ ಸಾಲುಗಳು
ಮುಚ್ಚಿಟ್ಟ ಬೆಟ್ಟ ನಗುವಿನ ಪರದೆಯ
ಹರಿದು ಇಣುಕಿ ಕಣ್ಣೀರಿಡುತಿರಲು
ಎಲ್ಲಾ ಕಳೆದುಕೊಂಡ ಅನಾಥ ಭಾವ
ಏನೆಂದು ಹೇಳಲಾಗದು ತೀರದ ನೋವು
ಕೆಸರಲಿ ಮೈಮರೆತ ಬುದ್ದಿಗೇಡಿ ಮನವ
ಆರೈಸಿ,ಆಲೈಸಿ,ಅಧಿಗಮಿಸಿ ತಿದ್ದಿ ತಂದು
ಮತ್ತೆ ಶರೀರದೊಳು ಪ್ರತಿಷ್ಠಾಪಿಸುವ ಛಲ
ಹೃದಯಲಿ ಕೀವು ಹಂಬಲದಲಿ ಬದುಕು
ಜೀವನಚಕ್ರದ ಜೊತೆ ಸಾಗಬೇಕು ನಗುತ
ಸಿಗದ ದ್ರಾಕ್ಷಿಯ ಹುಚ್ಚು ಪ್ರೀತಿಯ ತೊರೆದು
ಹೋರಾಟದ ಸವಾರಿಯಲಿ ಮನದ ಅಶ್ವವ
ಉತ್ಸಾಹದ ಪನ್ನೀರಲಿ ಮತ್ತೆ ತೊಳೆದು
– ಮನುಶ್ರೀ ಜೋಯಿಸ್
ಚೆನ್ನಾಗಿದೆ