Author: Hema Mala

2

ಸುಂದರಬನ ಎಂದರಷ್ಟೇ ಸಾಕೆ?

Share Button

ಬಂಗಾಳಕೊಲ್ಲಿಯ ಜಲರಾಶಿಯ ಮೇಲೆ ನಿಧಾನವಾಗಿ ಚಲಿಸುತ್ತಿರುವ ಯಾಂತ್ರೀಕೃತ ಚಾಲನೆಯ ಫೆರ್ರಿ ದೋಣಿ. ಹಿತವಾಗಿ ಬೀಸುತ್ತಿರುವ ತಂಗಾಳಿ. ದೋಣಿಯ ಮೇಲ್ಮಹಡಿಯಲ್ಲಿ ಕುರ್ಚಿಯಲ್ಲಿ ಆಸೀನರಾಗಿ, ಕೈಯಲ್ಲಿ ಕುರುಕಲು ತಿಂಡಿಯೊಂದಿಗೆ ಬಿಸಿಚಹಾದ ಕಪ್ ಇದ್ದರೆ, ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಹೇಳಿ ಮಾಡಿಸಿದ ವಾತಾವರಣ. ಎತ್ತ ನೋಡಿದರೂ ನೀಲಿ ಜಲ, ಹಚ್ಚಹಸಿರಿನ ಮರಗಳುಳ್ಳ...

2

ತೂಗುವ ಸೇತುವೆಗಳೂ ಬಾಗುವ ಮನಗಳೂ

Share Button

ಕರ್ನಾಟಕ ಹಾಗೂ ಭಾರತದ ಇತರ ರಾಜ್ಯಗಳಲ್ಲಿ ಈಗಲೂ, ನದಿದಂಡೆಗಳಲ್ಲಿರುವ ಹಳ್ಳಿಗಳು ಮಳೆಗಾಲದಲ್ಲಿ ಉಕ್ಕಿ ಹರಿವ ಪ್ರವಾಹದಿಂದಾಗಿ ಸುತ್ತುಮುತ್ತಲಿನ ಸಂಪರ್ಕ ಕಳೆದುಕೊಂಡು ಅಕ್ಷರಶ: ದ್ವೀಪಗಳಾಗುವುದಿದೆ.  ಅರ್ಧ ಗಂಟೆ ವಿದ್ಯುತ್, ಇಂಟರ್ನೆಟ್ ಇಲ್ಲದಿದ್ದರೆ  ಚಡಪಡಿಸುವ ಈಗಿನ ಕಾಲದಲ್ಲಿ ದಿನಗಟ್ಟಲೆ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡು ದ್ವೀಪದಲ್ಲಿರುವುದು ಎಷ್ಟು ಕಷ್ಟ!. ಊಹಿಸಿಕೊಳ್ಳಿ!  ಮಕ್ಕಳು...

0

ಕಾಡೊಳಗಿದ್ದು ಆನೆಗಳಿಗಂಜಿದೊಡೆಂತಯ್ಯ..

Share Button

ದಟ್ಟ ಹಸಿರಿನ ಕಾಡಿನ ನಡುವೆ ಇರುವ ಆ ಪುಟ್ಟ ಹೆಂಚಿನ ಬಿಡಾರಗಳಲ್ಲಿ ತಂಗುವುದು ಅದೆಷ್ಟು ವಿಶಿಷ್ಟ ಅನುಭವ! ದೂರದಿಂದ ಕೇಳಿ ಬರುವ ನವಿಲು ಹಾಗೂ ಇತರ ಪಕ್ಷಿಗಳ ಕೂಜನಕ್ಕೆ ಕಡವೆ/ಸಾಂಬಾರ್ ಮೃಗದ ದ್ವನಿಯ ಹಿಮ್ಮೇಳ..ಯಾವುದೋ ಮರಕ್ಕೆ ಸುತ್ತಿಕೊಂಡ ಬೃಹದಾಕಾರದ ಬಳ್ಳಿ, ಬಿಡಾರದ ಮಾಡಿನ ಮೇಲೆ ತಟತಟನೆ ಬೀಳುವ...

0

ಸೇತೂರಾಮ್ ಅವರ ಕೃತಿ: ‘ನಾವಲ್ಲ’

Share Button

ದೂರದರ್ಶನದ  ಪರದೆಯ ಮೇಲೆ ಆಗಾಗ ವಿಭಿನ್ನ ಪಾತ್ರ್ರಗಳಲ್ಲಿ ಕಾಣಿಸಿಕೊಂಡು, ವಿಶಿಷ್ಟ ಛಾಪನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿಸಿರುವ ಕಲಾವಿದ ಶ್ರೀ ಸೇತುರಾಮ್ ಅವರು ಹೆಣೆದ ಆರು ಕಥೆಗಳ ಸಂಕಲನ “ನಾವಲ್ಲ” . ಮೋಕ್ಷ, ಮೌನಿ, ಸ್ಮಾರಕ, ಸಂಭವಾಮಿ, ಕಾತ್ಯಾಯಿನಿ ಹಾಗೂ ನಾವಲ್ಲ – ಎಂಬ ಶೀರ್ಷಿಕೆಗಳುಳ್ಳ ಆರು ಕಥೆಗಳ...

3

ರುಚಿಯೂ ಆರೋಗ್ಯವೂ : ಬೋರೆಹಣ್ಣು

Share Button

ಚಳಿಗಾಲ ಕೊನೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಗೋಲಿ ಗಾತ್ರದ ಕಂದು ಬಣ್ಣದ ಎಲಚಿ ಹಣ್ಣುಗಳು ಕಾಣಸಿಗುತ್ತವೆ. ಬಯಲುಸೀಮೆಯಲ್ಲಿ ಸಂಕ್ರಾಂತಿ ಹಬ್ಬದ ದಿನ ಎಳ್ಳು-ಬೆಲ್ಲ, ಕಬ್ಬಿನ ಜತೆಗೆ ಎಲಚಿ ಹಣ್ಣನ್ನೂ ತಟ್ಟೆಯಲ್ಲಿರಿಸಿ ವಿನಿಮಯ ಮಾಡುವ ಸಂಪ್ರದಾಯ. ಇದೇ ವರ್ಗಕ್ಕೆ ಸೇರಿದ ತುಸು ದೊಡ್ಡದಾದ ಅಂಡಾಕಾರದ ‘ಬೋರೆಹಣ್ಣು’ ಅಥವಾ ಜುಜುಬೆ ಫ್ರುಟ್ ಕೂಡ...

0

ದಕ್ಷಿಣೇಶ್ವರದ ಕಾಳಿ ಮಂದಿರ

Share Button

ಕೊಲ್ಕತ್ತಾದಿಂದ 12 ಕಿ.ಮೀ ದೂರದಲ್ಲಿರುವ ದಕ್ಷಿಣೇಶ್ವರದಲ್ಲಿ, ಪ್ರಸಿದ್ಧವಾದ ಕಾಳಿಕಾಮಾತೆಯ ಮಂದಿರವಿದೆ. ರಾಣಿ ರಾಸಮಣಿಯು, ತನಗೆ ಕನಸಿನಲ್ಲಿ ಕಾಳಿಕಾಮಾತೆಯ ಆದೇಶವಾದ ಮೇರೆಗೆ, ಹೂಗ್ಲಿ ನದಿ ದಂಡೆಯಲ್ಲಿ , 1847-1855 ರ ಅವಧಿಯಲ್ಲಿ ಮನೋಹರವಾದ ಈ ಮಂದಿರವನ್ನು ಕಟ್ಟಿಸಿದಳು. ಬಂಗಾಳಿ ವಾಸ್ತುವಿನ್ಯಾಸದ ಪ್ರಕಾರ ನವರತ್ನಗಳನ್ನು ಸೂಚಿಸುವ, ಒಂಭತ್ತು ಗೋಪುರಗಳಿರುವ ಮಂದಿರವು...

3

ರುಚಿಗೊಪ್ಪುವ ಬಸಳೆಸೊಪ್ಪಿನ ತಿನಿಸುಗಳು

Share Button

  ಕರಾವಳಿ ಹಾಗೂ ಮಲೆನಾಡಿನ ಜನರಿಗೆ ಬಸಳೆಯ ಅಡುಗೆಗಳೆಂದರೆ ಬಲು ಇಷ್ಟ. ಹೆಚ್ಚಿನವರ  ಮನೆಯಂಗಳದಲ್ಲಿ ಬಸಳೆ ಬಳ್ಳಿಯ ಚಪ್ಪರವಿರುತ್ತದೆ.  ಮಳೆಗಾಲದಲ್ಲಿ  ಬಸಳೆಯ ದಂಟನ್ನು ನೆಟ್ಟು, ಸ್ವಲ್ಪ ಹಟ್ಟಿಗೊಬ್ಬರ ಹಾಕಿ ಬೆಳೆಸಿ,  ಪುಟ್ಟ ಚಪ್ಪರಕ್ಕೆ ಬಳ್ಳಿಯನ್ನು  ಹಬ್ಬಿಸಿದರೆ, ವರ್ಷವಿಡೀ ತಾಜಾ ಬಸಳೆ ಸೊಪ್ಪು  ಅಡುಗೆಗೆ ಲಭ್ಯವಾಗುತ್ತದೆ.  ಪಟ್ಟಣಗಳಲ್ಲಿ ವಾಸಿಸುವವರೂ...

3

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 6

Share Button

ವೈಷ್ಣೋದೇವಿ- ಸಂಜೆ ನಡೆಯುವ ವಿಶೇಷ ಪೂಜೆ ‘ಸಂಜಿ ಚಾಟ್’  ಹೆಲಿಪ್ಯಾಡ್ ನಿಂದ ಮಾತಾಮಂದಿರಕ್ಕೆ  2.5  ಕಿ.ಮೀ ನಡಿಗೆ. ಶೌಚಾಲಯ, ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆಗಳುಳ್ಳ  ಅಚ್ಚುಕಟ್ಟಾದ ಕಾಲುದಾರಿಯಿದೆ. ಈ ದಾರಿಯಲ್ಲಿಯೂ ಬೇಕಿದ್ದವರಿಗೆ  ಕುದುರೆಗಳೂ ಲಭ್ಯವಿವೆ. ಸುತ್ತಲಿನ ಪ್ರಕೃತಿ, ಪ್ರಪಾತಗಳನ್ನು ವೀಕ್ಷಿಸುತ್ತಾ ನಡೆಯುವಾಗ, ಈ ದುರ್ಗಮ ಬೆಟ್ಟದಲ್ಲಿ...

9

ಕಟ್ಮಂಡು ಕಣಿವೆಯಲ್ಲಿ…ನಮೋ ಪಶುಪತಿನಾಥ!

Share Button

2011 ರ ಡಿಸೆಂಬರ್ ತಿಂಗಳಿನಲ್ಲಿ, ಹಿಮಾಲಯದ  ನಿಸರ್ಗ ಸಿರಿಯ ಮಡಿಲಿನಲ್ಲಿರುವ ನೇಪಾಳದ ಕಟ್ಮಂಡುವಿಗೆ ಹೋಗಿದ್ದೆವು.  ಡಿಸೆಂಬರ್ ನ ಚಳಿ ನಡುಕ ಹುಟ್ಟಿಸುತ್ತಿದ್ದರೂ, ಸಂಜೆ ನಗರ ಸುತ್ತಲು ನಮ್ಮ ತಂಡ ಅಣಿಯಾಗುತ್ತಿತ್ತು. ಪಶುಪತಿನಾಥ ದೇವಾಲಯ ಮತ್ತು ಇನ್ನೂ ಕೆಲವು ಸ್ಥಳಗಳನ್ನು ವೀಕ್ಷಿಸಿದೆವು.   ಕಟ್ಮಂಡುವಿನ ಪಶುಪತಿನಾಥ ದೇವಸ್ಥಾನವು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳ. ಬಾಗ್ಮತಿ...

2

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 5

Share Button

ಕಟ್ರಾ ರೈಲ್ವೇ ಸ್ಟೇಷನ್ – ಯಾತ್ರಾರ್ಥಿಗಳ ನೋಂದಣಿ ಅಂತೂ ಬರೋಬರಿ ಏಳು ಗಂಟೆ ತಡವಾಗಿ. ಮಧ್ಯಾಹ್ನ 1230 ಗಂಟೆಗೆ ಕಟ್ರಾ ತಲಪಿತು. ಬೆಟ್ಟಗುಡ್ಡಗಳ ನಡುವೆ ಇರುವ ಕಟ್ರಾ ರೈಲ್ವೇಸ್ಟೇಷನ್ ಬಹಳ ವಿಶಾಲವಾಗಿದ್ದು ಆಧುನಿಕ ಸವಲತ್ತುಗಳನ್ನು ಹೊಂದಿದೆ. ಪ್ಲಾಟ್ ಫಾರ್ಮ್ ನಲ್ಲಿ, ವಿಶ್ರಾಂತಿ ಕೋಣೆಗಳಲ್ಲಿ ಜನ ಅಲ್ಲಲ್ಲಿ ತೂಕಡಿಸುತ್ತಲೋ...

Follow

Get every new post on this blog delivered to your Inbox.

Join other followers: