ಲಹರಿ

ಸುರಳಿ ಹೂವು (ಸುಗಂಧಿ ಹೂವು)

Share Button

-Sughandi_pushpa

ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಚೆಲುವಾದ ಹೂವು ಸುಗಂಧಿ ಹೂವು.ಇದನ್ನು ಸುರಳಿ ಹೂವು ಎಂದೂ ಕರೆಯುತ್ತಾರೆ.ನವಿರಾದ ಸುವಾಸನೆಯುಳ್ಳ ಈ ಹೂವಿನ ಮೂಲವು ಹಿಮಾಚಲ ಪ್ರದೇಶ.ಇದರ ಸಸ್ಯಶಾಸ್ತ್ರೀಯ ಹೆಸರು ಹೆಡಿಕಿಯಂ ಕಾರ್ಯನೆರಿಯಮ್.

3-4  ಅಡಿಯಸ್ಟು ಎತ್ತರ ಬೆಳೆಯುವ ಮೂಲಿಕೆಯ ಸಸ್ಯ ಇದಾಗಿದ್ದು,ಉದ್ದುದ್ದ ಎಲೆಗಳು ಪರ್ಯಾಯವಾಗಿ ಜೋಡನೆಗೊಂಡು ನೋಡಲು ತುಂಬಾ ಸುಂದರವಾಗಿದೆ.ಇದರ ಗಡ್ಡೆಗಳು ತೇವಾಂಶವಿರುವ ಜವಗು ಮಣ್ಣಿನಲ್ಲಿ ಚೆನ್ನಾಗಿ ಬೆಳೆದು ಎಲ್ಲಾ ಕಾಲಗಳಲ್ಲೂ ಹೂವು ಬಿಡುತ್ತದೆ.ಇದು ಕ್ಯೂಬಾ ದೇಶದ ರಾಷ್ರೀಯ ಪುಷ್ಪ.

ಗಾಳಿ ಬೀಸಿದಾಗ ಈ ಹೂವುಗಳು ಚಿಟ್ಟೆ ಹಾರಿದಂತೆ ಭಾಸವಾಗುವುದರಿಂದ ಇದು ಬಟರ್ ಫ಼್ಲೈ ಫ಼್ಲವರ್ ಎಂದೂ ಕರೆಯಲ್ಪಡುತ್ತದೆ.

 

Surali lower

 

ನಮ್ಮ ಚಿಕ್ಕಂದಿನ ದಿನಗಳಲ್ಲಿ, ಸದಾ ತುಂಬಿರುವ ಕೆರೆಗಳ ಸುತ್ತಲೂ ಹಾಗೂ ಅಡಿಕೆ ತೋಟದಲ್ಲಿ ಅಲ್ಲಲ್ಲಿ ಈ ಹೂವು ವರ್ಷವಿಡೀ ಸಿಗುತ್ತಿತ್ತು.ನಮ್ಮ್ಹಹಳ್ಳಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಕಾಲವದು.ಬೆನ್ನುದ್ದ ಹರಿದಾಡುವ ದಪ್ಪ ಜಡೆ ಹೆಣೆಯುತ್ತಿದ್ದರು ಮನೆಯಲ್ಲಿದ್ದ ನಮ್ಮತ್ತೆ. ಅದರ ಮೇಲೆ ತಲೆಯೇ ಕಾಣದಷ್ಟು ದಪ್ಪಕ್ಕೆ ಸುರುಳಿ ಹೂವಿನ ಮಾಲೆಯನ್ನು ಕಿರೀಟದಂತೆ ಮುಡಿಸಲಾಗುತ್ತಿತ್ತು..!! ಸಂಭ್ರಮದಿಂದ ಶಾಲೆಗೆ ಹೋಗುತ್ತಿದ್ದೆ ಸುಗಂಧಿ ಹೂವಿನ ಪರಿಮಳ ಹೊತ್ತು.

ಈಗ ಪೇಟೆಯಲ್ಲಿ ಇರುವ ಪುಟ್ಟ ಜಾಗದಲ್ಲೇ ಈ ಸುರುಳಿ ಹೂವಿನ ಸುಗಂಧ ಸ್ವಲ್ಪ ಸ್ವಲ್ಪವೇ ಹರಡಿ ನಿಂತಿದೆ…

.

– ಶಂಕರಿ ಶರ್ಮ, ಪುತ್ತೂರು.

9 Comments on “ಸುರಳಿ ಹೂವು (ಸುಗಂಧಿ ಹೂವು)

  1. ನಮ್ಮಜ್ಜಿ ಬಾಳೆಯ ಬಳ್ಳಿಯಲ್ಲಿ ಕಟ್ಟಿ ಬಾಳೆಯಲ್ಲಿ ಸುರುಟಿ ಮೇಲಷ್ಟು ನೀರು ಹನಿಸಿ ಕೊಡುತ್ತಿದ್ದ ಸುರುಳಿ ಹೂವಿನ ಪುಟ್ಟ ಕಿರೀಟ ನೆನಪಾಯಿತು.. 🙂

  2. ನಮ್ಮ ತೋಟದಲ್ಲಿ ತಿಳಿಹಳದಿ ಬಣ್ಣದ ಸುಗಂಧಿಹೂ ಬಿಡುತ್ತಿತ್ತು.

  3. ಸುಗಂಧಿ ಹೂವಿನ ಬಗೆಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.

  4. ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ತುಂಬಾ ಧನ್ಯವಾದಗಳು…

  5. ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು…

Leave a Reply to Vijaya Seetharam Mehendale Cancel reply

 Click this button or press Ctrl+G to toggle between Kannada and English

Your email address will not be published. Required fields are marked *