ಕಲಿತಾಡು ಕನ್ನಡವ..
ಕನ್ನಡ ಕಲಿ
‘ಕನ್ನಡ’ಕದಲಿ
‘ಕದ’ಲಿದರೆ ಕದ
ನಿಧಿ ಪೆಟ್ಟಿಗೆ ಸದಾ ||
ತೆರೆದಾ ಮನ
ತೆರೆ ಸರಿಸಿ ಘನ
ಬಿಚ್ಚಿದ ಕೊಡೆ ಮಾಯೆ
ಕನ್ನಡದಲದರದೆ ಛಾಯೆ ||
ನಾಲಿಗೆ ಸದಾ
ಎಲುಬಿಲ್ಲದ ಸಿದ್ಧ
ಶುದ್ಧ ಮಾಡುವ ತರ
ನುಡಿ ಕನ್ನಡ ಸ್ವರ ಸರ ||
ಸರಸರ ಸಾರ
ನುಡಿದೆ ಸಾದರ
ಮಾತಾಗುತ ಸದರ
ಮನಸಾಗುವ ಹಗುರ ||
ಕನ್ನಡಿ ಗಂಟು
ಆಗದಂತೆ ನಂಟು
ಸರಿ ಕಲಿತವರದೆಷ್ಟು
ಕವಿ ಕಾವ್ಯ ಬರೆದವರಷ್ಟು ||
ಕನ್ನ ಹಾಕಲಿ
ಕನ್ನಡವ ಬಾಚಲಿ
ಕದ್ದಿದ್ದೆಲ್ಲಾ ಶಾಶ್ವತ
ಸಿರಿವಂತ ಕನ್ನಡ ಸುತ ||
ಕನ್ನಡ ನಗಲಿ
ನಗೆಗಡಲೆ ಸಿಗಲಿ
ಕಡಲೆ ಕಬ್ಬಿಣ ಕರಗಿ
ಮಲ್ಲೆ ಸಂಪಿಗೆ ಸುರಗಿ ||
.
– ನಾಗೇಶ ಮೈಸೂರು
ಸಾಂದರ್ಭಿಕ ಕವನ , ಸೊಗಸಾಗಿದೆ.
ಧನ್ಯವಾದಗಳು ಹೇಮಾ ಅವರೆ – ನಾಡಹಬ್ಬಕ್ಕೊಂದು ಪುಟ್ಟ ನೆನಪೋಲೆಯ ಯತ್ನ 🙂
Thumba channagide….
ಸ್ನೇಹ ಪ್ರಸನ್ನರವರೆ,
ತುಂಬಾ ಧನ್ಯವಾದಗಳು 🙂
(nageshamysore.wordpress.com)