Tagged: ಪುರಿ-ಡಾರ್ಜಿಲಿಂಗ್ ಪ್ರವಾಸ
18. 5.2019ನೇ ತಾರೀಕು, ಶನಿವಾರದ ಬೆಳಗು…ಯಾಕಾಗಿ ಬೆಳಗಾಯ್ತೋ ಎಂದು ಅನ್ನಿಸುವ ಪ್ರಭಾತ. ಆದರೆ ಜೀವನ ಚಕ್ರವು ಉರುಳಲೇ ಬೇಕಲ್ಲ! ಕಳೆದ ಹತ್ತು ದಿನಗಳು ನಾಗಾಲೋಟದಿಂದ ಓಡಿದ್ದು ತಿಳಿಯಲೇ ಇಲ್ಲ. ಪ್ರೀತಿಯ ಸಹ ಪ್ರವಾಸೀ ಬಂಧುಗಳನ್ನು ಅಗಲುವ ಸಮಯ. ತಮ್ಮ ತಮ್ಮ ಕುಟುಂಬದ ಜೊತೆ ಅನುಕೂಲಕ್ಕೆ ತಕ್ಕಂತೆ ರೈಲು...
ಸುಂದರ ಸೂರ್ಯೋದಯ ಮೇ17ನೇ ತಾರೀಕು.. ನಮ್ಮ ಪ್ರವಾಸದ ಹತ್ತನೇ ದಿನ..ಕೊನೆಯ ದಿನ! ಪ್ರವಾಸಿ ಬಂಧುಗಳೆಲ್ಲರೂ ಅದಾಗಲೇ ಒಬ್ಬರಿಗೊಬ್ಬರು ತುಂಬಾ ಆತ್ಮೀಯರಾಗಿ ಬಿಟ್ಟಿದ್ದೆವು. ಯಾರಿಗಾದರೂ ಆರೋಗ್ಯ ಸರಿಯಿಲ್ಲವೆಂಬ ಸುದ್ದಿ ರಾತ್ರೋರಾತ್ರಿ ತಿಳಿದರೂ, ಎಲ್ಲರೂ ಸ್ಪರ್ಧೆಯಲ್ಲಿ ತಮ್ಮಲ್ಲಿರುವ ಔಷಧಿ ಪೊಟ್ಟಣಗಳನ್ನು ಒಯ್ದು ಒಯ್ದು ಕೊಡುತ್ತಿದ್ದೆವು. ಬೆಳಿಗ್ಗೆ ಮತ್ತು ರಾತ್ರಿ ತಿಂಡಿ,...
ಮಕ್ಕಳ ನಗೆ ನಾಟಕದ ನೋಟ ಪೂರ್ವ ಹಿಮಾಲಯ ಪರ್ವತ ಪ್ರದೇಶದ ಸಂರಕ್ಷಿತ ಇಂಡೋ-ಚೀನಾ ಗಡಿಯಾದ ನಾಥುಲಾ ಪಾಸ್ ನಲ್ಲಿ ಕಳೆದ ಅಮೂಲ್ಯ ಸಮಯವು ನಮ್ಮೆಲ್ಲರಿಗೂ ಜೀವನದಲ್ಲಿ ಎಂದೆಂದಿಗೂ ಮರೆಯಲಾಗದ ಅದ್ಭುತ ಅನುಭವವಾಗಿ ಉಳಿಯಿತು. ಶರೀರದಲ್ಲಿ ಧರಿಸಿದ್ದ ಬಾಡಿಗೆಯ ಭಾರವಾದ ಚಳಿ ಉಡುಪುಗಳನ್ನು ಹಿಂತಿರುಗಿಸಿ, ಪರ್ವತದ ಇಳಿಜಾರು, ಕ್ಲಿಷ್ಟ ತಿರುವು ರಸ್ತೆಯಲ್ಲಿ ಇಳಿದು...
ಪರ್ವತದ ತಪ್ಪಲಲ್ಲಿ.. ‘ಅರ್ಜುನ ಸನ್ಯಾಸಿ’ ತಾಳಮದ್ದಳೆಯ ಅಭೂತಪೂರ್ವ ಯಶಸ್ಸಿನಿಂದಾಗಿ ತಂಡವು ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾಯಿತು. ರಾತ್ರಿಯ ಮೃಷ್ಟಾನ್ನ ಭೋಜನದ ಸಮಯ ಬಾಲಣ್ಣನವರು ಮರುದಿನದ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಎಲ್ಲರಲ್ಲೂ ಪುಳಕ! ಯಾಕೆ ಗೊತ್ತಾ? ಚೀನಾ-ಭಾರತ ಗಡಿಭಾಗದ ನಾಥೂ ಲಾ ಪಾಸ್ ಗೆ ಭೇಟಿ ನಿಗದಿಯಾಗಿತ್ತು. ಅಲ್ಲಿಯ ಭೇಟಿಗೆ ಅನುಮತಿ ಸಿಗುವುದು ತುಂಬಾ ಕಷ್ಟವಾಗಿದ್ದರಿಂದ...
ತಾಳಮದ್ದಳೆಯಲಿ ತೇಲಿ… ಗಂಟೆ 8:30 ಆಗುತ್ತಾ ಬಂತು. ಸುಮಾರು ಮುಕ್ಕಾಲಂಶ ಸಹ ಪ್ರವಾಸಿ ಬಂಧುಗಳ ಆಗಮನವಾಗಿದ್ದರಿಂದ ತಾಳಮದ್ದಳೆ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿಸಿದರು, ಕೇಶವಣ್ಣ. ನಮ್ಮ ಚೆಂಡೆಗಾಗಿ ತಯಾರಾಗುತ್ತಿದ್ದನು, ಬಾಲ ಕಲಾವಿದ ಭಾರ್ಗವ ಕೃಷ್ಣ(ಜ್ಯೋತಿ ಲಕ್ಷ್ಮಿ-ಚಂದ್ರ ಕುಮಾರ್ ದಂಪತಿಗಳ ಪುತ್ರ).. ಅಲ್ಲೇ ಸಿಕ್ಕಿದ ತರಕಾರಿ ಹಚ್ಚುವ ಮರದ...
ಪ್ರಕೃತಿಯ ಮಡಿಲಲ್ಲಿ.. ಸುಂದರ ಜಲಪಾತದ ಸೌಂದರ್ಯ ಸವಿದಾದ ಬಳಿಕ ನಮ್ಮ ಕಾರುಗಳು ಹೂವಿನ ತೋಟದ ಕಡೆಗೆ ಚಲಿಸುತ್ತಿದ್ದಾಗ ತಿಳಿಯಿತು..ಅಲ್ಲಿ ವಾಹನ ಚಾಲನೆ ಎಷ್ಟು ಕಷ್ಟವೆಂದು! ನಮಗೆ ಹೆಚ್ಚೆಂದರೆ U ತಿರುವುಗಳ ಬಗ್ಗೆ ತಿಳಿದಿದೆ. ಆದರೆ ಇಲ್ಲಿ ತುಂಬಾ V ಮೇಲ್ತಿರುವುಗಳು! ಜೊತೆಗೇ ಅತ್ಯಂತ ಕಡಿದಾದ ರಸ್ತೆ. ವಾಹನ...
ಗ್ಯಾಂಗ್ ಟೋಕ್ ನತ್ತ ಗಮನ.. ನಮ್ಮ ರೈಲು ಡಾರ್ಜಿಲಿಂಗ್ ಮೈಲ್ ಸುಮಾರು 650 ಮೈಲುಗಳನ್ನು ದೂರವನ್ನು ಕ್ರಮಿಸಲು ವೇಗವಾಗಿ ಸಾಗುತ್ತಿತ್ತು. ಮೇ 13ನೇ ದಿನ ಬೆಳಗಾಗುತ್ತಾ ಬಂದಂತೆಲ್ಲಾ ಎಲ್ಲರೂ ಎಚ್ಚೆತ್ತು ತಯಾರಾಗುತ್ತಿದ್ದಂತೆ, ನಾವು ಇಳಿಯಬೇಕಾದ ಪಶ್ಚಿಮ ಬಂಗಾಳದ ದೊಡ್ಡ ಪಟ್ಟಣವಾದ ಜಲ್ ಪಾಯ್ ಗುರಿ ನಿಲ್ದಾಣ ಎಷ್ಟು...
ಕೋಲ್ಕತ್ತ ಬಾಜಾರಿನತ್ತ.. ಮಧ್ಯಾಹ್ನದ ಸುಗ್ರಾಸ ಭೋಜನವನ್ನು ಸವಿದು, ಮುಂದಿನ ನಮ್ಮ ಕಾರ್ಯಕ್ರಮದಂತೆ ಕೋಲ್ಕತ್ತದ ಪ್ರಸಿದ್ಧ ಸೈನ್ಸ್ ಸಿಟಿಗೆ ಹೋಗಲು ಎಲ್ಲರೂ ಸಿದ್ಧರಿದ್ದರೂ, ಆ ಸಂಜೆ ಅಲ್ಲಿ ಖರೀದಿಯ ಅವಕಾಶವನ್ನೂ ನೀಡಲಾಯಿತು. ಊರಿನಿಂದ ಅಷ್ಟು ದೂರ ಬಂದು, ನೆನಪಿಗೋಸ್ಕರವಾದರೂ ಅಲ್ಲಿಯ ಪ್ರಸಿದ್ಧ ಹತ್ತಿ, ರೇಶ್ಮೆ ಬಟ್ಟೆಗಳ ಖರೀದಿ ಆಗಬೇಕಿತ್ತಲ್ಲಾ.....
ಬೇಲೂರು ಮಠದ ಸೊಗಸು ಹೂಗ್ಲಿ ನದಿಯಲ್ಲಿ ನಡೆದ ದೋಣಿ ವಿಹಾರ, ಸುಖಾಂತ್ಯವಾದ ಪರ್ಸಿನ ಘಟನೆ..ಎಲ್ಲವನ್ನೂ ಮೆಲುಕು ಹಾಕುತ್ತಾ ಬೇಲೂರು ಮಠ ತಲಪಿದಾಗ ಮಧ್ಯಾಹ್ನ ಗಂಟೆ ಹನ್ನೊಂದು. ಬಿಸಿಲ ಝಳಕ್ಕೆ ಬೆಂಡಾಗಿ ಹೋಗಿದ್ದ ನಾವೆಲ್ಲರೂ, ಮಠದ ಆವರಣದೊಳಗೆ ಸೊಂಪಾಗಿ ಬೆಳೆದ ಮರದ ನೆರಳಿನ ಕೆಳಗೆ ಆಶ್ರಯ ಪಡೆದೆವು. ಹಾಂ..ಆಗಲೇ...
ಕಿಸೆಗಳ್ಳರ ಕಿತಾಪತಿ..! ಅದಾಗಲೇ ಬೆಳಗ್ಗಿನ ಗಂಟೆ ಒಂಭತ್ತೂವರೆ..ಬಿಸಿಲ ಶಾಖ ಏರುತ್ತಲೇ ಇತ್ತು. ಇತ್ತ ನಾವು ಕಾಳಿ ದೇಗುಲದ ಆವರಣದಲ್ಲಿ ಬಾಲಣ್ಣನವರಿಗಾಗಿ ಕಾದು ಕುಳಿತಿದ್ದಾಗ ಯಾರೋ ಅಂದರು..”ಅನತಿ ದೂರದಲ್ಲೇ ನದಿ ಇದೆ, ಹೋಗಿ ನೋಡಿ ಬರಬಹುದಿತ್ತು”. ಸರಿಯೆಂದು ಅಲ್ಲಿದ್ದ ಸ್ವಲ್ಪ ಮಂದಿ ಎದ್ದು ಹೊರಟಾಗಲೇ ಗಣೇಶಣ್ಣನ ಬುಲಾವ್ ಬಂತು..”ಎಲ್ರೂ...
ನಿಮ್ಮ ಅನಿಸಿಕೆಗಳು…