ಚಾರಣ

Share Button

 

Ashok Mijar

ಒಂದೊಂದು ಕ್ಷಣಗಳೂ ವಿಲಕ್ಷಣ

ಹಾದು ಹೋಗುವ ದಾರಿ

ಸವೆದು ಕರಗುವ ಊರುಕೇರಿ

ಮರೆತು ಹೋಗುವ ನೋವಿನ ಬಾಣ

           ****

ಎಲ್ಲೋ ಯಾರೋ ತಂದಿಟ್ಟ ಬೇನೆ

ದುಃಖ ಸಂತೈಸಿ ಮತ್ತೆ ಮೆರವಣಿಗೆ

ಸುಖದ ತಪ್ಪಲಿನಲ್ಲಿ ಹುಸಿನಗೆ ಹಗೆ

ಕಂಡೂ ಕಾಣದ ಅರ್ಥವಾಗದ ಪ್ರಶ್ನೆ

           ****

ಹುಡುಕುವ ಉತ್ತರ ತಾಳೆ ಹಾಕಿ

ಏನೋ ಹೇಗೋ ಸಾಧಿಸಿದಂತೆ

ಬಿಮ್ಮನೆ ಬೀಗಿ ಸಾಹಸಿಯಂತೆ

ಹಾರಿಸಿದ ಪತಾಕೆ ಅಲ್ಲಿಯೇ ಬಾಕಿ

          ****

ಮತ್ತಾರೋ ಕಿತ್ತರು ನೆಟ್ಟ ಪತಾಕೆ

ಯಾರೋ ಬಂದು ಹತ್ತಿ ಇಳಿಯಲು

ನಾನು ಮಾತ್ರ ಅಚಲ ಯಾವಾಗಲೂ

ನೋವುಬೇವುಗಳ ಕೆಟ್ಟ ಸಂಕೇತಕೆ.

          ****

  – ಅಶೋಕ್ . ಕೆ.ಜಿ. ಮಿಜಾರು 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: