ನಿಲ್ಲದಲೆದಾಟ

Share Button

 

Nagesh Mysore

ಬಿಟ್ಟೆಲ್ಲೊ ಹೊರಡುವೆನು ಎಂದೆಲ್ಲೊ ದೂರಕೆ
ಎಂದರಸಿ ಹೊರಟರೆ, ಬಂದು ಮತ್ತದೆ ತೀರ
ದುಂದುವೆಚ್ಚದ ಬದುಕ ಸಂದಿ ಗೊಂದಿ ದಾಟಿಸಿ
ಮತ್ತೆ ಕರೆ ತಂದಿತಲ್ಲ ಚಕ್ರವ್ಯೂಹದ ಹುನ್ನಾರ ||

ಜಯಿಸುವೆನೆಂದೇ ನಡೆದ ಅಶ್ವಮೇಧ ಯಾಗ
ಬಿಚ್ಚಿದೆ ಯಾಗಾಶ್ವ ಹುರಿದುಂಬಿಸುತ ಭರದೆ
ಪ್ರಾಯ ಮದ ರಾಗ ಪದ ಅನುರಣಿಸಿ ವೇಗ
ನಾಗಾಲೋಟದೆ ಓಟ ತುಳಿದು ಸವರಿ ಹೆದೆ ||

ಗೆದ್ದ ಕದನಗಳೆಷ್ಟೊ, ಸೋತ ವದನಗಳಷ್ಟು
ಸೋಲು ಗೆಲುವಿನ ನಡುವೆ ಕೂತ ಕುಹುಕ
ಕೀಳರಿಮೆ ಕುಗ್ಗಿಸಿತೊ, ಯುದ್ಧವದ ಹಿಗ್ಗಿಸಿತೊ
ಬಿಟ್ಟೆಲ್ಲ ರಣರಂಗಕೆ ಮತ್ತೆ ನಡೆಸಿ ತಪನೆ ||

wandering-aroundಗೆಲಲಾಗದ ಯಾತನೆ ಮತ್ತೆ ದೂಡುತಲಲ್ಲಿಗೆ
ಸುತ್ತಿಸಿ ಚಕ್ರವದನೆ ತಿರುತಿರುಗಿಸಿ ಮರಳಿಸಿ
ಅರಿವಾಯಿತರಿಷಡ್ವರ್ಗ ಬಿಡದಲ್ಲ ರಾಜಮಾರ್ಗ
ಯಾಕೊ ಬಯಸಿದ್ದೆಲ್ಲ ಕನಸ ಮನೆ ಕೊರಗು ||

ಜಯಿಸಿ ನಿಂತಾ ಗಳಿಗೆ, ಖಡ್ಗವಿನ್ನೂ ಹೊರಗೆ
ಅರಿಗಳಾರು ಕಾಣರು ಒಳಗವಿತವರ ಬಿಟ್ಟು
ಯಾಕೊ ಗೆಲದು ಮಾತು ಕಪಟ ಪ್ರೀತಿ ನೀತಿ
ಸೂತ್ರವನೆಲ್ಲೊ ಹುಡುಕಿ ಅಲೆತ ಮನ ರಣರಂಗ ||

 

 – ನಾಗೇಶ ಮೈಸೂರು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: