ಹದ್ದಿನಿಂದ ಕಲಿಯಬೇಕಾದದ್ದು..

Share Button

Hema-20122015

ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.

‘ಸುರಹೊನ್ನೆ’ಯನ್ನು ಆರಂಭಿಸಿ ಈ ಜನವರಿಗೆ ಕೇವಲ ಎರಡು ವರುಷವಾಯಿತು. ಈ ಅವಧಿಯಲ್ಲಿ ಇದಕ್ಕೆ ಹಲವಾರು ವಿವಿಧ ಶೈಲಿಯ, ವಿವಿಧ ವಿಚಾರಗಳ ಬಗ್ಗೆ ಬರಹ/ಕವನಗಳು ಹರಿದು ಬಂದಿವೆ. ಇದು ಹವ್ಯಾಸಿ ಬರಹಗಾರರಿಗಾಗಿ ಆರಂಭಿಸಿದ ಪತ್ರಿಕೆ. ಇದನ್ನು ಯಾವುದೇ ವಾಣಿಜ್ಯ ಉದ್ದೇಶ ಇಲ್ಲದೆ, ಓದುಗ-ಬರಹಗಾರ ನಡುವೆ ಸಂಪರ್ಕ ಕೊಂಡಿಯಾಗಿ ಸದಭಿರುಚಿಯ ಪತ್ರಿಕೆಯಾಗಿ ಮುನ್ನಡೆಸಿಕೊಂಡು ಹೋಗಬೇಕೆಂಬ ಆಶಯ ನಮ್ಮದು. ತಾಂತ್ರಿಕ ಕಾರಣಗಳು, ಅಂತರ್ಜಾಲ ಪತ್ರಿಕೆಯ ಇತಿ-ಮಿತಿ, ಸಮಯಾಭಾವ ಹಾಗೂ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ ಪತ್ರಿಕೆ ನಡೆಸುವ ಹೊಣೆಗಾರಿಕೆಗಳು ಜೊತೆಗೂಡಿ, ಕೆಲವೊಮ್ಮೆ ಸಣ್ಣ-ಪುಟ್ಟ ಪ್ರಮಾದಗಳಾಗಬಹುದು. ಆದರೂ ಅವುಗಳನ್ನು ಅವಗಣಿಸಿ,  ಸುರಗಿಬಳಗವನ್ನು ಕಟ್ಟಲು  ನೀವೆಲ್ಲಾ ಕೈಜೋಡಿಸುವಿರೆಂಬ ಎಂಬ ವಿಶ್ವಾಸ ನಮಗಿದೆ.

2015 ರಲ್ಲಿ ಸುರಹೊನ್ನೆಯಲ್ಲಿ 400 ಕ್ಕೂ ಮಿಕ್ಕಿ ಬರಹಗಳು ವಿವಿಧ ಅಂಕಣಗಳಲ್ಲಿ ಪ್ರಕಟವಾಗಿವೆ. ಸುರಹೊನ್ನೆಯಲ್ಲಿ ಪ್ರಕಟವಾದ ಆಯ್ದ ಬರಹಗಳನ್ನು ಇ-ಪುಸ್ತಕ ರೂಪದಲ್ಲಿ ಪ್ರಕಟಿಸುವ ಪ್ರಯತ್ನವೂ ನಡೆದಿದೆ. ವಿದ್ಯುನ್ಮಾನದ ಆವಿಷ್ಕಾರದಿಂದಾಗಿ, ಬರಹ ಪ್ರಕಟವಾದ ಕೂಡಲೇ ದೇಶ-ವಿದೇಶಗಳಿಗೆ ಸುರಹೊನ್ನೆ ತಲಪಿ, ವಿಶ್ವದ ಹಲವೆಡೆ ವಾಸವಾಗಿರುವ ಕನ್ನಡಿಗರು ಜಾಲತಾಣಕ್ಕೆ ಭೇಟಿ ಕೊಡುತ್ತಿದ್ದಾರೆ ಎಂಬುದು ಸಂತೋಷದ ಸಂಗತಿ.

ಬಹಳಷ್ಟು ಜನ ಸುರಹೊನ್ನೆಯನ್ನು ಓದುತ್ತಾರೆ ಎಂಬುದು ನಾವು ಭೇಟಿಯಾದಾಗ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಓದುಗರು ಮತ್ತು ಬರಹಗಾರರು ಎಲ್ಲಾ ಪ್ರಕಟಿತ ಬರಹಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಂಡು , ಇಷ್ಟವಾದ ಬರಹಗಳಿಗೆ ಪ್ರತಿಕ್ರಿಯೆ ನೀಡುವುದು ಬರಹಗಾರರಿಗೆ ಸ್ಫೂರ್ತಿ ತುಂಬುತ್ತದೆ ಹಾಗೂ ಓದುಗ-ಬರಹಗಾರರ ನಡುವೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

ಹೊಸವರುಷದ ಶುಭಾಶಯವಾಗಿ, ಸ್ನೇಹಿತೆಯೊಬ್ಬರು ಕಳುಹಿಸಿದ “Few insightful lessons from Eagle” ಬಹಳ ವಿಶಿಷ್ಟ ಎನಿಸಿತು. ಹಾಗಾಗಿ ಅದನ್ನು ಕನ್ನಡಕ್ಕೆ ‘ಹದ್ದಿನಿಂದ ಕಲಿಯಬೇಕಾದದ್ದು’ ಎಂಬ ಹೆಸರಿನಲ್ಲಿ ಈ ಕೆಳಗಿನಂತೆ ಅನುವಾದಿಸಿದ್ದೇನೆ. ಎಲ್ಲರಿಗೂ ಹೊಸವರುಷದ ಶುಭಾಶಯಗಳನ್ನು ಕೋರುತ್ತಾ, ಹದ್ದಿನ ಜೀವನಶೈಲಿಯಿಂದ ಅರಿಯಬಹುದಾದ ಕೆಲವು ಅಂಶಗಳನ್ನು ಗಮನಿಸೋಣ.

Eagle

 

  • ಹದ್ದು ಅತಿ ಎತ್ತರದಲ್ಲಿ ಒಬ್ಬಂಟಿಯಾಗಿ ಹಾರಾಡುತ್ತಿರುತ್ತದೆ. ಹದ್ದು ಇತರ ಹದ್ದುಗಳೊಂದಿಗೆ ಮಾತ್ರ ಬೆರೆಯುತ್ತದೆ. (ಸಾಮರ್ಥ್ಯ ಉಳ್ಳವರು ಗುಂಪಿನಲ್ಲಿದ್ದರೂ, ವಿಭಿನ್ನವಾಗಿ ಕಾರ್ಯಸಾಧನೆ ಮಾಡುತ್ತಾರೆ)
  • ಹದ್ದು ಎಷ್ಟೇ ಎತ್ತರದಲ್ಲಿದ್ದರೂ ಭೂಮಿಯಲ್ಲಿರುವ ಆಹಾರವನ್ನು ಗುರುತಿಸಿದ ತಕ್ಷಣ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿ, ಕೆಳಗೆ ಬರುತ್ತದೆ ಹಾಗೂ ಯಾವುದೇ ಅಡಚಣೆಗೆ ಬಗ್ಗದೆ ತನ್ನ ಕೊಳ್ಳೆಅಯ್ನ್ನು ಹಿಡಿಯುತ್ತದೆ. (ಪೂರ್ವ ನಿರ್ಧಾರಿತ ಗುರಿ ಮತ್ತು ಸಾಧಿಸುವ ಛಲ ಸಾಧನೆಗೆ ಅವಶ್ಯ).
  • ಹದ್ದು ಸತ್ತ ಪ್ರಾಣಿಯನ್ನು ತಿನ್ನುವುದಿಲ್ಲ, ಆದರೆ ರಣಹದ್ದು ತಿನ್ನುತ್ತದೆ.(ತನ್ನ ಗುರಿ ಮತ್ತು ವಿಷಯದ ಬಗ್ಗೆ ಸ್ಪಷ್ಟತೆ ಹೊಂದಿರುವುದು ವ್ಯಕ್ತಿತ್ವಕ್ಕೆ ಭೂಷಣ).
  • ಇತರ ಹಕ್ಕಿಗಳು ಬಿರುಗಾಳಿ ಬಂದಾಗ ಹೆದರಿ ಅವಿತುಕೊಳ್ಳುತ್ತವೆ. ಆದರೆ ಹದ್ದು ಬಿರುಗಾಳಿಯ ದಿಕ್ಕಿನಲ್ಲಿ ರೆಕ್ಕೆ ಬಡಿದು ನಿರಾಯಾಸವಾಗಿ ಇನ್ನಷ್ಟು ಮೇಲೇರಿ, ಇನ್ನೂ ಹೆಚ್ಚು ವಿಸ್ತಾರದಲ್ಲಿ ತನ್ನ ಆಹಾರವನ್ನು ಹುಡುಕಲು ಬಿರುಗಾಳಿಯ ಸಹಾಯವನ್ನೇ ಪಡೆಯುತ್ತದೆ. (ಸಾಧಕರು ಆಕಸ್ಮಿಕ ಅಡಚಣೆಗಳನ್ನು ಸವಾಲಾಗಿ ಸ್ವೀಕರಿಸಿ, ಆ ಸನ್ನಿವೇಶದಲ್ಲಿಯೇ ಇನ್ನಷ್ಟು ಬೆಳೆಯುತ್ತಾರೆ)
  • ಹದ್ದಿಗೆ ವಯಸ್ಸಾಗಿ ತನ್ನ ರೆಕ್ಕೆಗಳು ಬಲಹೀನವಾಗಿದೆ ಎನಿಸಿದಾಗ, ರೆಕ್ಕೆಯ ಎಲ್ಲಾ ಗರಿಗಳನ್ನು ಉದುರಿಸಿ ಬೆಟ್ಟದ ಕಲ್ಲು ಪೊಟರೆಯಲ್ಲಿ ವಿಶ್ರಾಂತಿ ಪಡೆಯುತ್ತದೆ. ಪುನ: ಹೊಸ ಗರಿಗಳು ಹುಟ್ಟಿ ರೆಕ್ಕೆ ಬಲಿಷ್ಠವಾದಾಗ ಹಾರಾಡಲಾರಂಭಿಸುತ್ತದೆ. (ನಮ್ಮ ಜೀವನದಲ್ಲೂ ಅನಗತ್ಯವಾದ, ಹಳೆಯದಾದ, ಯಾವುದೇ ಮೌಲ್ಯ ನೀಡದ ವಿಚಾರಗಳನ್ನು ಕೊಡವಿ ಹೊಸ ವಿಚಾರಗಳನ್ನು ಸ್ವಾಗತಿಸಬೇಕು)

 

ವಂದನೆಗಳು

 

 – ಹೇಮಮಾಲಾ.ಬಿ

 

 

6 Responses

  1. Balachandra Bhat says:

    ಹೊಸ ವಿಚಾರ ತಿಳಿಸಿದ ತಮಗೆ ಧನ್ಯವಾದಗಳು…

  2. Ishamath Dhk says:

    ಹೊಸ ವಿಚಾರ …ಧನ್ಯವಾದಗಳು ತಮಗೆ

  3. ಹದ್ದಿಗೆಲ್ಲಿಯದು ಸರಹದ್ದು ?
    ಹದ್ದು ಮೀರದ ಪಾಡು ನಮದು
    ಹದ್ದಿನತ್ತ ದಿಟ್ಟಿ ಹಾಯಿಸಿ ಖುದ್ದು
    ಕಲಿತರಷ್ಟಿಷ್ಟು ಬದುಕಿಗದೆ ಮದ್ದು ||

    • Hema says:

      ವಾವ್… ತಮ್ಮ ಕಾವ್ಯಾತ್ಮಕ, ಪ್ರಾಸಬದ್ಧ ಪ್ರತಿಕ್ರಿಯೆಗೆ ಧನ್ಯವಾದಗಳು.

  4. sneha prasanna says:

    ವಿಭಿನ್ನ ಮಾಹಿತಿಯನ್ನು ಒದಗಿಸುತ್ತ ಸುರಹೊನ್ನೆಯ ಚೆಲುವಿನ ಪುಟಗಳಿಗೆ ಕಾರಣರಾದ ನಿಮಗೂ ಧನ್ಯವಾದಗಳು… ಮುಗಿಲೆತ್ತರದಲ್ಲಿ ಮಿಡುಕಾದುತ್ತಿರುವ ನಕ್ಷತ್ರ ನಮ್ಮ ಸುರಹೊನ್ನೆ….. ಹೀಗೆ ಮುಂದುವರಿಯಲಿ ನಮ್ಮ ಪಯಣ..

  5. Shruthi Sharma says:

    ವಿಶೇಷ, ವಿಭಿನ್ನ, ಚೆಂದದ ಬರಹಗಳು, ಹೊಸ ಬರಹಗಾರರನ್ನು ದಿನೇ ದಿನೇ ಪರಿಚಯಿಸುತ್ತಿರುವ ತಮಗೆ ಅಭಿನಂದನೆಗಳು. ಸುರಹೊನ್ನೆ ಗೆ ಜನುಮ ದಿನ್ಮದ ಶುಭಾಶಯಗಳು 🙂

Leave a Reply to Ishamath Dhk Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: